ಇಂಡಿಯಾ ಕೂಟ ಎಷ್ಟು ಸೀಟು ಎಂದು ಕೇಳಿದಾಗ ರಾಹುಲ್ ನೀಡಿದ್ದು ತಮಾಷೆಯ ಉತ್ತರ!

rahul
Published on

ಹೊಸದಿಲ್ಲಿ: ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಎನ್‌ಡಿಎ ಮ್ಯಾಜಿಕ್‌ ನಂಬರ್​ ದಾಟುವುದಾಗಿ ಹೇಳಿದ್ದರೂ, ಗೆಲುವು ನಮ್ಮದೇ, ಇದು ನಮ್ಮ ‘ಜನರ ಸಮೀಕ್ಷೆ’ ಎಂದು ಕಾಂಗ್ರೆಸ್‌ ಹೇಳುತ್ತಿದೆ.

ಇದೇ ಹಿನ್ನೆಲೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಎಷ್ಟು ಸೀಟು ಗೆಲ್ಲಲಿದೆ ಎಂಬ ಪ್ರಶ್ನೆಗೆ ಆ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ತಮಾಷೆಯ ಉತ್ತರ ನೀಡಿದ್ದಾರೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾರ "295" ಟ್ರ್ಯಾಕ್ ಅನ್ನು ಉಲ್ಲೇಖಿಸಿದ್ದಾರೆ. "ಸಿದ್ದು ಮೂಸೆವಾಳ ಹಾಡು ಕೇಳಿದ್ದೀರಾ" ಎಂದು ಕೇಳಿ 295 ಸೀಟು... ಎಂದರು.

ಇನ್ನು ಎಕ್ಸಿಟ್ ಪೋಲ್‌ಗಳ ಕುರಿತು ಮಾತನಾಡಿದ ಅವರು, ಅವು ಎಕ್ಸಿಟ್ ಪೋಲ್‌ಗಳಲ್ಲ, ಮೋದಿ ಅವರು ಮಾಧ್ಯಮ ಸಮೀಕ್ಷೆ ಮತ್ತು ಅವರು ಫ್ಯಾಂಟಸಿ ಫೂಲ್ ಎಂದು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ವಕ್ತಾರ ಜೈರಾಮ್ ರಮೇಶ್ ಅವರು ಎಕ್ಸಿಟ್ ಪೋಲ್‌ಗಳನ್ನು ಟೀಕಿಸಿದ್ದರು. ಅವರು ಅದನ್ನು ಮಾನಸಿಕ ಆಟ ಎಂದು ತಳ್ಳಿಹಾಕಿದರು.

ಜೂನ್ 4ರಂದು ಮೋದಿ ಪದಚ್ಯುತಿ ಖಚಿತವಾಗಿದ್ದು, ಎಕ್ಸಿಟ್ ಪೋಲ್ ಮೂಲಕ ಅದನ್ನು ನಿಭಾಯಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ಜೂನ್ 4ರಂದು ಪ್ರಕಟವಾಗುವ ಫಲಿತಾಂಶಕ್ಕೂ ಎಕ್ಸಿಟ್ ಪೋಲ್‌ಗಳಿಗೂ ತುಂಬಾ ಭಿನ್ನವಾಗಿರುತ್ತದೆ. ಶನಿವಾರ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಗೆಲ್ಲಬೇಕಾದ ಸ್ಥಾನಗಳ ಕುರಿತು ಸಮಗ್ರ ಚರ್ಚೆ ನಡೆದಿದ್ದು, ಯಾವುದೇ ಸಂದರ್ಭದಲ್ಲೂ ‘ಇಂಡಿಯಾ’ ಮೈತ್ರಿಕೂಟ 295ಕ್ಕಿಂತ ಕಡಿಮೆ ಸ್ಥಾನ ಪಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಏತನ್ಮಧ್ಯೆ, ಜೂನ್ 4 ರಂದು ಮತ ಎಣಿಕೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 4.30 ಕ್ಕೆ ನವದೆಹಲಿಯ ನಿರ್ವಾನ್ ಸದನ್‌ನಲ್ಲಿ 'ಇಂಡಿಯಾ' ಮೈತ್ರಿಕೂಟದ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net