ಬಿಸಿಲಿನ ತಾಪ ತಾಳದೆ ಮರದಡಿ ಕುಳಿತ್ತಿದ್ದವರ ಮೇಲೆ ಹರಿದ ಪಿಕಪ್ ವಾಹನ: ನಾಲ್ವರು ಸ್ಥಳದಲ್ಲೇ ಮೃತ್ಯು

jeep
Published on

ಲಖನೌ (ಉತ್ತರ ಪ್ರದೇಶ): ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ಕುಳಿತ್ತಿದ್ದವರ ಮೇಲೆ ಪಿಕಪ್ ವಾಹನ ಹರಿದು ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಕೊತ್ವಾಲಿ ಬಿಸೌಲಿ ಪ್ರದೇಶದ ಪೈಗಂ ಭಿಕಂಪುರದಲ್ಲಿ ನಡೆದಿದೆ.

ಪ್ರಕಾಶ್ (42), ಬ್ರಹ್ಮಪಾಲ್ (35), ಧನಪಾಲ್ (55), ಜ್ಞಾನ್ ಸಿಂಗ್ (40) ಮೃತಪಟ್ಟವರು.

ತೀವ್ರ ಬಿಸಿಲಿನಿಂದಾಗಿ 6 ಜನರು ಮರದ ಕೆಳಗೆ ನಿರ್ಮಿಸಲಾಗಿದ್ದ ಟೆಂಟ್‍ನಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಪಿಕಪ್ ವಾಹನ ಮೇಲೆ ಹರಿದಿದೆ. ಇದರಿಂದಾಗಿ ಸ್ಥಳದಲ್ಲಿ ನಾಲ್ವರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net