More

    ದೇವಭೂಮಿಯಲ್ಲಿ ತಲೈವಾ..ಹಿಮಾಲಯದಲ್ಲಿ ರಜನಿಕಾಂತ್​ ಹೋಗಿದ್ದೆಲ್ಲಿಗೆ?

    ನವದೆಹಲಿ: ನಟನಾಗಿ ಎಷ್ಟೇ ಬ್ಯುಸಿ ಇದ್ದರೂ ತಲೈವಾ ರಜನಿಕಾಂತ್ ಅವಕಾಶ ಸಿಕ್ಕಾಗಲೆಲ್ಲ ಹಿಮಾಲಯಕ್ಕೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಮನಶ್ಶಾಂತಿಗಾಗಿ ಅಲ್ಲಿ ಕೆಲವು ದಿನಗಳನ್ನು ಧ್ಯಾನದಲ್ಲಿ ಕಳೆಯುತ್ತಾರೆ.

    ಇದನ್ನೂ ಓದಿ: ಕರ್ನಾಟಕಕ್ಕೆ ನೈರುತ್ಯ ಮುಂಗಾರು ಆಗಮನ – ಮಳೆಯಿಂದಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

    ರಜನಿಕಾಂತ್​ ಮೇ 29ರಂದು ಉತ್ತರಾಖಂಡಕ್ಕೆ ತೆರಳಿ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉತ್ತರಾಖಂಡ ಪೊಲೀಸರು ಅವರನ್ನು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ರಜನಿಕಾಂತ್ ಕೇದಾರನಾಥದಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ಇದೇ ಸಂದರ್ಭದಲ್ಲಿ ಉತ್ತರಾಖಂಡ ಪೊಲೀಸರು ರಜನಿಕಾಂತ್ ಅವರನ್ನು ಸನ್ಮಾನಿಸಿದರು. ಪೊಲೀಸರು ಎಕ್ಸ್​ ನ ತಮ್ಮ ಅಧಿಕೃತ ಹ್ಯಾಂಡಲ್ ನಲ್ಲಿ ರಜನಿಕಾಂತ್​ ಅವರ ಜೊತೆಗೆ ಇರುವ ಫೋಟೋಗಳನ್ನು ಶೇರ್​ ಮಾಡಿದ್ದು, ಪೋಟೋಗಳನ್ನು ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.

    ಶ್ರೀ ಬದರಿನಾಥ ದರ್ಶನಕ್ಕಾಗಿ ದೇವಭೂಮಿಗೆ ಆಗಮಿಸಿದ ರಜನಿಕಾಂತ್ ಜಿ ಅವರಿಗೆ ಸ್ವಾಗತ ಮತ್ತು ಅಭಿನಂದನೆಗಳು ಎಂದು ಪೊಲೀಸರು ಪೋಸ್ಟ್​ನಲ್ಲಿ ಹಾಕಿಕೊಂಡಿದ್ದರೆ, ಶ್ರೀ ಬದರಿನಾಥ ಧಾಮದ ದರ್ಶನದಿಂದ ಪುಳಕಿತನಾಗಿದ್ದೇನೆ ಎಂದು ರಜನಿಕಾಮತ್​ ತಿಳಿಸಿದರು. ಅವರು ಲೋಕಕಲ್ಯಾಣ ಮತ್ತು ದೇಶದ ಸಮೃದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ.

    ಚುನಾವಣೋತ್ತರ ಸಮೀಕ್ಷೆ ಪ್ರಕಾರ ಅಣ್ಣಾಮಲೈಗೆ ಸೋಲು!

    See also  ಕೋಳಿ ಫಾರಂಗೆ ನುಗ್ಗಿ 200 ಕೋಳಿಗಳನ್ನು ತಿಂದು ಮುಗಿಸಿದ ಚಿರತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts