ನವದೆಹಲಿ: ನಟ ಸಿದ್ಧಾರ್ಥ್ ಮಲ್ಹೋತ್ರಾ ದೆಹಲಿಯಲ್ಲಿ ನಡೆದ ಫ್ಯಾಷನ್ ಶೋನಲ್ಲಿ ರಾಂಪ್‌ನಲ್ಲಿ ಅಲಿಸಿಯಾ ಕೌರ್‌ನೊಂದಿಗೆ ಹಾಟ್ ಮತ್ತು ಬೋಲ್ಡ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದು, ಇದರ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಇದನ್ನೂ ನೋಡಿ: ‘ನಾವು ಎಲ್ಲಿ, ಹೇಗೆ ಭೇಟಿಯಾದೆವು ಎಂಬುದಕ್ಕಿಂತ’.. ಶೋಭಿತಾ ಧೂಳಿಪಾಲ ಫಸ್ಟ್ ಕಾಮೆಂಟ್ ಹೀಗಿದೆ ನೋಡಿ..
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ವಾಕ್ ಮಾಡುವಾಗ ಮಾಡೆಲ್ ಅಲಿಸಿಯಾ ಕೌರ್ ಅವರೊಂದಿಗೆ ಕಾಣಿಸಿಕೊಂಡಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಇವರಿಬ್ಬರು ಬೋಲ್ಡ್ ಆಗಿ ವರ್ತಿಸಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಅಂತರ್ಜಾಲದಲ್ಲಿ ಸಾಕಷ್ಟು ಬಝ್ ಅನ್ನು ಸೃಷ್ಟಿಸಿದೆ.
ಸಿದ್ಧಾರ್ಥ್ ರಾಂಪ್‌ನಲ್ಲಿ ಅಲಿಸಿಯಾಳೊಂದಿಗೆ ಮೋಹಕ ಭಂಗಿಗಳಲ್ಲಿ ಇರುವುದನ್ನು ಕಾಣಬಹುದು. ಆತ ಸ್ಟೇಜ್ಮೇಲೆ ಬರುತ್ತಿದ್ದಂತೆ ಅಲಿಸಿಯಾ ರೊಮ್ಯಾಂಟಿಕ್ ಆಗಿ ಕೊರಳಪಟ್ಟಿ ಹಿಡಿದು ಮೇಲೆ ಎಳೆದುಕೊಳ್ಳುತ್ತಾಳೆ. ಬಳಿಕ ಸಿದ್ಧಾರ್ಥ್ ಮತ್ತು ಮಾಡೆಲ್ ಇಬ್ಬರೂ ರ‍್ಯಾಂಪ್ ಮೇಲೆ ಪೋಸ್ ನೀಡುತ್ತಿದ್ದಂತೆ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ. ಮಾಡೆಲ್ ನಟನನ್ನು ಬಿಗಿಯಾಗಿಡಿದು ಸೊಂಟ ಬಳುಕಿಸುತ್ತಾಳೆ.
ಸಿದ್ಧಾರ್ಥ್ ಕಪ್ಪು ಟುಕ್ಸೆಡೊದಲ್ಲಿ ಮನಸೂರೆಗೊಳ್ಳುವಂತೆ ಕಾಣುತ್ತಿದ್ದು, ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ನೆಟಿಜನ್‌ಗಳು ಸಿದ್ಧಾರ್ಥ್ ಅವರ ಪತ್ನಿ ಕಿಯಾರಾ ಅಡ್ವಾಣಿ ಬಗ್ಗೆ ತಮಾಷೆ ಮಾಡಿದ್ದಾರೆ.
“ಸಿದ್ಧಾರ್ಥ್ ಭಾಯ್ ಆಪ್ಕೊ ಘರ್ ಭಿ ಜನ ಹೆಚ್ ತೋ ಥೋಡಾ ಸಂಭಾಲ್ ಕೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಕಿಯಾರಾ ಮೂಲೆಯಲ್ಲಿ ಅಳುತ್ತಾಳೆ” ಎಂದು ಬರೆದಿದ್ದಾರೆ.
“ಕಿಯಾರಾ ಕೋಲು ಹಿಡಿದು ಮನೆಯಲ್ಲಿ ಕಾಯುತ್ತಿದ್ದಾರೆ” ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ.