ಹೈದರಾಬಾದ್: ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ನಟಿ ಶೋಭಿತಾ ಧೂಳಿಪಾಲ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಮೊದಲ ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ: ‘ಆತ ನಿನ್ನನ್ನು ದುಬೈ ಶೇಕ್ಗೆ ಮಾರಿಬಿಡ್ತಾನೆ ಎಚ್ಚರ’: ತಾಪ್ಸಿಗೆ ಈ ಎಚ್ಚರಿಕೆ ನೀಡಿದ್ದಾದರೂ ಯಾರು? ಯಾಕೆ?
ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿರುವ ಅವರು, ನಮ್ಮ ಪರಿಚಯ ಹೇಗೆ? ಎಲ್ಲಿ ಪ್ರಾರಂಭವಾಯಿತು ಎಂಬುದು ಮುಖ್ಯವಲ್ಲ. ಆದರೆ ನಮ್ಮ ಹೃದಯಗಳು ಪ್ರೀತಿಯಲ್ಲಿ ಬೆಸೆದುಕೊಂಡಿವೆ. ಅವು ಪರಸ್ಪರ ಮಿಡಿಯುತ್ತಿವೆ ಎಂದು ನಾಗ ಚೈತನ್ಯ ಅವರನ್ನು ಉದ್ದೇಶಿಸಿ ಶೀರ್ಷಿಕೆ ನೀಡಿದ್ದಾರೆ.
ನಾಗಚೈತನ್ಯ-ಶೋಭಿತಾ ಗುರುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಾರ್ಯಕ್ರಮ ಬೆಳಗ್ಗೆ 9:42 ಕ್ಕೆ ನಡೆಯಿತು ಎಂದು ನಾಗಾರ್ಜುನ್ ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಬಳಿಕ ಅವು ಕೆಲವೇ ಸಮಯದಲ್ಲಿ ವೈರಲ್ ಆದವು.
ಆದರೆ ಭವಿಷ್ಯದ ಜೋಡಿ ಏನು ಪೋಸ್ಟ್ ಮಾಡುತ್ತದೆ ಎಂದು ನೋಡಲು ಇಬ್ಬರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಸೋಭಿತಾ ಅವರ ಪೋಸ್ಟ್ ಅನ್ನು ನಾಗ ಚೈತನ್ಯ ಅವರು ಮರು ಪೋಸ್ಟ್ ಮಾಡಿದ್ದಾರೆ. ಅನೇಕ ಸಿನಿ ಸೆಲೆಬ್ರಿಟಿಗಳು ಮತ್ತು ನೆಟಿಜನ್‌ಗಳು ಅವರಿಗೆ ಅಭಿನಂದನೆ ಸಲ್ಲಿಸುತ್ತ, ಭವಿಷ್ಯ ಸುಖಕರವಾಗಿರಲಿ ಎಂದು ಹರಸುತ್ತಿದ್ದಾರೆ.