ನಾನು ತಿರಸ್ಕರಿಸಿದ ಸಿನಿಮಾ ಮಾಡಿದ್ರೆ ಸ್ಟಾರ್​​ ನಟನಾಗುತ್ತಿದ್ದೆ; ನಟ ಸಿದ್ಧಾರ್ಥ್​​ ಹೀಗೇಳಿದ್ದೇಕೆ? | Siddharth

blank

ಹೈದರಾಬಾದ್​​​: ‘ಬಾಯ್ಸ್’, ‘ನುವುವೋಸ್ತಾನಂಟೆ ನೆನೊಡ್ಡಂತಾನಾ’, ‘ರಂಗ್ ದೇ ಬಸಂತಿ’ಯಂತಹ ಹಿಟ್​ ಸಿನಿಮಾಗಳಲ್ಲಿ ಅಭಿನಯಿಸಿದ ನಟ ಸಿದ್ದಾರ್ಥ(Siddharth) ಅವರನ್ನು ಪರಿಚಯಿಸುವ ಅಗತ್ಯ ಇಲ್ಲ. ಅವರ ಸಿನಿಮಾದ ಕೆಲವೊಂದು ಡೈಲಾಗ್​ ಇಂದಿಗೂ ಮೊಬೈಲ್​ನಲ್ಲಿ ಹರಿದಾಡುತ್ತಿರುತ್ತವೆ, ನಟ ಸಿದ್ಧಾರ್ಥ್​​ ತನ್ನ ವೃತ್ತಿಜೀವನದಲ್ಲಿ ಬಂದಂತಹ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದರೆ ಇಂದಿಗೆ ದೊಡ್ಡ ಸ್ಟಾರ್​ ಆಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಮೂಗಿನ ಸರ್ಜರಿ-ಲಿಪ್​ ಫಿಲ್ಲರ್​​ ಕುರಿತು ಮೌನಮುರಿದ ಶ್ರೀದೇವಿ ಮಗಳು; ಖುಷಿ ಕಪೂರ್​ ಹೇಳಿದ್ದೇನು? | Khushi Kapoor

ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದ ನಟ ಸಿದ್ಧಾರ್ಥ್​​ ತಾನು ಓದದೇ ಇರುವ ಪುಸ್ತಕಗಳು ಮತ್ತು ಮಾಡದೇ ಇರುವ ಸಿನಿಮಾಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸಮಾರಂಭದಲ್ಲಿ ಸಿದ್ಧಾರ್ಥ್​ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ನಟ, ಒಂದಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದರೆ ದೊಡ್ಡ ಸ್ಟಾರ್ ಆಗುತ್ತಿದ್ದೆ ಎಂದು ಹೇಳಿದ್ದಾರೆ.

ಆದರೆ ನನಗೆ ಸಿನಿಮಾಗಳಲ್ಲಿ ಹುಡುಗಿಯರಿಗೆ ಹೊಡೆಯುವ, ಚುಡಾಯಿಸುವ, ಸೊಂಟ ಗಿಲ್ಲುವ, ಐಟಂ ಹಾಡುಗಳನ್ನು ಹಾಡುವ, ಸಿನಿಮಾದಲ್ಲಿ ಹುಡುಗಿಯರು ಹೇಗಿರಬೇಕು ಎಂದು ಹೇಳುವ ಕೆಲವೊಂದು ಸ್ಕ್ರಿಪ್ಟ್​ಗಳು ಬಂದಿದ್ದವು. ಆದರೆ ಅಂತಹ ಕೆಟ್ಟ ಪಾತ್ರಗಳನ್ನು ಮಾಡಲು ನನಗೆ ಇಷ್ಟವಿಲ್ಲ ಆ ಸಿನಿಮಾಗಳನ್ನು ನಾನು ತಿರಸ್ಕರಿಸಿದ್ದೇನೆ. ನಾನು ಅಂತಹ ಕೆಲಸಗಳನ್ನು ಮಾಡಿದ್ದರೆ ದೊಡ್ಡ ಸ್ಟಾರ್ ಆಗುತ್ತಿದ್ದೆ ಎಂದಿದ್ದಾರೆ.

ವೃತ್ತಿಜೀವನದಲ್ಲಿ ನನ್ನ ಬಗ್ಗೆ ಸಾಕಷ್ಟು ಒಳ್ಳೆಯ ವಿಷಯಗಳನ್ನು ಹೇಳುತ್ತಾರೆ. ಇದು ನನಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ. ಇಂದು ಕೆಲವರು ನನಗೆ ಹೆಣ್ಣನ್ನು ಎಷ್ಟು ಗೌರವಿಸುತ್ತೇನೆ, ನನ್ನ ಹೆತ್ತವರೊಂದಿಗೆ ಎಷ್ಟು ಒಳ್ಳೆಯವನಾಗಿದ್ದೆ, ಎಷ್ಟು ಮುದ್ದಾಗಿ ಕಾಣುತ್ತಿದ್ದೆ ಎಂದು ನನ್ನ ಸಿನಿಮಾಗಳ ಬಗ್ಗೆ ಹೇಳುತ್ತಾರೆ. ಅವರ ಮಕ್ಕಳು ಕೂಡ 15 ವರ್ಷಗಳ ಹಿಂದಿನ ನನ್ನ ಸಿನಿಮಾಗಳನ್ನು ನೋಡುತ್ತಾರೆ. ಅದು ನನಗೆ ದೊಡ್ಡ ತೃಪ್ತಿಯನ್ನು ನೀಡುತ್ತದೆ. ಇದಕ್ಕೆ ಕೋಟಿಗಳಲ್ಲಿ ಬೆಲೆ ಕಟ್ಟಲಾಗದು. ನಾನು ತೆರೆಯ ಮೇಲೆ ಅಳಲು ನಾಚಿಕೆಪಡುವುದಿಲ್ಲ ಎಂದು ಹೇಳಿದರು. ಕಳೆದ ವರ್ಷ ‘ಇಂಡಿಯನ್ 2’, ಚಿನ್ನಾ ಸಿನಿಮಾದಲ್ಲಿ ಸಿದ್ಧಾರ್ಥ್​ ಕಾಣಿಸಿಕೊಂಡಿದ್ದರು. ಈಗ ಇಂಡಿಯನ್ 3 ಮತ್ತು ಟೆಸ್ಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.(ಏಜೆನ್ಸೀಸ್​​)

Casting Couch | ಎಲ್ಲವನ್ನೂ ಮಾಡ್ಲೇಬೇಕು..; ಬಣ್ಣದಲೋಕದ ಬಣ್ಣ ಬಿಚ್ಚಿಟ್ಟ ‘ದಂಗಲ್’ ಹುಡುಗಿ ಫಾತಿಮಾ

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…