ಮುಂಬೈ: ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ದಂಗಲ್ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದರು. ದಂಗಲ್ ಚಿತ್ರದಲ್ಲಿ ಗೀತಾ ಪಾತ್ರದಲ್ಲಿ ನಟಿಸಿ ಫೇಮಸ್ ಆದ ಬಳಿಕ ಅಂದಿನಿಂದ ಅವರು ‘ದಂಗಲ್ ಗರ್ಲ್’ ಎಂದು ಕರೆಯಲ್ಪಡುತ್ತಾರೆ. ಫಾತಿಮಾ ಸನಾ ಶೇಖ್ ಬಣ್ಣದ ಲೋಕದಲ್ಲಿ ತಮಗಾದ ಕಾಸ್ಟಿಂಗ್ ಕೌಚ್‌ನ(Casting Couch) ಅಸಹ್ಯಕರ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಫಾತಿಮಾ ಸನಾ ಶೇಕ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಕಹಿ ಅನುಭವಗಳನ್ನು ಎದುರಿಸಬೇಕಾಯಿತು. ಚಲನಚಿತ್ರ ಕಾಸ್ಟಿಂಗ್ ಏಜೆಂಟ್ (ಕಾಸ್ಟಿಂಗ್ ಕೌಚ್) ಸಲಹೆಯ ಮಾತುಗಳನ್ನು ಹೇಳುವ ಮೂಲಕ ತನಗೆ ಹೇಗೆ ಅನಾನುಕೂಲತೆ ಉಂಟುಮಾಡಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ನಾನು ಚಿತ್ರವೊಂದರ ಆಡಿಷನ್‌ಗೆ ಹೋಗಿದ್ದೆ. ನೀವು ಅಲ್ಲಿ ಏನಾದರೂ ಮಾಡಲು ಸಿದ್ಧರಿದ್ದೀರಾ? ಅಂತ ನಿರ್ದೇಶಕರೊಬ್ಬರು ಕೇಳಿದರು. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ, ನನ್ನ ಪಾತ್ರಕ್ಕೆ ಏನು ಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳಿದೆ. ಆದರೆ ಅವನು ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದನು. ನಾನಂತೂ ಎಷ್ಟರಮಟ್ಟಿಗೆ ಇಳಿಯುತ್ತಾನೋ ಗೊತ್ತಿಲ್ಲದಂತೆ ನಡೆದುಕೊಂಡೆ ಎಂದು ಫಾತಿಮಾ ತಮಗಾದ ಕಹಿ ಅನುಭವದ ಬಗ್ಗೆ ಹೇಳಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ಸಿನಿಮಾರಂಗದಲ್ಲೂ ತಮಗೆ ಅಹಿತಕರ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಹೈದರಾಬಾದ್ನಲ್ಲಿ ತಮಗಾದ ಅನುಭವವನ್ನು ನೆನಪಿಸಿಕೊಂಡ ನಟಿ, ಕಾಸ್ಟಿಂಗ್ ಕೌಚ್ ಬಗ್ಗೆ ನಿರ್ಮಾಪಕರು ತುಂಬಾ ಮುಕ್ತವಾಗಿ ಮಾತನಾಡುತ್ತಾರೆ ನಿಮಗೆ ಗೊತ್ತಾ. ಇಲ್ಲಿ ನೀವು ಕೆಲವು ಜನರನ್ನು ಭೇಟಿ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಅದನ್ನು ಅವರು ನೇರವಾಗಿ ಹೇಳುವುದಿಲ್ಲ. ಹೇಗೆ ಹೇಳಿದರೂ ಅದು ಅವರ ಉದ್ದೇಶ ಎಂದು ಗೊತ್ತಾಗುತ್ತಿತ್ತು ಎಂದು ತಿಳಿಸಿದರು.
ಸದ್ಯ ಫಾತಿಮಾ ಸನಾ ಶೇಖ್ ಮೆಟ್ರೋ ಇನ್ ಡಿನೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಫಾತಿಮಾ ಜತೆಗೆ ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಅನುಪಮ್ ಖೇರ್, ನೀನಾ ಗುಪ್ತಾ, ಪಂಕಜ್ ತ್ರಿಪಾಠಿ ಮುಂತಾದ ತಾರೆಯರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.(ಏಜೆನ್ಸೀಸ್)
ಮೂಗಿನ ಸರ್ಜರಿ-ಲಿಪ್ ಫಿಲ್ಲರ್ ಕುರಿತು ಮೌನಮುರಿದ ಶ್ರೀದೇವಿ ಮಗಳು; ಖುಷಿ ಕಪೂರ್ ಹೇಳಿದ್ದೇನು? | Khushi Kapoor