ಚೆನ್ನೈ: ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಸೆನ್ಸೇಷನಲ್ ವಿಚಾರ ಆಗಿದ್ದು ಎಂದರೆ ಅದು ನಯನತಾರಾ ಮತ್ತು ಧನುಷ್ ನಡುವಿನ ವಿವಾದ. ದಶಕಗಳಿಂದ ಚಿತ್ರರಂಗದಲ್ಲಿರುವ ಈ ಇಬ್ಬರ ಸೆಲಿಬ್ರಿಟಿಗಳ ಜಗಳ ವೀಕ್ಷಿಸಿ ಚಿತ್ರರಂಗಕ್ಕೆ ಆಶ್ಚರ್ಯವಾಗಿತ್ತು. ಏಕೆಂದರೆ ಒಂದು ಸಮಯದಲ್ಲಿ ಧನುಷ್ ಮತ್ತು ನಯನತಾರಾ ಉತ್ತಮ ಸ್ನೇಹಿತರಾಗಿದ್ದರು. ಆದರೆ ಸಾಕ್ಷ್ಯಚಿತ್ರದ ವಿಚಾರಕ್ಕೆ ಆರಂಭವಾದ ವಿವಾದ(Documentary Controversy) ಕೊನೆಗೆ ಕೋರ್ಟ್ ಮೆಟ್ಟಿಲೇರಿದ್ದು ಎಲ್ಲರಿಗೂ ಗೊತ್ತೆ ಇದೆ.
ಇದನ್ನು ಓದಿ: ಧನುಷ್ ವಿರುದ್ಧ ಭುಗಿಲೆದ್ದ ಮತ್ತೊಂದು ವಿವಾದ; ಆತನ ನಿಜ ಸ್ವರೂಪ ಇದೇ ಎಂದಿದ್ದೇಕೆ ಲೇಡಿ ಸೂಪರ್ ಸ್ಟಾರ್ | Nayanthara
ಲೇಡಿ ಸೂಪರ್ ಸ್ಟಾರ್ ನಯನತಾರಾ ತಮ್ಮ ಮದುವೆಯ ಸಾಕ್ಷ್ಯಚಿತ್ರಕ್ಕೆ ಅನುಮತಿಯಿಲ್ಲದೆ ‘ನಾನು ರೌಡಿ ದಾನ್’ ಚಿತ್ರದ ದೃಶ್ಯವನ್ನು ಬಳಸಿಕೊಂಡಿದ್ದಾರೆ. ಇದರ ವಿರುದ್ಧ ನಾಯಕ ಧನುಷ್ ನ್ಯಾಯಾಲಯದಲ್ಲಿ ಹಕ್ಕುಸ್ವಾಮ್ಯ ಅರ್ಜಿ ಸಲ್ಲಿಸಿದರು. ಆದರೆ ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ‘ನೆಟ್‌ಫ್ಲಿಕ್ಸ್ ಇಂಡಿಯಾ’ ಧನುಷ್ ಅರ್ಜಿಯನ್ನು ವಜಾಗೊಳಿಸುವಂತೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಅಸಲಿಗೆ ನೆಟ್‌ಫ್ಲಿಕ್ಸ್’ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರ್ ಟೇಲ್’ನಲ್ಲಿ ‘ನಾನೂಮ್ ರೌಡಿ ದಾನ್’ ಚಿತ್ರದ 3 ಸೆಕೆಂಡುಗಳ ದೃಶ್ಯವನ್ನು ಬಳಸಲಾಗಿದೆ ಎಂದು ಧನುಷ್ ಆರೋಪಿಸಿದ್ದಾರೆ. ಅನುಮತಿ ಇಲ್ಲದೇ ಬಳಸಿರುವ ದೃಶ್ಯವನ್ನು 24 ಗಂಟೆಯೊಳಗೆ ತೆಗೆಯದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಧನುಷ್ ಎಚ್ಚರಿಕೆ ನೀಡಿದ್ದರು. ಆದರೆ ಆ ದೃಶ್ಯವನ್ನು ತೆಗೆಯದ ಕಾರಣ ಧನುಷ್ ಕಾನೂನು ಹೋರಾಟಕ್ಕೆ ಸಿದ್ಧರಾದರು.
ಕಳೆದ ನವೆಂಬರ್‌ನಲ್ಲಿ ನಯನತಾರಾ, ಅವರ ಪತಿ ವಿಘ್ನೇಶ್ ಶಿವನ್ ಮತ್ತು ಅವರ ನಿರ್ಮಾಣ ಸಂಸ್ಥೆ ಧನುಷ್ ವಿರುದ್ಧ ಪ್ರಕರಣ ದಾಖಲಿಸಿತ್ತು. ‘ನೆಟ್‌ಫ್ಲಿಕ್ಸ್’ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರ್ ಟೇಲ್’ನಲ್ಲಿ ‘ನಾನೂಮ್ ರೌಡಿ ದಾನ್’ ಚಿತ್ರದ 3 ಸೆಕೆಂಡುಗಳ ದೃಶ್ಯವನ್ನು ಬಳಸಲಾಗಿದೆ ಎಂದು ಧನುಷ್ ಆರೋಪಿಸಿದ್ದಾರೆ. ಅನುಮತಿ ಇಲ್ಲದೇ ಬಳಸಿರುವ ದೃಶ್ಯವನ್ನು 24 ಗಂಟೆಯೊಳಗೆ ತೆಗೆಯದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಧನುಷ್ ಎಚ್ಚರಿಕೆ ನೀಡಿದ್ದಾರೆ. ಆದರೆ ಆ ದೃಶ್ಯವನ್ನು ತೆಗೆದುಕೊಂಡಿರಲಿಲ್ಲ. ಇದರೊಂದಿಗೆ ಧನುಷ್ ಕಾನೂನು ಹೋರಾಟಕ್ಕೆ ಸಿದ್ಧರಾದರು.
ಇದಕ್ಕೂ ಮುನ್ನ ನಯನತಾರಾ ನಟ ಧನುಷ್ ನಿಜ ಸ್ವರೂಪ ಇದೇ ಎಂದು ದೂಷಿಸಿ ಮೂರು ಪುಟಗಳ ಸುದೀರ್ಘ ಪತ್ರವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್(Vignesh Shivan) 2022ರಲ್ಲಿ ವಿವಾಹವಾದರು. ವಿವಾಹದ ಬಳಿಕ ತಮ್ಮ ಜೀವನದ ವಿಚಾರಗಳನ್ನು ಸೇರಿಸಿದ ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್ ಈ ಸಾಕ್ಷ್ಯಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧರಿದ್ದರು. ಆದರೆ ಈ ಮಧ್ಯೆ ಕಾಲಿವುಡ್ ನಟ ಧನುಷ್ ಅನುಮತಿಯಿಲ್ಲದೆ ತಮ್ಮ ಸಿನಿಮಾದ ಕ್ಲಿಪ್ ಬಳಸಲಾಗಿದೆ ಎಂದು ಕಾಪಿರೈಟ್ ಕೇಸ್ ಹಾಕಿ 10 ಕೋಟಿ ಪರಿಹಾರ ಕೇಳಿದ್ದಾರೆ ಎಂದು ಆರೋಪಿಸಿ ನಟಿ ನಯನತಾರಾ ತಿಳಿಸಿದ್ದರು.
2015ರಲ್ಲಿ ಧನುಷ್ ನಿರ್ಮಾಣದ ನಾನು ರೌಡಿತಾನ್ ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ನಯನತಾರಾ ನಟಿಸಿದ್ದಾರೆ. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ನಂತರ ನಯನತಾರಾ ಮತ್ತು ಧನುಷ್ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ನಯನತಾರಾ ಅವರ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಧನುಷ್ ತಮ್ಮ ಸಿನಿಮಾದ ದೃಶ್ಯವನ್ನು ತೆಗೆದುಹಾಕುವಂತೆ ಹೇಳಿದ್ದರು. ಸಾಕ್ಷ್ಯಚಿತ್ರದಲ್ಲಿ ಧನುಷ್ ನಿರ್ಮಿಸಿರುವ ನಾನು ರೌಡಿತಾನ್ ಚಿತ್ರದ ಹಾಡಿನ 3 ಸೆಕೆಂಡುಗಳ ವಿಡಿಯೋವನ್ನು ಬಳಸಲಾಗಿದೆ ಎಂದು ಕಾಪಿರೈಟ್ ಕೇಸ್ ಹಾಕಿದ್ದರು. ಈ ನಿಟ್ಟಿನಲ್ಲಿ ಧನುಷ್ ನಿರ್ಮಾಣ ಸಂಸ್ಥೆ ‘ವಂಡಬಾರ್ ಫಿಲಂಸ್’ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.
ಧನುಷ್ 10 ಕೋಟಿಯನ್ನು ಪರಿಹಾರವಾಗಿ ಕೇಳಿದ್ದಾರೆ ಎಂದು ನಯನತಾರಾ ಧನುಷ್ ಅವರನ್ನು ಟೀಕಿಸಿ ಬಹಿರಂಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದರು. ಈ ವಿವಾದ ಮತ್ತಷ್ಟು ತಾರಕಕ್ಕೇರಿತು. ಕಾನೂನು ಹೋರಾಟಕ್ಕೆ ಧನುಷ್ ಮುಂದಾದರು. ಸದ್ಯ ಈ ಪ್ರಕರಣದಲ್ಲಿ ನ್ಯಾಯಾಲಯ ಧನುಷ್ ಪರ ತೀರ್ಪು ನೀಡಿದೆ. ಇದಕ್ಕೆ ನಯನತಾರಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.(ಏಜೆನ್ಸೀಸ್)