More

    ಎಚ್​ಡಿಕೆ ಬೇಜವಾಬ್ದಾರಿತನದಿಂದ ಮೈತ್ರಿ ಸರ್ಕಾರ ಉರುಳಿತು: ಸಿದ್ದರಾಮಯ್ಯ

    – ಅತಂತ್ರ ಸರ್ಕಾರ ಬರಲಿ ಅಂತಾನೇ ಕಾಯ್ತಿದ್ದಾರೆ
    ಮಂಡ್ಯ: ಎಚ್​ಡಿಕೆ ಬೇಜವಾಬ್ದಾರಿತನದಿಂದ ಮೈತ್ರಿ ಸರ್ಕಾರ ಉರುಳಿತು, ಬಿಜೆಪಿ ಅಧಿಕಾರಕ್ಕೆ ಬಂತು. ಆದರೂ ಸಿದ್ದರಾಮಯ್ಯನಿಂದ ಮೈತ್ರಿ ಸರ್ಕಾರ ಪತನ ಅಂತಾ ಆರೋಪ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಮಂಡ್ಯದ ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ರಾತ್ರಿ ಫ್ಲೈಟ್ ಕೈ ಕೊಟ್ಟಿದ್ರಿಂದ ಬರಲು ಆಗಲಿಲ್ಲ. ಬೆಳಿಗ್ಗೆ ತಡವಾಗಿ ಹುಬ್ಬಳ್ಳಿಯಿಂದ ಬಂದೆ. ಬೆಳಿಗ್ಗೆ ಹೆಲಿಕಾಪ್ಟರ್​ಗೆ ಅನುಮತಿ ಸಿಗೋದು ತಡವಾಯ್ತು. ಜೊತೆಗೆ ಸುರ್ಜೇವಾಲ ಕೂಡ ಒಂದು ಮೀಟಿಂಗ್ ಕರೆದಿದ್ದರು. ಹೀಗಾಗಿ ಬರಲು ತಡವಾಯ್ತು. ಚಲುವರಾಯಸ್ವಾಮಿ ಇವತ್ತು ಮೊದಲ ಬಾರಿಗೆ ಬೇಸರ ಮಾಡಿಕೊಂಡ್ರು ಎಂದು ಹೇಳುತ್ತಾ ಮಾತು ಆರಂಭಿಸಿದ್ದಾರೆ.

    ಜನ ಬೆಳಿಗ್ಗೆಯೇ ಬಂದಿದ್ದಾರೆ. ಅವರಿಗೆ ಊಟ ಕೊಡಲು ಆಗಲ್ಲ. ಬೇಗ ಬಾರದಿದ್ದರೇ ಜನ ಹೊರಟು ಹೋಗ್ತಾರೆ ಅಂತಾ.ಆದರೆ ಬಂದಾಗ ನನಗೆ ಖುಷಿ ಆಯ್ತು.ಹೊರಗೆ ಹೋಗ್ತಿದ್ದ ಜನರೆಲ್ಲರೂ ಮತ್ತೆ ಒಳ ಬಂದು ಕುಳಿತಿದ್ದಾರೆ. ನಾಗಮಂಗಲ ಮತ್ತು ಇಲ್ಲಿನ ಜನರ ಬಗ್ಗೆ ವಿಶೇಷ ಪ್ರೀತಿ ಇದೆ.ನಾನು ಯಾವಾಗ ಬಂದರೂ ಇಲ್ಲಿನ ಜನ ಪ್ರೀತಿಯಿಂದ ಕಾಣ್ತಾರೆ. ನಿಮ್ಮ ಉತ್ಸಾಹ ನೋಡಿದಾಗ ಚಲುವರಾಯಸ್ವಾಮಿ ಗೆಲ್ಲೋದು ಸೂರ್ಯ ಚಂದ್ರರಷ್ಟೇ ಸತ್ಯ.ಚಲುವರಾಯಸ್ವಾಮಿ ಗೆಲ್ಲಬೇಕು, ಗೆಲ್ಲಲೇಬೇಕು ಎಂದು ಹೇಳುತ್ತಾ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪ | ‘ಕೈ’ ನಾಯಕರಲ್ಲೇ ಗೊಂದಲ; ನಿಷೇಧ ಕೈಬಿಡುವಂತೆ ಹಲವರಿಂದ ಒತ್ತಾಯ

    ಒಕ್ಕಲಿಗ ಸಮಾಜದ ಪ್ರಮುಖ ನಾಯಕರಲ್ಲಿ ಚಲುವರಾಯಸ್ವಾಮಿ ಕೂಡ ಒಬ್ಬರು. ಇದನ್ನ ಮರೆಯಬಾರದು. ಬೆಳೆಯುವವರನ್ನ ಬೆಳೆಸಬೇಕು.ಲೀಡರ್ ಶಿಪ್ ಇರೋರನ್ನ ಲೀಡರ್ ಮಾಡಬೇಕು. ಚಲುವರಾಯಸ್ವಾಮಿಗೆ ಲೀಡರ್ ಶಿಪ್ ಕ್ವಾಲಿಟಿ ಇದೆ. ಅವ ಇನ್ನೂ ಅರ್ಥವಾನಂಗೆ ಅನಿಸುತ್ತೆ ಕಣ್ಣೀರೆ ಅವರ ಸೋಲಿಗೆ ಕಾರಣ ಅನ್ಸುತ್ತೆ ಎಂದಿದ್ದಾರೆ.

    ನಂಗೆ ಇವತ್ತು ಬೇಕು ಅಂದ್ರು ಕಣ್ಣೀರು ಬರಲ್ಲ. ಕೆಲವರು ನಾಟಕೀಯವಾಗಿ ಕಣ್ಣೀರಾಕ್ತಾರೆ. ಕಣ್ಣೀರಿನಲ್ಲೇ ರಾಜಕೀಯ ಮಾಡ್ತಾರೆ. ರಾಜಕಾರಣ ನಮ್ಮಪ್ಪನ ಆಸ್ತಿಯಲ್ಲ.ರಾಜಕೀಯ ಜನರ ಆಸ್ತಿ. ಗೆಲ್ಲಿಸಿದ್ರೆ ರಾಜಕಾರಣ ಮಾಡಬೇಕು. ಇಲ್ಲವಾದ್ರೆ ಸುಮ್ಮನೇ ಮನೆಯಲ್ಲಿ ಇರಬೇಕು. ಚಲುವರಾಯಸ್ವಾಮಿ ಇಲ್ಲದಿದ್ದರೇ ಹೆಚ್ಡಿಕೆ ಸಿಎಂ ಆಗ್ತಿರಲಿಲ್ಲ. ಚಲುವರಾಯಸ್ವಾಮಿ ಒಂದು ದೊಡ್ಡ ತಪ್ಪು ಮಾಡ್ಬಿಟ್ಟ. ಆ ದಿನ ಚಲುವರಾಯಸ್ವಾಮಿ ಬಿಜೆಪಿ ಬೆಂಬಲ ಪಡೆದು ಎಚ್​​ಡಿಕೆಯನ್ನು ಸಿಎಂ ಮಾಡಿದ. ಆತನ್ನ ಸಿಎಂ ಮಾಡಿ ದೊಡ್ಡ ತಪ್ಪು ಮಾಡ್ಬಿಟ್ಟೆ ಕಣಯ್ಯ ಎಂದಿದ್ದಾರೆ.

    ಆಮೇಲೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತಾ ಮೈತ್ರಿ ಸರ್ಕಾರ ಅಧಿಕಾರಕ್ಕೆ ತಂದೆವು. ಆಗ ವಿಧಾನಸೌಧದಲ್ಲಿ ಕೂತು ಕೆಲಸ ಮಾಡಲಿಲ್ಲ.ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕುಳಿತು ಆಡಳಿತ ಮಾಡಿದ. ಅಲ್ಲಿಗೆ ಜನಸಾಮಾನ್ಯರು, ಶಾಸಕರೂ ಕೂಡ ಹೋಗೋಕೆ ಆಗಲಿಲ್ಲ. ಬಿಗಿ ಭದ್ರತೆ ಬೇಧಿಸಿ ಒಳಗೆ ಹೋಗೋಕೆ ಕಷ್ಟ ಇತ್ತು. ನಾನು ಹೇಳಿದೆ ಅಮೆರಿಕಾಗೆ ಹೋಗ್ಬೇಡ ಕಣಯ್ಯ ಅಂತಾ. ಇಲ್ಲಾ ಅಣ್ಣ, ಸ್ವಾಮೀಜಿ ಪ್ರೆಸರ್ ಮಾಡ್ತಿದ್ದಾರೆ ಮೂರು ದಿನ ಅಷ್ಟೇ ಬಂದ್ಬಿಡ್ತೀನಿ ಅಂತಾ ಹೋದ. 3 ದಿನದ ಬದಲು 9 ದಿನ ಅಮೆರಿಕಾದಲ್ಲೇ ಉಳಿದ ಎಂದು ಮಾಜಿ ಮುಖ್ಯಮಂತ್ರಿ ಆಢಳಿತಾವಧಿ ಕುರಿತಾಗಿ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಚಾಕಲೇಟ್‌ ರ್‍ಯಾಪರ್​​​ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 16.5 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ!

    ಎಚ್​ಡಿಕೆ ಬೇಜವಾಬ್ದಾರಿತನದಿಂದ ಮೈತ್ರಿ ಸರ್ಕಾರ ಉರುಳಿತು, ಬಿಜೆಪಿ ಅಧಿಕಾರಕ್ಕೆ ಬಂತು. ಆದರೂ ಸಿದ್ದರಾಮಯ್ಯನಿಂದ ಮೈತ್ರಿ ಸರ್ಕಾರ ಪತನ ಅಂತಾ ಆರೋಪ. ಆಯ್ತಪ್ಪ ನಮ್ಮ ಶಾಸಕರು ನನ್ನ ಕೇಳಿ ಹೋದರು. ಆದ್ರೆ, ನಮ್ಮ ಮೂವರು ಶಾಸಕರು ಹೋಗಿದ್ದು ಯಾಕೆ? ಅವರನ್ನ ಕಳಿಸಿದ್ದು ಯಾರು?ಅದಕ್ಕೆ ಉತ್ತರವನ್ನೇ ಕೊಡ್ತಿಲ್ಲ. ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಅವರ ಬೇಜವಾಬ್ದಾರಿತನ. ಜೆಡಿಎಸ್‌ನವರು ಅವಕಾಶವಾದಿಗಳು. ಅತಂತ್ರ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ: ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ!

    ಜೆಡಿಎಸ್​​ ಅವರು ನಿತ್ಯವೂ ಹೋಮ, ಹವನ, ಪೂಜೆ ಮಾಡ್ತಾರೆ. ಯಾವುದೇ ಪೂರ್ಣ ಪ್ರಮಾಣದ ಸರ್ಕಾರ ಬರದಿರಲಿ ಅಂತಾ.ಎರಡೂ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬರಲಿ ಅಂತಾ ಪೂಜೆ. ಅತಂತ್ರ ಸರ್ಕಾರ ಬರಲಿ ಅಂತಾನೇ ಕಾಯ್ತಿದ್ದಾರೆ. ಅವಕಾಶ ಸಿಕ್ಕರೇ ಕಾಂಗ್ರೆಸ್‌ ಜೊತೆಯಾದ್ರೂ ಹೋಗ್ತಾರೆ, ಬಿಜೆಪಿ ಜೊತೆಯಾದ್ರೂ ಹೋಗ್ತಾರೆ.ಈ ಬಾರಿ ನಮ್ಮ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತೆ. ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

    ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್; ಫ್ಯಾನ್ಸ್​​ ಗರಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts