‘ಪ್ರಭಾಸ್​ ಮದುವೆ’: ನಟನ ದೊಡ್ಡಮ್ಮ ಪ್ರತಿಕ್ರಿಯೆ ಹೀಗಿದೆ ನೋಡಿ..

ಹೈದರಾಬಾದ್​: ತೆಲುಗು ಚಿತ್ರರಂಗದ ನಟರಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಪ್ರಭಾಸ್​. ವಿಶ್ವವೇ ಮೆಚ್ಚುವ ಚಿತ್ರಗಳ ಮೂಲಕ ಜನಪ್ರಿಯತೆಯ ಉತ್ತುಂಗದಲ್ಲಿರುವ ನಟನ ಮದುವೆಗಾಗಿ ಅವರ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಅವರ ಮದುವೆ ಬಗ್ಗೆ ಹತ್ತು ಹಲವು ರೂಮರ್​ಗಳು ಹರಿದಾಡುತ್ತಲೇ ಇದ್ದು, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರ ದೊಡ್ಡಮ್ಮಶ್ಯಾಮಲಾ ದೇವಿ (ಕೃಷ್ಣಂರಾಜು ಪತ್ನಿ) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ‘ಅವರಿಗೇನಾದರೂ ಆದ್ರೆ ನೀನೇ ಹೊಣೆ’.. ಸಮಂತಾಗೆ ಎಚ್ಚರಿಸಿದ್ದೇಕೆ ನಟಿಯರು?

“ಕಲ್ಕಿಯ ಯಶಸ್ಸನ್ನು ಉಲ್ಲೇಖಿಸಿ, ಒಳ್ಳೆಯತನವು ಮನುಷ್ಯನನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬುದು ಸಾಬೀತಾಗಿದೆ. ‘ಬಾಹುಬಲಿ’ ನಂತರ ಪ್ರಭಾಸ್ ಯಶಸ್ಸು ಪಡೆಯುವುದಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ, ಅವರ ನಿರೀಕ್ಷೆಗಳು ವ್ಯತಿರಿಕ್ತವಾಗಿವೆ. ಅದೇ ಪ್ರಭಾಸ್ ಮದುವೆ ಬಗ್ಗೆ ಸಹ ಕೆಲವರು ನೆಗಟೀವ್​ ಆಗಿ ಮಾತನಾಡಿದ್ದಾರೆ. ಆದರೆ ಇವು ಯಾವುವೂ ಸತ್ಯವಾಗುವುದಿಲ್ಲ. ಪ್ರಭಾಸ್ ಈಗ ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾನೆ. ಅವನ ಸಿನಿಮಾಗಳನ್ನು ಕೋಟಿಗಟ್ಟಲೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮಾಡಲು ಕಷ್ಟಪಡುತ್ತಿದ್ದಾನೆ. ಮದುವೆ ಸಹ ನಡೆಯುತ್ತದೆ. ಮದುವೆ ಮಾಡುವ ಜವಾಬ್ದಾರಿ ನಮ್ಮ ಮೇಲೆಯೂ ಇದೆ. ಎಲ್ಲ ಆ ದೇವರ ಬಲದಿಂದಲೇ ಆಗುತ್ತದೆ” ಎಂದರು.

ಜ್ಯೋತಿಷಿಯೊಬ್ಬರು ಈ ಹಿಂದೆ ಪ್ರಭಾಸ್ ಮದುವೆ ಆಗುವುದಿಲ್ಲ ಎಂದು ಹೇಳಿದ್ದರು. ಇನ್ನು ಕೆಲವರು ಆ ಹೀರೋಯಿನ್​ ಜೊತೆ ಮದುವೆ, ಈ ಹೀರೋಹಿನ್​ಜೊತೆ ಸುತ್ತುತ್ತಿದ್ದಾನೆ ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದರು. ಆದರೆ ಈ ವದಂತಿಗಳಿಗೆ ಶ್ಯಾಮಲಾ ದೇವಿ ಈ ಹಿಂದೆ ಪ್ರತಿಕ್ರಿಯಿಸಿದ್ದು ಗೊತ್ತೇ ಇದೆ.

ಉತ್ತರಾಖಂಡ್​ನಲ್ಲಿ ಭಾರಿ ಮಳೆ..ಚಾರ್ಧಾಮ್ ಯಾತ್ರೆ ಸ್ಥಗಿತ!

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ