

ಹೈದರಾಬಾದ್: ಸಮಂತಾ ವಿರುದ್ಧ ಟಾಲಿವುಡ್ ನಟಿಯರು ತಿರುಗಿಬಿದ್ದಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಹೆಲ್ತ್ ಟಿಪ್ಸ್ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಕೆಲವರು ಬೆಂಬಲಿಸಿದ್ದು, ಇನ್ನೂ ಕೆಲವರು ಟೀಕಿಸುತ್ತಿದ್ದಾರೆ. ನಟಿ ಜ್ವಾಲಾ ಗುಟ್ಟಾ ಮತ್ತು ಪೂನಂ ಕೌರ್ ಸಮಂತಾ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಂತಾ ಮಯೋಸಿಟಿಸ್ ನಿಂದ ಬಳಲುತ್ತಿತುರುವು ತಿಳಿದ ಸಂಗತಿಯೇ. ಆದರೆ ಹೈಡ್ರೋಜನ್ ಪೆರಾಕ್ಸೈಡ್ ನೆಬ್ಯುಲೈಸೇಶನ್ ಆಕೆಗೆ ಚೆನ್ನಾಗಿ ಕೆಲಸ ಮಾಡಿದೆ. ಇದನ್ನು ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು.
ಇದನ್ನು ಅನೇಕ ವೈದ್ಯರು ಟೀಕಿಸಿದ್ದರು. ಸಮಂತಾ ಹೇಳಿದಂತೆ ನಡೆದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಮಂತಾರನ್ನು ಜೈಲಿಗೆ ಹಾಕಬೇಕು ಎಂದು ಖ್ಯಾತ ವೈದ್ಯ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಹೇಳಿದ್ದಾರೆ. ಆದರೆ ವೈದ್ಯರ ಈ ಕಾಮೆಂಟ್ಗೆ ಸಮಂತಾ ಖಾರವಾದ ಉತ್ತರ ನೀಡಿದ್ದಾರೆ.
ಇನ್ನು ನಟಿ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಸಮಂತಾ ಬಗ್ಗೆ ಕಾಮೆಂಟ್ ಮಾಡಿದ್ದರು. 'ತನ್ನ ಅಪಾರ ಅಭಿಮಾನಿಗಳಿಗೆ ಹೆಲ್ತ್ ಟಿಪ್ಸ್ ನೀಡುತ್ತಿರುವ ಸೆಲೆಬ್ರಿಟಿಗೆ ನಾನು ಇದೇ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ನಿಮ್ಮ ಸಹಾಯ ಮಾಡುವ ಉದ್ದೇಶ ಚೆನ್ನಾಗಿದೆ. ಆದರೆ ನೀವು ನೀಡಿದ ಸಲಹೆ ಸಹಾಯ ಮಾಡದಿದ್ದರೆ.. ಯಾರದ್ದಾದರೂ ಜೀವಕ್ಕೆ ಅಪಾಯವಾದರೆ? ನೀವು ಜವಾಬ್ದಾರರಾಗುತ್ತೀರಾ? ನೀವು ಟ್ಯಾಗ್ ಮಾಡಿದ ವೈದ್ಯರು ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೇ?' ಎಂದು ಪ್ರಶ್ನಿಸಿದ್ದಾರೆ.
ಜ್ವಾಲಾ ಗುಟ್ಟಾ ಕಾಮೆಂಟ್ಗಳಿಗೆ ಟಾಲಿವುಡ್ ನಟಿ ಪೂನಂ ಕೌರ್ ಕೂಡ ಪ್ರತಿಕ್ರಿಯಿಸಿದ್ದಾರೆ. 'ಇದು ಜ್ವಾಲಾ ಸಮಾಜದಲ್ಲಿ ತಮ್ಮನ್ನು ತಾವು ಉತ್ತಮವಾಗಿ ತೋರಿಸಿಕೊಳ್ಳುವ ಭಾಗವಾಗಿದೆ. ಸಮಂತಾ ಹೇಳಿಕೆ ಹಿಂದೆ ಕರಾಳ ಮುಖವಿದೆ. ಹೆಚ್ಚಿನ ಸೆಲೆಬ್ರಿಟಿಗಳು ಸಕ್ಕರೆ ತೆಗೆದುಕೊಳ್ಳುವುದಿಲ್ಲ. ಆದರೆ ತಮ್ಮ ಜಾಹೀರಾತುಗಳಲ್ಲಿ ಕೂಲ್ ಡ್ರಿಂಕ್ಸ್ ಮತ್ತು ಚಾಕಲೇಟ್ ಗಳನ್ನು ಖರೀದಿಸುವಂತೆ ಹೇಳುತ್ತಾರೆ. ಇದೊಂದು ಕರಾಳ ವಾಸ್ತವ ಎಂದು ಪೂನಂ ಕೌರ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಪೂನಂ ಕೌರ್ ಟ್ವೀಟ್ ಕೂಡ ವೈರಲ್ ಆಗುತ್ತಿದೆ.