ಇಂಗ್ಲೆಂಡ್​ ಟೆಸ್ಟ್ ಸರಣಿ ಬೆನ್ನಲ್ಲೇ ಕ್ಯಾಪ್ಟನ್ ಗಿಲ್​ ಮಾತು! ಬ್ಯಾಟಿಂಗ್ ಕ್ರಮಾಂಕ ಕುರಿತು ಅಚ್ಚರಿ ಹೇಳಿಕೆ | Shubman Gill

ವಿಜಯವಾಣಿ (25)
Published on

Shubman Gill: ಇದೇ ಜೂನ್​ 20ರಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಸದ್ಯ ಎರಡೂ ತಂಡಗಳು ಸಜ್ಜಾಗಿವೆ. ಈಗಾಗಲೇ ಎರಡು ತಂಡಗಳು ಕೂಡ ಪ್ರಕಟವಾಗಿದ್ದು, ಪ್ರಮುಖ ಆಟಗಾರರು ಯಾರೆಲ್ಲ ಎಂಬುದು ಸ್ಪಷ್ಟವಾಗಿದೆ. ಸರಣಿ ಹಿನ್ನಲೆ ಇತ್ತೀಚೆಗಷ್ಟೇ ಮುಂಬೈನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ಶುಭಮನ್ ಗಿಲ್​, ತಂಡ ಕುರಿತು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

"ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ನಾವಿನ್ನೂ ನಿರ್ಧರಿಸಿಲ್ಲ. ನಮಗೆ ಇನ್ನೂ ಸ್ವಲ್ಪ ಸಮಯವಿದೆ. ಲಂಡನ್‌ನಲ್ಲಿ 10 ದಿನಗಳ ಅಭ್ಯಾಸವಿದೆ. ಅಲ್ಲಿಗೆ ಹೋದ ಬಳಿಕ ನಾವು ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸುವುದು ಸೂಕ್ತ. ಹೀಗಾಗಿ ಕಾದಿದ್ದೇವೆ. ಅಭ್ಯಾಸ ಪಂದ್ಯದ ನಂತರ ಬಿಸಿಸಿಐ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು, ಯಾರನ್ನು ಬಿಡಬೇಕು ಎಂಬುದನ್ನು ನಿರ್ಧರಿಸುವ ಸಾಧ್ಯತೆಯಿದೆ" ಎಂದರು.

"ಕರುಣ್ ನಾಯರ್​ಗೆ ಸಾಕಷ್ಟು ಅನುಭವವಿದೆ. ಅವರು ದೇಶಿಯ ಹಾಗೂ ಕೌಂಟಿ ಕ್ರಿಕೆಟ್​ನಲ್ಲಿ ಆಡಿದ್ದಾರೆ. ಅಲ್ಲಿಯೂ ಉತ್ತಮ ಫಾರ್ಮ್‌ ಕಾಪಾಡಿಕೊಂಡಿದ್ದಾರೆ. ಅವರ ಈ ಅನುಭವ ತಂಡಕ್ಕೆ ಉಪಯುಕ್ತ. ಅತೀ ಮುಖ್ಯವಾಗಿ, ಒಂದು ಅಥವಾ ಎರಡು ಟೆಸ್ಟ್ ಪಂದ್ಯಗಳ ಆಧಾರದ ಮೇಲೆ ನಾವು ಯಾರನ್ನೂ ನಿರ್ಣಯಿಸಲು ಸಾಧ್ಯವಿಲ್ಲ" ಎಂದು ಟೀಮ್ ಇಂಡಿಯಾ ಹೆಡ್ ಕೋಚ್​ ಗಂಭೀರ್ ಹೇಳಿದ್ದಾರೆ.

ಭಾರತ ತಂಡ

ಶುಭ್​ಮನ್​ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್​ ಸಿರಾಜ್, ಪರಿಧಿ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್​ ಸಿಂಗ್, ಕುಲದೀಪ್ ಯಾದವ್ ತಂಡದಲ್ಲಿದ್ದಾರೆ.

ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ

ಬೆನ್ ಸ್ಟೋಕ್ಸ್ (ನಾಯಕ), ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕುಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜೇಮೀ ಓವರ್ಟನ್, ಓಲ್ಲಿ ಪೋಪ್, ಜೋ ರೂಟ್, ಜೇಮೀ ಸ್ಮಿತ್, ಜೋಶ್ ಟಾಂಗ್, ಕ್ರಿಸ್ ವೋಕ್ಸ್ ಕಣಕ್ಕಿಳಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net