

First Night : ಈ ಕಣ್ಣಲ್ಲಿ ಇನ್ನೂ ಏನೇನು ನೋಡ್ಬೇಕೋ! ಎಂಬ ಡೈಲಾಗ್ ಈ ವಿಡಿಯೋ ನೋಡಿದ್ರೆ ಖಂಡಿತಾ ನೆನಪಾಗುತ್ತೆ. ಈ ಸಾಮಾಜಿಕ ಜಾಲತಾಣ ಯುಗದಲ್ಲಿ ಎಲ್ಲರೂ ಫೇಮಸ್ ಆಗಬೇಕು ಎಂಬ ಉದ್ದೇಶದಿಂದ ಹುಚ್ಚುಚ್ಚಾಗಿ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಒಬ್ಬರು ತಮ್ಮ ಅಡುಗೆ ಕೋಣೆಯನ್ನು ತೋರಿಸಿದರೆ, ಕೆಲವರು ತಮ್ಮ ಬಾತ್ರೂಮ್ ತೋರಿಸುತ್ತಾರೆ. ಅದೇ ರೀತಿ ಫ್ರಿಡ್ಜ್, ವಾಷಿಂಗ್ ಮೆಶಿನ್ ಸಹ ತೋರಿಸುತ್ತಾರೆ.
ಕೆಲವರಂತೂ ಟ್ಯಾಲೆಂಟ್ ಹೆಸರಿನಲ್ಲಿ ಅಸಭ್ಯ ವಿಡಿಯೋ ಮಾಡಿ ಎಕ್ಸ್ಪೋಸ್ ಮಾಡುತ್ತಿದ್ದಾರೆ. ಬೆಡ್ರೂಮಿನಲ್ಲಿ ನಡೆಯುವ ಅತ್ಯಂತ ರಹಸ್ಯ ವಿಚಾರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಇತ್ತೀಚೆಗೆ ನವದಂಪತಿ, ತಮ್ಮ ಫಸ್ಟ್ ನೈಟ್ ಕೋಣೆಯ ವಿಡಿಯೋವನ್ನು ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋವನ್ನು @piyushgothislovekit ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಪಿಯೂಷ್ ಮತ್ತು ನಿಕಿತಾ ಅವರ ಮೊದಲ ರಾತ್ರಿ ಎಂದು ಹೇಳಲಾಗಿದೆ. ಕೋಣೆಯನ್ನು ಬಲೂನ್‌ಗಳು ಮತ್ತು ಇತರ ವಸ್ತುಗಳಿಂದ ಅಲಂಕರಿಸಲಾಗಿದ್ದು, ಪ್ರೀತಿಪಾತ್ರರು, ನವದಂಪತಿಯನ್ನ ಪ್ರೀತಿಯಿಂದ ಕೋಣೆಯೊಳಗೆ ಕಳುಹಿಸುತ್ತಿದ್ದಾರೆ. ಆದರೆ, ವಿಡಿಯೋದಲ್ಲಿ ಅವರ ಮುಖ ಕಾಣುವುದಿಲ್ಲ. ನವದಂಪತಿ ಟಾಟಾ ಮಾಡುವುದು ಮಾತ್ರ ಕಾಣಿಸುತ್ತದೆ. ವಿಡಿಯೋ ಬಾಗಿಲು ಮುಚ್ಚುವುದರೊಂದಿಗೆ ಪ್ರಾರಂಭವಾಗಿ, ಕೊಣೆಯೊಳಗಿನ ಕೆಲ ದೃಶ್ಯಗಳಿಂದ ಕೊನೆಯಾಗುತ್ತದೆ.
ದಂಪತಿ ಪ್ರಣಯದ ಮೊದಲ ರಾತ್ರಿಯ ವಿಡಿಯೋವನ್ನು ಹಂಚಿಕೊಳ್ಳಲಿಲ್ಲ. ಬದಲಾಗಿ, ವಧು ಸದ್ದಿಲ್ಲದೆ ತನ್ನ ಕೂದಲಿನಿಂದ ತನ್ನ ಆಭರಣಗಳು ಮತ್ತು ಹೂವುಗಳನ್ನು ತೆಗೆಯಲು ಪ್ರಾರಂಭಿಸುತ್ತಾಳೆ. ಆದರೆ, ಎಲ್ಲರ ಗಮನ ಸೆಳೆಯುವುದು ವರನ ಕ್ರಿಯೆಗಳೇ. ಹತ್ತಿರದಲ್ಲಿ ನಿಲ್ಲುವ ಬದಲು, ಅವನು ತನ್ನ ಹೆಂಡತಿಗೆ ಸಹಾಯ ಮಾಡುತ್ತಾನೆ. ವಧುವಿನ ಕಿವಿಯೋಲೆಗಳನ್ನು ತೆಗೆದು ಅವಳ ಬಳೆಗಳನ್ನು ಬಿಚ್ಚಲು ಸಹಾಯ ಮಾಡುತ್ತಾನೆ.
ಈ ವಿಡಿಯೋ ಬೇಗನೆ ವೈರಲ್ ಆಗಿದೆ. ಕೆಲವರು ಇಂತಹ ವಿಡಿಯೋವನ್ನು ಏಕೆ ಪೋಸ್ಟ್ ಮಾಡುತ್ತೀರಾ ಎಂದು ಪ್ರಶ್ನಿಸಿದರೆ, ಕೆಲವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮೊದಲಿಗೆ ನಾನು ಇದು ಕೇವಲ ಮಲಗುವ ಕೋಣೆಯ ಕ್ಲಿಪ್ ಎಂದು ಭಾವಿಸಿದ್ದೆ, ಆದರೆ ಅದು ಪ್ರೀತಿ ಮತ್ತು ಕಾಳಜಿಯ ಪಾಠವಾಗಿ ಪರಿಣಮಿಸಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)