ವಿರಾಟ್​ ಕೊಹ್ಲಿ ಭೇಟಿಯಾಗಿ ಫ್ಯಾನ್​ಗರ್ಲ್​​ ಕ್ಷಣ ಹಂಚಿಕೊಂಡ ಶ್ರೇಯಾಂಕಾ ಪಾಟೀಲ್

Shreyanka Kohli
Published on

ಬೆಂಗಳೂರು: ಮಾರ್ಚ್​ 17ರಂದು ಮುಕ್ತಾಯಗೊಂಡ ಎರಡನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್ ಲೀಗ್​ ಕ್ರಿಕೆಟ್​ ಟೂರ್ನಿಯಲ್ಲಿ ಸರ್ವಾಂಗೀಣ ಪ್ರದರ್ಶನದಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವನಿತೆಯರ ತಂಡವು ಸುದೀರ್ಘ ಕಾಯುವಿಕೆಯನ್ನು ಕೊನೆಗಾಣಿಸಿದ್ದು, ಈ ಸಲ ಕಪ್​ ನಮ್ಮದಾಗಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ನಡುವೆ ಬೆಂಗಳೂರು ತಂಡದಲ್ಲಿರುವ ಕನ್ನಡದ ಹುಡುಗಿ ಶ್ರೇಯಾಂಕಾ ಪಾಟೀಲ್‌, ಕನ್ನಡಿಗರ ಮನಗೆದ್ದಿದ್ದಾರೆ. ಟೂರ್ನಿಯಲ್ಲಿ ಬರೋಬ್ಬರಿ 13 ವಿಕೆಟ್‌ ಕಬಳಿಸುವ ಮೂಲಕ, ಬೆಂಗಳೂರಿನ ಹುಡುಗಿ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ. ಒಂದೆಡೆ ಆರ್‌ಸಿಬಿ ಕಪ್‌ ಗೆಲುವಿನ ಖುಷಿಯಾದರೆ, ಶ್ರೇಯಾಂಕಾ ಪಾಟೀಲ್‌ ಪರ್ಪಲ್‌ ಕ್ಯಾಪ್‌ ಹಾಗೂ ಎಮರ್ಜಿಂಗ್‌ ಪ್ಲೆಯರ್‌ ಪ್ಲೇಯರ್​ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು ಅಭಿಮಾನಿಗಳ ದುಪ್ಪಟ್ಟು ಖುಷಿಗೆ ಕಾರಣವಾಗಿದೆ.

ಇದೀಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರ, ರನ್​ ಮೆಷಿನ್​ ವಿರಾಟ್​ ಕೊಹ್ಲಿ ಅವರೊಂದಿಗೆ ವಿರಾಟ್​ ಕೊಹ್ಲಿ ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಕೊಹ್ಲಿಯನ್ನು ಶ್ರೇಯಾಂಕ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶ್ರೇಯಾಂಕಾ ಅವರ (ಕೊಹ್ಲಿ) ಕಾರಣದಿಂದಲೇ ಕ್ರಿಕೆಟ್‌ ನೋಡಲು ಶುರು ಮಾಡಿದೆ. ಅವರಂತಾಬೇಕು ಎಂಬ ಕನಸಿನೊಂದಿಗೆ ಬೆಳೆದೆ. ಕಳೆದ ರಾತ್ರಿ ನನ್ನ ಜೀವನದ ಅತ್ಯಮೂಲ್ಯ ಘಟನೆ ನಡೆಯಿತು ಈಗಲೂ ನಾನು ಕೊಹ್ಲಿ ಅಭಿಮಾನಿ. ಹಾಯ್ ಶ್ರೇಯಾಂಕ, ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದೆ ಎಂದು ಕೊಹ್ಲಿ ಹೇಳಿದರು. ಅವರಿಗೆ ನನ್ನ ಹೆಸರು ಗೊತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇತ್ತ ಶ್ರೇಯಾಂಕಾ ಪೋಸ್ಟ್​ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಕನ್ನಡತಿಯನ್ನು ಹಾಡಿ ಹೊಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net