More

  ತುರ್ತು ಮೆದುಳು ಶಸ್ತ್ರಚಿಕಿತ್ಸೆ; ಸದ್ಗುರು ಆರೋಗ್ಯದ ಬಗ್ಗೆ ವೈದ್ಯರು ಹೇಳುವುದೇನು?

  ನವದೆಹಲಿ: ಪ್ರಸಿದ್ಧ ಆಧ್ಯಾತ್ಮಿಕ ಗುರು, ಈಶಾ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

  ಸದ್ಯ ಸದ್ಗುರು ಜಗ್ಗಿ ವಾಸುದೇವ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಇತ್ತ ಅವರ ಮಾರ್ಚ್​ 17ರಂದು ಸದ್ಗುರು ಜಗ್ಗಿ ವಾಸುದೇವ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ.

  ಈ ಕುರಿತು ಮಾತನಾಡಿರುವ ಅಪೋಲೋ ಆಸ್ಪತ್ರೆ ವೈದ್ಯ ಡಾ. ವಿನೀತ್​ ಸೂರಿ, ಮಾರ್ಚ್ 17ರಂದು ಸದ್ಗುರು ಮೆದುಳಿನಲ್ಲಿ ಭಾರೀ ಊತ ಮತ್ತು ರಕ್ತಸ್ರಾವ ಉಂಟಾಗಿತ್ತು. ಈ ಹಿನ್ನೆಲೆ ಅವರನ್ನು ಪರೀಕ್ಷಿಸಿ, ಎಂ‌ಆರ್‌ಐಗೆ ಸಲಹೆ ನೀಡಲಾಗಿತ್ತು. ಈ ವೇಳೆ ಅವರ ಮೆದುಳಿನಲ್ಲಿ ಭಾರೀ ರಕ್ತಸ್ರಾವ ಪತ್ತೆಯಾಗಿದೆ.

  ಇದನ್ನೂ ಓದಿ: ಕುಕ್ಕರ್​ ನನಗ್ಯಾಕೆ ಕೊಟ್ಟಿಲ್ಲ? ಎಂದ ವೃದ್ಧೆಗೆ ಥಳಿಸಿದ ಕಾಂಗ್ರೆಸ್​ ಕಾರ್ಯಕರ್ತ

  ನಿರಂತರ ವಾಂತಿ ಹಾಗೂ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಮೆದುಳಿನಲ್ಲಿ ಊತ ಹಾಗೂ ರಕ್ತಸ್ರಾವ ಪತ್ತೆಯಾದ ಬಳಿಕ ಅಪೋಲೋ ವೈದ್ಯ ತಂಡದಿಂದ ಶಸ್ತ್ರಚಿಕಿತ್ಸೆ ನಡೆಸಿದೆ. ಸದ್ಯ ಸದ್ಗುರು ಅವರನ್ನು ವೆಂಟಿಲೇಟರ್‌ನಿಂದ ತೆಗೆಯಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

  ಡಾ. ವಿನಿತ್ ಸೂರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಮತ್ತು ಡಾ.ಎಸ್ ಚಟರ್ಜಿ ಸೇರಿದಂತೆ ದೆಹಲಿಯ ಅಪೋಲೋ ವೈದ್ಯರ ತಂಡವು ಸದ್ಗುರು ಜಗ್ಗಿ ವಾಸುದೇವ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts