More

    ಕಾರನ್ನೇ ಹೆಲಿಕಾಪ್ಟರ್​ ಮಾಡಿದ ಸಹೋದರರು; ವಿಡಿಯೋ ವೈರಲ್

    ಲಖನೌ: ಸಹೋದರರಿಬ್ಬರು ಸೇರಿಕೊಂಡು ತಮ್ಮ ಕ್ರಿಯಾತ್ಮಕ ಆಲೋಚನೆಯ ಮೂಲಕ ಕಾರನ್ನೇ ಹೆಲಿಕಾಪ್ಟರ್​ ಆಗಿ ಮಾಡುವ ಮೂಲಕ ಸುದ್ದಿಯಾಗಿರುವ ಘಟನೆ ಉತ್ತರಪ್ರದೇಶದ ಅಂಬೇಡ್ಕರ್​ನಗರ ಜಿಲ್ಲೆಯಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಖತ್​ ಸೌಂಡ್​ ಮಾಡುತ್ತಿದೆ.

    ಆದರೆ, ಸಹೋದರರಿಬ್ಬರು ಕಾರನ್ನು ಮಾಡಿಫೈ ಮಾಡಿ ರಸ್ತೆಯಲ್ಲಿ ಚಲಾಯಿಸಿದ ಕೆಲವೇ ಕ್ಷಣಗಳಲ್ಲಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದು, ಸಹೋದರರಿಬ್ಬರಿಗೆ ಶಾಕ್​ ನೀಡಿದ್ದಾರೆ. ಸಹೋದದರಿಬ್ಬರ ಕ್ರಿಯಾತ್ಮಕ ಆಲೋಚನೆಯನ್ನು ಬೆಂಬಲಿಸದ ಪೊಲೀಸರು ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಶಿವಮೊಗ್ಗದಲ್ಲಿ ರಂಗೇರಿದ ಚುನಾವಣಾ ಅಖಾಡ; ಪತ್ನಿ ಗೀತಾ ಪರ ಮತಬೇಟೆ ಆರಂಭಿಸಿದ ಶಿವರಾಜ್​ಕುಮಾರ್​

    ವೈರಲ್​ ಆಗಿರುವ ವಿಡಿಯೋದಲ್ಲಿ ಮಾರುತಿ ಸುಜುಕಿ ಕಂಪನಿಯ ವ್ಯಾಗನರ್​ ಕಾರನ್ನು ಸಹೋದರರಿಬ್ಬರು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ. ಇದನ್ನು ತಾವು ವಾಸಿಸುವ ಪ್ರದೇಶ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ಚಲಾಯಿಸಿ ಸಂಭ್ರಮಿಸಿದ್ದಾರೆ. ಆದರೆ, ಈ ಸುದ್ದಿ ವ್ಯಾಪಕವಾಗಿ ಹರಿದಾಡಲು ಶುರುವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

    ಸಹೋದರರಿಬ್ಬರು ಶ್ರಮವಹಿಸಿ ತಯಾರಿಸಿದ ವಾಹನವನ್ನು ವಶಕ್ಕೆ ಪಡೆದುಕೊಂಡ  ಪೊಲೀಸ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ನಮ್ಮ ದೇಶದಲ್ಲಿ ಹಲವಾರು ಮಂದಿ ಇಂತಹ ವಿನೂತನ ಆಲೋಚನೆಗಳೊಂದಿಗೆ ಮುಂದೆ ಬರುತ್ತಿದ್ದರೂ ಸರಿಯಾದ ಪ್ರೋತ್ಸಾಹವಿಲ್ಲದೆ ಹಿಂದುಳಿದಿದ್ದಾರೆ. ಪ್ರತಿಭೆಯಿಂದ ತುಂಬಿದ್ದರೂ, ಸರಿಯಾದ ಆಧಾರವಿಲ್ಲದ ಕಾರಣ ಇಂತಹ ಅನೇಕ ಆವಿಷ್ಕಾರಗಳು ಬೆಳಕಿಗೆ ಬರುತ್ತಿಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts