ಹಾಲಿ ಚಾಂಪಿಯನ್ಸ್​ ಆರ್​ಸಿಬಿಗೆ ದೊಡ್ಡ ಆಘಾತ; ಡಬ್ಲ್ಯುಪಿಎಲ್​ನಿಂದ ಹೊರಬಿದ್ದ ಕನ್ನಡತಿ Shreyanka Patil!

Shreyanka Patil
Published on

ಬೆಂಗಳೂರು: ಮೂರನೇ ಆವೃತತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL) ಫೆಬ್ರವರಿ 14ರಂದು ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಆರ್​ಸಿಬಿ ಹಾಘೂ ಗುಜರಾತ್​ ಜೈಂಟ್ಸ್​ ತಂಡವು ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಆರು ವಿಕೆಟ್​ಗಳ ಭರ್ಜರಿ ಜಯ ಕಂಡಿರುವ ಆರ್​ಸಿಬಿಗೆ ಇದೀಗ ದೊಡ್ಡ ಹೊಡೆತವೊಂದು ಎದುರಾಗಿದ್ದು, ಪ್ರಮುಖ ಆಟಗಾರ್ತಿ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡ ಆರ್​ಸಿಬಿ (RCB) ನಾಯಕಿ ಸ್ಮೃತಿ ಮಂದನಾ ಆತಿಥೇಯರನ್ನು ಬ್ಯಾಟಿಂಗ್​ ಆಹ್ವಾನಿಸಿದರು. ಆರ್​ಸಿಬಿ ಸವಾಲನ್ನು ಸ್ವೀಕರಿಸಿದ ಗುಜರಾತ್ ಜೈಂಟ್ಸ್ ತಂಡವು ಆಶ್ಲೀ ಗಾರ್ಡ್ನರ್ (79 ರನ್, 37 ಎಸೆತ, 3 ಬೌಂಡರಿ, 8 ಸಿಕ್ಸರ್​), ನಾಯಕಿ ಬೆತ್ ಮೂನಿ (56 ರನ್, 42 ಎಸೆತ, 8 ಬೌಂಡರಿ) ಭರ್ಜರಿ ಬ್ಯಾಟಿಂಗ್ ಫಲವಾಗಿ 5 ವಿಕೆಟ್ ನಷ್ಟಕ್ಕೆ 201ರನ್​ ಗಳಿಸಿತು.

RCB Womens

ಸವಾಲಿನ ಗುರಿ ಬೆನ್ನತ್ತಿದ್ದ ಆರ್​​ಸಿಬಿ (RCB) ತಂಡವು ಆರಂಭಿಕ ಆಘಾತದ ಹೊರತಾಗಿಯೂ ಎಲ್ಲಿಸ್ ಪೆರ್ರಿ (57 ರನ್, 34 ಎಸೆತ, 4 ಬೌಂಡರಿ, 2 ಸಿಕ್ಸರ್), ರಿಚಾ ಘೋಷ್​ (64 ರನ್, 27 ಎಸೆತ, 7 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಫಲವಾಗಿ 18.3 ಓವರ್​ಗಳಲ್ಲಿ 202 ರನ್ ಬಾರಿಸಿ 6 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತು. ಆದರೆ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿತು. ಈ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದರು.

ವರದಿಗಳ ಪ್ರಕಾರ ಶ್ರೇಯಾಂಕ ಪಾಟೀಲ್ (Shreyanka Patil), ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಡಬ್ಲ್ಯೂಪಿಎಲ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಟೀಮ್​ ಇಂಡಿಯಾ ಐರ್ಲೆಂಡ್ ಹಾಗೂ ವೆಸ್ಟ್​ ವಿಂಡೀಸ್ ವಿರುದ್ಧ ಸರಣಿಗಳನ್ನು ಆಡಿತ್ತು. ಸರಣಿ ವೇಳೆ ಗಾಯಗೊಂಡಿದ್ದ ಶ್ರೇಯಾಂಕ ಪಾಟೀಲ್ (Shreyanka Patil) ಡಬ್ಲ್ಯೂಪಿಎಲ್​ ವೇಳೆಗೆ ಫಿಟ್ ಆಗುತ್ತಾರೆ ಎಂಬ ನಿರೀಕ್ಷೆ ಇತ್ತಾದರು ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net