ಮಗಳಿಗೆ ಕರೆ ಮಾಡಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ; Video Viral

School Stab
Published on

ಅಹಮದಾಬಾದ್: ತನ್ನ ಮಗಳಿಗೆ ಕಾಲ್​ ಮಾಡಿ ಮಾತನಾಡಿದ ಎಂಬ ಕಾರಣಕ್ಕೆ ವ್ಯಕ್ರಿಯೋರ್ವ ವಿದ್ಯಾರ್ಥಿಗೆ ಚಾಕುವಿನಿಂದ ಮನಬಂದಂತೆ ಇರಿದು ಹಲ್ಲೆ ಮಾಡಿರವ ಘಟನೆ ಗುಜರಾತ್​ನ ಭಾವ್​ನಗರ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಜಗದೀಶ್ ರಾಚಡ್​ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ (Video Viral) ಆಗಿದೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಘಟನೆಯು ಭಾವ್​ನಗರದ OAJ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ನಡೆದಿದ್ದು, ಸಂತ್ರಸ್ತ ಆರೋಪಿ ಮಗಳೊಂದಿಗೆ ಫೋನಿನಲ್ಲಿ ಮಾತನಾಡಿದ್ದ ಎಂದು ಆರೋಪಿಸಿ ಕಾಲೇಜಿನಲ್ಲಿ ದೂರು ದಾಖಲಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ ಸಂತ್ರಸ್ತ ಹಾಗೂ ದೂರು ನೀಡಿದವರನ್ನು ಕರೆಸಿ ಕೌನ್ಸೆಲಿಂಗ್​ ಸೆಂಟರ್​ನಲ್ಲಿ ಕೂರಿಸಿ ಮಾತನಾಡಿದ್ದರು. 

ಆರಂಭದಲ್ಲಿ ಶಾಂತವಾಗಿ ಮಾತನಾಡಿದ ಆರೋಪಿಯು ನೋಡನೋಡುತ್ತಿದ್ದಂತೆ ತನ್ನ ಬಳಿ ಇದ್ದ ಚಾಕು ತೆಗೆದು ಹುಡುಗನ ಮೇಲೆ ದಾಳಿ ಮಾಡಿದ್ದಾನೆ. ಹಲವಾರು ಬಾರಿ ಆರೋಪಿಯು ಸಂತ್ರಸ್ತನ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದು, ಎಚ್ಚೆತ್ತ ಶಿಕ್ಷಕರು ಕೂಡಲೇ ಸಂತ್ರಸ್ತನ ನೆರವಿಗೆ ಧಾವಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net