More

    ಬ್ರೇಕ್ ಅಪ್​ಗೆ ಹೊಸ ಜೋಡಿ, ರಚನಾ ಇಂದರ್-ಶ್ರೀಮಹದೇವ್!

    ಬೆಂಗಳೂರು: ಕಳೆದ ವರ್ಷವೇ ‘ಲೆಟ್ಸ್ ಬ್ರೇಕ್ ಅಪ್’ ಸಿನಿಮಾ ಘೋಷಣೆ ಆಗಿತ್ತು. ನಾಯಕನಾಗಿ ವಿಹಾನ್, ನಾಯಕಿಯಾಗಿ ಸಂಜನಾ ಆಯ್ಕೆಯಾಗಿದ್ದರು. ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡಲಿದೆ ಎಂದೂ ಸುದ್ದಿಯಾಗಿತ್ತು. ಅದಾದ ಬಳಿಕ ವಿಹಾನ್​ಗೆ ಸಂಜನಾ ಬದಲಿಗೆ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಇದೆಲ್ಲವೂ ಉಲ್ಟಾ ಆಗಿದೆ!

    ಅಂದರೆ, ನಾಯಕ, ನಾಯಕಿಯ ಜತೆಗೆ ಚಿತ್ರ ನಿರ್ಮಾಣ ಸಂಸ್ಥೆಯೂ ಬದಲಾವಣೆ ಆಗಿದೆ. ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಖ್ಯಾತಿಯ ಶ್ರೀಮಹದೇವ್ ನಾಯಕನಾದರೆ, ‘ಲವ್ ಮಾಕ್​ಟೇಲ್’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ರಚನಾ ಇಂದರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಈ ಬಗ್ಗೆ ವಿಜಯವಾಣಿ ಜತೆ ಮಾತನಾಡುವ ನಟಿ ರಚನಾ, ‘ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಸಿನಿಮಾ ಇದು. ಇಲ್ಲಿಯವರೆಗೂ ನಾನು ಈ ಥರದ ಸಿನಿಮಾ ಮಾಡಿಲ್ಲ. ಹಾಗಾಗಿ ನನಗೆ ಕೊಂಚ ಚಾಲೆಂಜಿಂಗ್ ಅನಿಸಿದೆ. ಲಾಕ್​ಡೌನ್ ಮುಗಿದ ಬಳಿಕ ಸಿನಿಮಾ ಶುರುವಾಗಲಿದೆ. ಮುಗ್ಧ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ’ ಎನ್ನುತ್ತಾರವರು. ಇನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶನದಲ್ಲಿ ಮುಂದುವರಿಯಲಿದ್ದಾರೆ ಸ್ವರೂಪ್. ಈ ಹಿಂದೆ ‘ಲಖನೌ ಟು ಬೆಂಗಳೂರು’ ಚಿತ್ರ ನಿರ್ದೇಶನ ಮಾಡಿದ ಅನುಭವ ಇವರಿಗಿದೆ. ಪ್ರದೀಪ್ ಯಾದವ್ ಈ ಚಿತ್ರ ನಿರ್ಮಾಣ ಮಾಡಲಿದ್ದು, ಏ. 9ರಂದು ಚಿತ್ರದ ಸ್ಕ್ರಿಪ್ಟ್ ಪೂಜೆಯೂ ಮುಗಿದಿದೆ. ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೋಷಣೆ ಆಗಿದ್ದರಿಂದ, ಎಲ್ಲವೂ ಸಡಿಲವಾದ ಬಳಿಕ ಚಿತ್ರದ ಶೂಟಿಂಗ್ ಶುರುಮಾಡಲಿದೆ ಚಿತ್ರತಂಡ.

    ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts