More

    ಶ್ರದ್ಧಾ ಕಪೂರ್ ಕೊರಳಲ್ಲಿ ‘R’ ಪೆಂಡೆಂಟ್; ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ನಟಿ

    ಮುಂಬೈ: ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಖಾಸಗಿಯಾಗಿಡಲು ಬಯಸುವ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಆದರೂ ಸಿನಿ ಪ್ರಿಯರಿಗೆ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಬಿ-ಟೌನ್‌ನಲ್ಲಿ ನಟಿ ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿಯ ಅಫೇರ್‌ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

    ಇತ್ತೀಚೆಗಷ್ಟೇ ಇವರಿಬ್ಬರೂ ಅನಂತ್-ರಾಧಿಕಾ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈಗ ನಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಏನೆಂದು ತಿಳಿಯೋಣ ಬನ್ನಿ…

    ಶ್ರದ್ಧಾ ಕಪೂರ್ ನಿನ್ನೆಯಷ್ಟೇ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ಹಂಚಿಕೊಳ್ಳುವಾಗ, “ಏನೂ ಆಗುತ್ತಿಲ್ಲ, ನಾನು ಏನನ್ನೂ ಮಾಡುತ್ತಿಲ್ಲ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

    ಈ ಫೋಟೋಗಳಲ್ಲಿನ ವಿಶೇಷವೆಂದರೆ ನಟಿ ಧರಿಸಿರುವ ಚೈನ್​​​​ನಲ್ಲಿ ‘ಆರ್’ ಎಂದು ಬರೆಯಲಾಗಿದೆ. ಇದು ಫೋಟೋದಲ್ಲಿ ಕ್ಲಿಯರ್ ಆಗಿ ಕಾಣಿಸುತ್ತದೆ. ಈಗ ಇಂಥದ್ದೇನಾದರೂ ಬೆಳಕಿಗೆ ಬಂದರೆ ನೆಟ್ಟಿಗರು ಸುಮ್ಮನೆ ಕೂರುವುದು ಹೇಗೆ?ಕಾಮೆಂಟ್ ಮಾಡುವುದು ಸಹಜ.

    ಬಳಕೆದಾರರು ಹೇಳಿದ್ದೇನು?
    ಶ್ರದ್ಧಾ ಕಪೂರ್ ಅವರ ಕೊರಳಲ್ಲಿ ‘ಆರ್’ ಎಂಬ ಹೆಸರಿನ ಚೈನನ್ನು ನೋಡಿ ಬಳಕೆದಾರರು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. “ಆರ್ ಎಂದರೆ ರಾಹುಲ್ ಮೋದಿ”, “ಈ R ಯಾರು?, ಎಂದು ಪ್ರಶ್ನಿಸುವ ಮೂಲಕ ಶ್ರದ್ಧಾ ಧರಿಸಿರುವ ಚೈನು ಮತ್ತು ಅದರಲ್ಲಿರುವ ಹೆಸರು ಬಹುಶಃ ರಾಹುಲ್ ಅವರದ್ದೇ” ಎಂದು ಊಹಿಸುತ್ತಿದ್ದಾರೆ.

    ಈ ಬಗ್ಗೆ ಶ್ರದ್ಧಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ನಟಿಯ ಅಭಿಮಾನಿಗಳು ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಆದರೆ, ಈ ಸುದ್ದಿಗೆ ಶ್ರದ್ಧಾ ಯಾವಾಗ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ವದಂತಿಗಳ ಬೆನ್ನಲ್ಲೇ ಬಚ್ಚನ್ ಕುಟುಂಬದೊಂದಿಗೆ ಹೋಳಿ ಆಚರಿಸಿದ ಐಶ್ವರ್ಯಾ: ಇಲ್ಲಿವೆ ಫೋಟೋಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts