ವದಂತಿಗಳ ಬೆನ್ನಲ್ಲೇ ಬಚ್ಚನ್ ಕುಟುಂಬದೊಂದಿಗೆ ಹೋಳಿ ಆಚರಿಸಿದ ಐಶ್ವರ್ಯಾ: ಇಲ್ಲಿವೆ ಫೋಟೋಗಳು

aishu
Published on

ಮುಂಬೈ: ಬಚ್ಚನ್ ಮತ್ತು ಐಶ್ವರ್ಯಾ ಫ್ಯಾಮಿಲಿ ನಡುವೆ ಸಂಬಂಧಗಳು ಬಿರುಕು ಬಿಟ್ಟಿವೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಆದರೂ ಇತ್ತೀಚಿನ ದಿನಗಳಲ್ಲಿ ಐಶ್ವರ್ಯಾ, ಬಚ್ಚನ್ ಕುಟುಂಬದೊಂದಿಗೆ ವಿವಿಧ ಸಂದರ್ಭಗಳಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ.

ಹೌದು, ವದಂತಿ ಸುದ್ದಿಯ ನಡುವೆ ಐಶ್ವರ್ಯಾ ರೈ ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ನವ್ಯಾ ನವೇಲಿ ನಂದಾ ಅವರೊಂದಿಗೆ ಹೋಳಿ ಆಚರಿಸುತ್ತಿರುವುದು ಕಂಡುಬಂದಿದೆ.

ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೋಳಿ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಬಚ್ಚನ್ ಕುಟುಂಬ ಹೋಳಿ ಆಚರಿಸುತ್ತಿರುವುದು ಕಾಣಬಹುದು.

ಬಚ್ಚನ್ ಕುಟುಂಬ ಹೋಳಿಯನ್ನು ಇಡೀ ಕುಟುಂಬದೊಂದಿಗೆ ಮನೆಯಲ್ಲಿ ಆಚರಿಸಿತು. ಈ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಬಿಳಿ ಕುರ್ತಾ-ಪೈಜಾಮ ಧರಿಸಿ ಹೋಳಿಯಾಡುತ್ತಿರುವುದು ಕಂಡುಬಂದಿತು.

ನೀವೆಲ್ಲರೂ ಗಮನಿಸುವಂತೆ ಒಂದು ಫೋಟೋದಲ್ಲಿ ಜಯಾ ಬಚ್ಚನ್, ಗುಲಾಬಿ ಬಣ್ಣದ ಸೂಟ್‌ನೊಂದಿಗೆ ಬಿಳಿ ದುಪಟ್ಟಾವನ್ನು ಧರಿಸಿ, ಹೋಳಿ ಆಚರಣೆಗೆ ಸಿದ್ಧವಾಗುತ್ತಿರುವುದು ಕಾಣಬಹುದು.

ಮತ್ತೊಂದು ಫೋಟೋದಲ್ಲಿ, ನವ್ಯಾ ಮತ್ತು ಅಭಿಷೇಕ್ ಬಚ್ಚನ್ ಪರಸ್ಪರ ಬಣ್ಣಗಳನ್ನು ಹಚ್ಚಿಕೊಳ್ಳುತ್ತಿದ್ದಾರೆ. ಈ ಫೋಟೋದಲ್ಲಿ ಐಶ್ವರ್ಯಾ ಕೂಡ ಬಿಳಿ ಬಣ್ಣದ ಸೂಟ್ ಧರಿಸಿ ಹಿಂದೆ ನಿಂತಿದ್ದಾರೆ. ಅಂದರೆ ಐಶು ಅಭಿಷೇಕ್ ಮತ್ತು ನವ್ಯಾ ಅವರ ಫೋಟೋಗಳನ್ನು ತೆಗೆಯುತ್ತಿರುವಂತೆ ಕಾಣುತ್ತಿದೆ.

ನವ್ಯಾ ತಟ್ಟೆಯಲ್ಲಿ ಬಣ್ಣ ತುಂಬಿರುವ ಫೋಟೋವನ್ನೂ ಶೇರ್ ಮಾಡಿದ್ದು, ಫೋಟೋದೊಂದಿಗೆ ಶೀರ್ಷಿಕೆಯಲ್ಲಿ 'ಹೋಲಿಕಾ ದಹನ್ ' ಎಂದು ಬರೆದಿದ್ದಾರೆ. ನವ್ಯಾ 'ಹೋಲಿಕಾ ದಹನ್ 'ನ ತಮ್ಮ ಫೋಟೋವನ್ನು ಸಹ ಹಂಚಿಕೊಂಡಿದ್ದು, ಬಿಳಿ ಬಣ್ಣದ ಸೂಟ್ ಧರಿಸಿ ಪೋಸ್ ಕೊಡುತ್ತಿರುವುದನ್ನು ಕಾಣಬಹುದು.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಿದೆ. ಆದರೆ ಅನಂತ್ ಅಂಬಾನಿ ಅವರ ಪೂರ್ವ ವಿವಾಹ ಸಮಾರಂಭದಲ್ಲಿಯೂ ಬಚ್ಚನ್ ಕುಟುಂಬದೊಟ್ಟಿಗೆ ಐಶು ಕಾಣಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net