More

    ಕಾರಾವಾನ್​ನಲ್ಲಿ ಕುಳಿತು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರಂತೆ ಸುಶಾಂತ್​

    ಮುಂಬೈ: ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ ಅಧಿಕಾರಿಗಳ ಎದುರು ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಶನಿವಾರ ವಿಚಾರಣೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವು ಉಪಯುಕ್ತ ಮಾಹಿತಿಗಳನ್ನು ಎನ್​ಸಿಬಿ ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದ್ದು, ಈ ಪೈಕಿ, ಸುಶಾಂತ್ ಅವರು ತಮ್ಮ ಕಾರಾವಾನ್​ನಲ್ಲಿ ಕುಳಿತು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರು ಎಂದು ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್​ ಹೇಳಿದ್ದೇನು?

    ಇತ್ತೀಚೆಗೆ ಡ್ರಗ್ಸ್​ ಜಾಲ ಮತ್ತು ಬಾಲಿವುಡ್​ ನಂಟಿನ ಕುರಿತು ಎನ್​ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಬಾಲಿವುಡ್​ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​, ಶ್ರದ್ಧಾ ಕಪೂರ್​ ಮತ್ತು ರಾಕುಲ್​ ಪ್ರೀತ್​ ಸಿಂಗ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿತ್ತು. ಅದರ ಪ್ರಕಾರ, ಶನಿವಾರ ಎನ್​ಸಿಬಿ ಅಧಿಕಾರಿಗಳ ಎದುರು ಶ್ರದ್ಧಾ ಹಾಜರಾಗಿದ್ದಾರೆ.

    ಈ ಸಂದರ್ಭದಲ್ಲಿ ಅವರು ಸುಶಾಂತ್​ ಸಿಂಗ್​ ರಜಪೂತ್​ ಜತೆಗೆ ಪಾರ್ಟಿ ಮಾಡಿದ್ದಾಗಿ ಒಪ್ಪಿಕೊಂಡಿರುವ ಶ್ರದ್ಧಾ, ಸುಶಾಂತ್​ಗೆ ಡ್ರಗ್ಸ್​ ಚಟವಿತ್ತು ಎಂದು ಹೇಳಿಕೊಂಡಿದ್ದಾರಂತೆ. ಅಷ್ಟೇ ಅಲ್ಲ, ಸುಶಾಂತ್​ ಅವರು ತಮ್ಮ ಕಾರಾವಾನ್​ನಲ್ಲಿ ಕುಳಿತು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರಂತೆ. ಕೆಲವೊಮ್ಮೆ ಚಿತ್ರೀಕರಣ ವೇಳೆಯಲ್ಲೇ ಅವರು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದರು ಎಂದು ಶ್ರದ್ಧಾ ಹೇಳಿದ್ದಾರೆಂದು ಹೇಳಲಾಗಿದೆ.

    ಇನ್ನು ‘ಚಿಚ್ಚೋರೇ’ ಚಿತ್ರದ ಬಿಡುಗಡೆಯ ನಂತರ, ನಟ ಸುಶಾಂತ್​ ಸಿಂಗ್​ ತಮ್ಮ ಲೋನಾವಾಲಾದ ಪಾವನಾ ಫಾರ್ಮ್​ ಹೌಸ್​ನಲ್ಲಿ ಒಂದು ಪಾರ್ಟಿ ಆಯೋಜಿಸಿದ್ದರಂತೆ. ಈ ಪಾರ್ಟಿಯಲ್ಲಿ ಹಾಜರಿದ್ದುದಾಗಿ ಒಪ್ಪಿಕೊಂಡಿರುವ ಶ್ರದ್ಧಾ, ತಾವು ಮಾತ್ರ ಡ್ರಗ್ಸ್​ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರಂತೆ. ಅಷ್ಟೇ ಅಲ್ಲ, ಪಾರ್ಟಿಯಿಂದ ಬಹಳ ಬೇಗನೆ ಹೊರಟು ಬಿಡುತ್ತಿದ್ದಾಗಿ ಹೇಳಿಕೊಂಡಿದ್ದಾರಂತೆ.

    ಇದನ್ನೂ ಓದಿ: ಇರ್ಫಾನ್​​ ಪತ್ನಿ ಹೆರಿಗೆ ವೇಳೆ ಡಾಕ್ಟರ್​ ನರ್ವಸ್​ ಆಗಿದ್ದೇಕೆ? ಇವತ್ಯಾಕೆ ಆಕೆ ಅದನ್ನು ಹೇಳಿಕೊಂಡರು?

    ಶ್ರದ್ಧಾ ಕಪೂರ್​ ಮತ್ತು ಸುಶಾಂತ್​ ಸಿಂಗ್ ರಜಪೂತ್​ ‘ಚಿಚ್ಚೋರೇ’ ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಅಷ್ಟೇ ಅಲ್ಲ, ಸುಶಾಂತ್​ ನಿಧನರಾದಾಗ ಅವರ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿದ್ದರು. ಸುಶಾಂತ್​ ಅವರ ಮ್ಯಾನೇಜರ್​ ಆಗಿದ್ದ ಜಯಾ ಸಹಾ ಜತೆಗೆ ಚಾಟ್​ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಶ್ರದ್ಧಾ ಕಪೂರ್​ ಅವರಿಗೆ ಎನ್​ಸಿಬಿ ಅಧಿಕಾರಿಗಳು ನೋಟೀಸ್​ ನೀಡಲಾಗಿತ್ತು.

    ವಿಚಾರಣೆ ವೇಳೆ ಮೂರು ಬಾರಿ ಅತ್ತರಂತೆ ದೀಪಿಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts