More

    ನಟ ಇರ್ಫಾನ್​​ ಪತ್ನಿ ಹೆರಿಗೆ ವೇಳೆ ಡಾಕ್ಟರ್​ ನರ್ವಸ್​ ಆಗಿದ್ದೇಕೆ? ಇವತ್ಯಾಕೆ ಆಕೆ ಅದನ್ನು ಹೇಳಿಕೊಂಡರು?

    ಬೆಂಗಳೂರು: ನಟ ಇರ್ಫಾನ್​ ಖಾನ್​ ಈಗಿಲ್ಲ ನಿಜ. ಆದಾಗ್ಯೂ ಅವರ ಅಭಿಮಾನಿಗಳಿಗೆ, ಆಪ್ತರಿಗೆ ಅವರು ಆಗಾಗ ನೆನಪಾಗುತ್ತಲೇ ಇರುತ್ತಾರೆ. ಅದಕ್ಕೆ ಅವರ ಪತ್ನಿ ಸುತಾಪಾ ಸಿಕ್ದರ್ ಕೂಡ ಹೊರತೇನಲ್ಲ. ಆದರೆ ಇಂದು ಅವರು ತಮ್ಮ ಪತಿಯನ್ನು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ.

    ಇಂದು ವಿಶ್ವ ಪುತ್ರಿಯರ ದಿನ. ಈ ಹಿನ್ನೆಲೆಯಲ್ಲಿ ಇರ್ಫಾನ್​ ಅವರನ್ನು ನೆನಪಿಸಿಕೊಂಡಿರುವ ಪತ್ನಿ, ಕಲಾವಿದೆ ಸುತಾಪಾ ತಮ್ಮ ಹೆರಿಗೆಯ ದಿನಗಳನ್ನೂ ಸ್ಮರಿಸಿಕೊಂಡಿದ್ದಾರೆ. ಅದು ನನ್ನ ಎರಡನೆಯ ಹೆರಿಗೆ ಸಂದರ್ಭ. ನನಗೆ ಹಾಗೂ ಇರ್ಫಾನ್​ ಇಬ್ಬರಿಗೂ ಒಂದು ಹೆಣ್ಣು ಮಗು ಬೇಕೇಬೇಕು ಎಂಬ ಮಹದಾಸೆ ಇತ್ತು. ಎರಡನೆಯ ಮಗು ಹೆಣ್ಣಾದೀತು ಎಂಬ ನಿರೀಕ್ಷೆಯಲ್ಲಿ ನಾವಿಬ್ಬರೂ ಇದ್ದೆವು.

    ಎಷ್ಟರಮಟ್ಟಿಗೆ ಎಂದರೆ, ನಾನು ಮಗುವಿಗೆ ಜನ್ಮ ನೀಡಿದಾಗ, ಹುಟ್ಟಿದ್ದು ಮಗ ಎಂದು ಹೇಳಲೂ ಡಾಕ್ಟರ್ ನರ್ವಸ್​ ಆಗಿದ್ದರು. ‘ಕಂಗ್ರಾಚ್ಯುಲೇಷನ್​.. ಹೆಲ್ದಿ ಚೈಲ್ಡ್​..’ ಎಂದಷ್ಟೇ ಹೇಳಿದ್ದ ಡಾಕ್ಟರ್, ಹುಟ್ಟಿದ್ದು ಗಂಡೋ ಹೆಣ್ಣೋ ಎಂಬುದನ್ನು ಹೇಳಲು ಹಿಂಜರಿದಿದ್ದರು ಎಂಬುದನ್ನು ಸುತಾಪಾ ಇಂದು ಸ್ಮರಿಸಿಕೊಂಡಿದ್ದಾರೆ.

    ಇದೇ ಏಪ್ರಿಲ್​ 29ರಂದು ಇರ್ಫಾನ್​ ಎಲ್ಲರನ್ನೂ ಅಗಲಿದ್ದರು. ಪತ್ನಿ ಸುತಾಪಾ ಈಗ ತಮ್ಮ ಇಬ್ಬರು ಗಂಡು ಮಕ್ಕಳು ಬಬಿಲ್​ ಹಾಗೂ ಅಯನ್​ ಅವರೊಂದಿಗೆ ಜೀವನ ಸಾಗಿಸುತ್ತಿದ್ದು, ಅಗಲಿರುವ ಪತಿ ಇರ್ಫಾನ್​ ಅವರನ್ನು ಇಂದು ಪುತ್ರಿಯರ ದಿನದ ಸಂದರ್ಭದಲ್ಲಿ ಸ್ಮರಿಸಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಟ ಇರ್ಫಾನ್​​ ಪತ್ನಿ ಹೆರಿಗೆ ವೇಳೆ ಡಾಕ್ಟರ್​ ನರ್ವಸ್​ ಆಗಿದ್ದೇಕೆ? ಇವತ್ಯಾಕೆ ಆಕೆ ಅದನ್ನು ಹೇಳಿಕೊಂಡರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts