

ಕೊಕ್ಕಡ: ಪೋರ್ಕಳ ಮೀಸಲು ರಕ್ಷಿತಾರಣ್ಯ ಹಾಗೂ ನಿಡ್ಲೆ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿದ್ದ ಪೆರಿಯಶಾಂತಿ, ನಿಡ್ಲೆ ರಸ್ತೆಯುದ್ಧಕ್ಕೂ ಇರುವ ಅನಧಿಕೃತ ಗೂಡಂಗಡಿಗಳನ್ನು ಜು.21ರಂದು ತೆರವುಗೊಳಿಸಲಾಯಿತು.
ಜುಲೈ 20ರ ಮಧ್ಯಾಹ್ನದ ಒಳಗೆ ಗೂಡಂಗಡಿ ವಾರಸುದಾರರೇ ಸಂಪೂರ್ಣವಾಗಿ ತೆರವುಗೊಳಿಸುವಂತೆ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ರಾವೇಂದ್ರ ಖಡಕ್ ಸೂಚನೆ ನೀಡಿದ್ದು, ಕೆಲವರು ಸೂಚನೆಗೆ ಪ್ರತಿಕ್ರಿಯಿಸಿ ಅಂಗಡಿ ತೆರವುಗೊಳಿಸಿದರೆ ಇನ್ನು ಕೆಲವರು ಹಾಗೆಯೇ ಉಳಿಸಿದ್ದರು. ಜುಲೈ 21ರ ಬೆಳಗ್ಗಿನಿಂದಲೇ ತೆರವು ಕಾರ್ಯಾಚರಣೆ ನಡೆಸಿ ಫೋರ್ಕಳ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿದ್ದ 48 ಅನಧಿಕೃತ ಗೂಡಂಗಡಿಗಳು ಹಾಗು ನಿಡ್ಲೆ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವ 10 ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.