

ವಿಟ್ಲ: ಕೆಲಿಂಜದಲ್ಲಿ ನಡೆದ ಕಾರು ಮತ್ತು ಟಿಪ್ಪರ್ ನಡುವಿನ ಅಪಘಾತದಲ್ಲಿ ಕಾರು ಚಾಲಕ ಅನಂತಾಡಿ ಅಶ್ವತ್ತಡಿ ನಿವಾಸಿ ಅನೀಶ್ ಅನಂತಾಡಿ(೩೪) ಎಂಬುವರು ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಗೀತಾ, ವಿಸ್ತೃತ್, ಲತಿಕಾ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ಲಾರಿ ಚಾಲಕ ಪುನೀತ್ ಕುಮಾರ್ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತ ಅನೀಶ್ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರೆನ್ನಲಾಗಿದೆ.