ಪೆರಿಯಡ್ಕದಲ್ಲಿ ಶತಕ ತಾಳಮದ್ದಳೆ ಸಂಭ್ರಮ

New Project
Published on

ಉಪ್ಪಿನಂಗಡಿ: ಪೆರಿಯಡ್ಕದ ಸಾಂಸ್ಕೃತಿಕ ಕಲಾ ವೇದಿಕೆ ತಿಂಗಳಿಗೊಂದು ತಾಳಮದ್ದಳೆ ಕೂಟ ನಡೆಸುತ್ತಿದ್ದು, ಅದರ ಶತಕ ತಾಳಮದ್ದಳೆ ವಿಶೇಷ ಕಾರ್ಯಕ್ರಮ ಪೆರಿಯಡ್ಕ ದುರ್ಗಾ ಕಲಾಮಂದಿರದಲ್ಲಿ ಜರುಗಿತು.

ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಅಧ್ಯಕ್ಷ ಪ್ರಸನ್ನ ಕುಮಾರ್ ಉದ್ಘಾಟಿಸಿದರು.

ವೇದಿಕೆ ಸಂಚಾಲಕ ಮಹಾಲಿಂಗೇಶ್ವರ ಭಟ್ ಕೆ. ಉಪಸ್ಥಿತರಿದ್ದರು. ಬಳಿಕ ವಿವಿಧ ಯಕ್ಷಗಾನ ಸಂಘಗಳ ಹವ್ಯಾಸಿ ಕಲಾವಿದರಿಂದ ಚೂಡಾಮಣಿ, ಕೃಷ್ಣ ಸಂಧಾನ, ಕದಂಬ ಕೌಶಿಕೆ ತಾಳಮದ್ದಳೆ ಜರುಗಿತು. ಕಲಾವಿದರಾಗಿ ಆನಂದ ಸವಣೂರು, ಗೋಪಾಲಕೃಷ್ಣ ಭಟ್ ನೈಮಿಷ, ಪ್ರಕಾಶ್ ಅಭ್ಯಂಕರ್, ಮುರಳಿಧರ ಕಲ್ಲೂರಾಯ, ಅರ್ಜುನ ಅಭ್ಯಂಕರ್ ಬೆಳ್ತಂಗಡಿ, ಹರಿಕಿರಣ ಕೊಯ್ಲ, ಕೃಷ್ಣಮೂರ್ತಿ ಕೆಮ್ಮಾರ, ತಾರಾನಾಥ ಸವಣೂರು, ಶ್ರುತಿ ವಿಸ್ಮಿತ್, ಜಿನೇಂದ್ರ ಜೈನ್, ಮಹಾಲಿಂಗೇಶ್ವರ ಭಟ್ ಕೆ., ಡಿ.ಕೆ.ಆಚಾರ್ಯ ಹಳೆನೇರೆಂಕಿ, ಮೋಹನ ಶರವೂರು, ಶ್ರೀಹರಿ ನಗ್ರಿ, ಅಕ್ಷಯ ರಾಮಕುಂಜ, ಪ್ರಭಾಕರ ಆಳ್ವ, ದಿವಾಕರ ಆಚಾರ್ಯ ಗೇರುಕಟ್ಟೆ, ಜಿನೇಂದ್ರ ಜೈನ್ ಬಳ್ಳಮಂಜ, ಹರೀಶ ಆಚಾರ್ಯ ಬಾರ್ಯ, ರಾಘವೇಂದ್ರ ಭಟ್ ತೋಟಂತಿಲ, ಪದ್ಮನಾಭ ಕುಲಾಲ್, ಸುರೇಶ್ ರಾವ್.ಬಿ., ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಗುಡ್ಡಪ್ಪ ಬಲ್ಯ, ಶ್ರೀಧರ ಎಸ್ಪಿ ಸುರತ್ಕಲ್, ಬಾಲಕೃಷ್ಣ ಕೇಪುಳು, ದಿವಾಕರ ಆಚಾರ್ಯ ಹಳೆನೇರೆಂಕಿ, ಸಂಜೀವ ಪಾರೆಂಕಿ, ಪ್ರದೀಪ ಹೆಬ್ಬಾರ್ ಚಾರ, ನಾರಾಯಣ ಭಟ್ ಅಲಂಕಾರು, ಜಯರಾಮ ಬಲ್ಯ ಭಾಗವಹಿಸಿದ್ದರು.

ಸಾಂಸ್ಕೃತಿಕ ಕಲಾ ವೇದಿಕೆ ಸಂಚಾಲಕರಾದ ಮಹಾಲಿಂಗೇಶ್ವರ ಭಟ್ ಕೆ., ದುರ್ಗಾಮಣಿ ಎಂ. ಅವರನ್ನು ಭಾಗವತ ಡಿ.ಕೆ.ಆಚಾರ್ಯ ಹಳೆನೇರೆಂಕಿ ಗೌರವಿಸಿದರು. ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದಿಸಿದರು. ಕಲಾವಿದ ದಿವಾಕರ ಆಚಾರ್ಯ ಹಳೆನೇರಂಕಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net