More

    ಧಾರಾವಾಹಿ ಶೂಟಿಂಗ್ ಮುಂದಕ್ಕೆ; ಜೂನ್‌ನಿಂದ ಹೊಸ ಎಪಿಸೋಡ್‌ಗಳು

    ಧಾರಾವಾಹಿಗಳ ಚಿತ್ರೀಕರಣದ ವಿಷಯವಾಗಿ ಮತ್ತೊಂದ್ರ ಸುದ್ದಿ ಬಂದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸೋಮವಾರದಿಂದ (ಮೇ 11) ಹೊಸ ಕಂತುಗಳ ಚಿತ್ರೀಕರಣ ಪ್ರಾರಂಭವಾಗಿ, ಆ ಕಂತುಗಳ ಪ್ರಸಾರ ಮೇ 18ರಿಂದ ಶುರುವಾಗಬೇಕಿತ್ತು. ಆದರೆ, ಇದೀಗ ಚಿತ್ರೀಕರಣ ಮುಂದಕ್ಕೆ ಹೋಗಿದ್ದು, ಮೇ 25ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಕುರಿತು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಧಾರಾವಾಹಿ ಪ್ರಿಯರಿಗೆ ಸಿಹಿ ಸುದ್ದಿ, ಮೇ 11ರಿಂದ ಚಿತ್ರೀಕರಣ; 18ರಿಂದ ಹೊಸ ಕಂತುಗಳ ಪ್ರಸಾರ

    ಕಿರುತೆರೆಯನ್ನೇ ನಂಬಿಕೊಂಡು ಬದುಕುತ್ತಿರುವ ಹಲವು ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಆದಷ್ಟು ಬೇಗ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ, ಮೇ 11ರಿಂದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಅನುಮತಿ ನೀಡಿತ್ತು. ಅದರ ಮೇರೆಗೆ, ಇದುವರೆಗಿನ ಕಥೆಯನ್ನು ಒಂದು ವಾರದಲ್ಲಿ ಪ್ರಸಾರ ಮಾಡಿ, ಮೇ 18ರಿಂದ ಹೊಸ ಕಂತುಗಳನ್ನು ಪ್ರಸಾರ ಮಾಡುವ ಬಗ್ಗೆ ಎಲ್ಲಾ ಚಾನಲ್‌ಗಳು ಚಿಂತನೆ ನಡೆಸಿದ್ದವು.

    ಇದನ್ನೂ ಓದಿ: ಜಗ್ಗೇಶ್ 24 ಕೆಜಿ ತೂಕ ಇಳಿಸಿದ್ದು ಹೇಗೆ?

    ಈ ಕುರಿತು ಇಂದು ಸಭೆ ನಡೆಸಿದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ನ ಕಾರ್ಯಕಾರಿ ಸಮಿತಿಯು, ಹಲವು ವಿಷಯಗಳನ್ನು ಗಣನೆಗೆ ತೆಗೆದುಕೊಂಡು, ಚಿತ್ರೀಕರಣವನ್ನು ಮೇ 25ರಿಂದ ಪ್ರಾರಂಭಿಸಬೇಕು ಎಂದು ಹೇಳಿದೆ. ಆರೋಗ್ಯ ದೃಷ್ಟಿಯಿಂದ ಮತ್ತು ಸಾಮಾಜಿಕ ಕಳಕಳಿಯಿಂದ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

    ಅಲ್ಲಿಗೆ ಮೇ 25ರಿಂದ ಹೊಸ ಕಂತುಗಳ ಚಿತ್ರೀಕರಣ ಶುರುವಾದರೆ, ಜೂನ್ ಒಂದರ ಸೋಮವಾರದಿಂದ ಆ ಕಂತುಗಳ ಪ್ರಸಾರ ಪ್ರಾರಂಭವಾಗಲಿದೆ.

    ನನ್ ಹೊಟ್ಟೆ ಮೇಲೆ ಯಾಕೆ ಹೊಡೀತೀಯೋ ಮಾರಾಯ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts