ಕೊನೆಯ ಹಂತದಲ್ಲಿ ಘೋಸ್ಟ್; ಏಳು ದಿನಗಳ ಚಿತ್ರೀಕರಣದ ಬಳಿಕ ಕುಂಬಳಕಾಯಿ

shivarajkumar and shrini
Published on

ಬೆಂಗಳೂರು: ಶಿವರಾಜಕುಮಾರ್ ಅಭಿನಯಿಸುತ್ತಿರುವ ಶ್ರೀನಿ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಘೋಸ್ಟ್’. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಡುಗಡೆಯಾಗಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಶಿವರಾಜಕುಮಾರ್ ಜತೆ ಬಾಲಿವುಡ್ ನಟ ಅನುಪಮ್ ಖೇರ್ ಮಲಯಾಳಂ ನಟ ಜಯರಾಂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರಿಗೂ ಇದು ಮೊದಲ ಕನ್ನಡ ಸಿನಿಮಾ ಎಂಬುದು ವಿಶೇಷ.

‘ಘೋಸ್ಟ್’ ಕಳ್ಳತನದ ಸುತ್ತ ಸುತ್ತುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಮೂರು ವಿಭಿನ್ನ ಶೇಡ್‌ಗಳಲ್ಲಿ ಶಿವರಾಜಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ನಿರ್ದೇಶಕ ಶ್ರೀನಿ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಬಿಜಿಯಿದ್ದಾರೆ. ‘ಅಂತಿಮ ಹಂತದ ಶೂಟಿಂಗ್ ಸೋಮವಾರದಿಂದ ಪ್ರಾರಂಭಿಸಲಿದ್ದೇವೆ. ರಾತ್ರಿ ಶೂಟಿಂಗ್ ಇರಲಿದೆ. ಏಳು ದಿನಗಳ ಕಾಲ ಚಿತ್ರೀಕರಣ ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಶಿವಣ್ಣ ಅವರ ಒಂದು ೈಟ್ ಮತ್ತು ಕೆಲ ಮಾತಿನ ಭಾಗದ ಚಿತ್ರೀಕರಣ ನಡೆಸಲಿದ್ದೇವೆ. ಅದಾಗುತ್ತಲೇ ಕೆಲವೇ ದಿನಗಳಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡುವ ಆಲೋಚನೆ ಇದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಶ್ರೀನಿ.

‘ಘೋಸ್ಟ್’ ಮತ್ತು ‘ಬೀರ್‌ಬಲ್’ ಸರಣಿಗಳನ್ನು ಒಂದೇ ವೇದಿಕೆಗೆ ತರುವ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮ್ಯಾಟಿಕ್ ಯೂನಿವರ್ಸ್ ಪ್ರಯೋಗಿಸುತ್ತಿರುವ ಶ್ರೀನಿ, ಈಗಾಗಲೇ ‘ಘೋಸ್ಟ್ 2’ ಬರುವ ಮಾಹಿತಿಯಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಘೋಸ್ಟ್’ ಕೆಲವೇ ತಿಂಗಳಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net