More

    ‘ಶಿವಣ್ಣನ ಇನ್​ಸ್ಪೆಕ್ಟರ್​ ವಿಕ್ರಂಗೂ ನಮ್ಮ ವಿಕ್ರಂಗೂ ಸಂಬಂಧವಿಲ್ಲ’… ನಿರ್ದೇಶಕ ನರಸಿಂಹ ಸ್ಪಷ್ಟನೆ

    ಬೆಂಗಳೂರು: ಪ್ರಜ್ವಲ್ ದೇವರಾಜ್ ನಟನೆಯ ‘ಇನ್​ಸ್ಪೆಕ್ಟರ್ ವಿಕ್ರಂ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಫೆ.5ಕ್ಕೆ ದಿನಾಂಕವೂ ನಿಗದಿಯಾಗಿದೆ. ಆ ವಿಚಾರವನ್ನು ಘೋಷಿಸಿಕೊಳ್ಳಲೆಂದೇ ಚಿತ್ರತಂಡ ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದಿತ್ತು. ಕಾಯುವಿಕೆಗೆ ಕೊನೆಗೂ ತೆರೆಎಳೆದು ಚಿತ್ರಮಂದಿರಕ್ಕೆ ಬರಲು ಸಿದ್ಧರಾಗಿದ್ದೇವೆ ಎಂದಿತು ತಂಡ.

    ಕರೊನಾ ಬಳಿಕ ದೊಡ್ಡ ದೊಡ್ಡ ಸಿನಿಮಾಗಳ ಬಿಡುಗಡೆ ಪರ್ವ ಶುರುವಾಗಿದ್ದರ ಹಿನ್ನೆಲೆಯಲ್ಲಿ ನಾವೂ ಬರುತ್ತಿದ್ದೇವೆ ಎಂದು ನಿರ್ಮಾಪಕ ವಿಖ್ಯಾತ್​ ತಿಳಿಸಿದ್ದಾರೆ. ರಾಜ್ಯಾದ್ಯಂತ ಸರಿಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವ ಪ್ಲ್ಯಾನ್ ನಿರ್ಮಾಪಕರು ಮತ್ತು ವಿತರಕ ಜಗದೀಶ್ ಅವರದ್ದು.

    ಇದನ್ನೂ ಓದಿ: ಬಾಬು ಕೃಷ್ಣಮೂರ್ತಿ ಮತ್ತು ಎನ್​. ಕುಮಾರ್‌ಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

    ನರಸಿಂಹ ನಿರ್ದೇಶನದ ‘ಇನ್​ಸ್ಪೆಕ್ಟರ್ ವಿಕ್ರಂ’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಈ ಹಿಂದಿನ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಅದ್ದೂರಿ ಬಜೆಟ್​​ನ ಸಿನಿಮಾ ಇದು. ಇನ್ನು ಚಿತ್ರ ಬಿಡುಗಡೆ ಆಗುತ್ತಿರುವ ಬಗ್ಗೆ ನಾಯಕ ಪ್ರಜ್ವಲ್ ಸಹ ಮಾತನಾಡಿದ್ದಾರೆ. ‘ಶೂಟ್ ಮುಗಿಸಿಕೊಂಡು ಕಳೆದೊಂದು ವರ್ಷ ಕೆಲಸ ಇರಲಿಲ್ಲ.. ನರಸಿಂಹ ನಿರ್ದೇಶನದ ‘ಇನ್​ಸ್ಪೆಕ್ಟರ್ ವಿಕ್ರಂ’ ಎರಡೂವರೆ ವರ್ಷದ ಕನಸು. ನಾನು ಇಮ್ಯಾಜಿನ್ ಮಾಡಿದ್ದಕ್ಕಿಂತ 100 ಪಟ್ಟು ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾ 2020 ವರ್ಷವನ್ನು ಮರೆಯುವಂತೆ ಮಾಡಲಿದೆ ಎಂಬ ನಂಬಿಕೆ ಇದೆ. ಆ್ಯಕ್ಷನ್ ಜತೆಗೆ ಅಷ್ಟೇ ಕಾಮಿಡಿಯೂ ಸಿನಿಮಾದಲ್ಲಿರಲಿದೆ. ಜನರಿಗೆ ಮನರಂಜನೆ ನೀಡಲಿದ್ದೇವೆ. ಕಷ್ಟಕರ ಕಾಲವನ್ನು ದಾಟಿ ಬಂದಿದ್ದೇವೆ’ ಎಂದರು.

    ಅದೇ ರೀತಿ ಚಿತ್ರದ ನಿರ್ಮಾಪಕ ವಿಖ್ಯಾತ ಸಹ ಚಿತ್ರದ ಬಗ್ಗೆ ಬಂದಷ್ಟು ಮಾಹಿತಿ ನೀಡಿದರು. ‘ಹಳೇಯ ‘ಇನ್​ಸ್ಪೆಕ್ಟರ್ ವಿಕ್ರಂ’ ಅವರನ್ನು ಈ ಸಿನಿಮಾದಲ್ಲಿಯೂ ನೋಡಬಹುದು. ಅಂದರೆ, ಶಿವಣ್ಣ ಅವರಿಂದ ಈ ಚಿತ್ರಕ್ಕೆ ವಾಯ್ಸ್​ಓವರ್ ಕೊಡಿಸಲಿದ್ದೇವೆ. ಅದ್ಹೇಗೆ ಅಂದರೆ, 32 ವರ್ಷದ ಹಿಂದೆ ತೆರೆಕಂಡಿದ್ದ ಆ ಸಿನಿಮಾದಲ್ಲಿ ಶಿವಣ್ಣ ಸಹ ಪೊಲೀಸ್ ಪಾತ್ರ ಮಾಡಿದ್ದರು. ಇದೀಗ ಅವರ ಡ್ಯೂಟಿಯನ್ನು ಈ ವಿಕ್ರಂಗೆ ಹಸ್ತಾಂತರಿಸುವ ಕೆಲಸವಾಗಲಿದೆ. ಹಾಗಂತ ಅವರೇನು ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲ ಬದಲಿಗೆ ಅವರ ಧ್ವನಿ ಮೂಲಕ ರಂಜಿಸಲಿದ್ದಾರೆ. ಇನ್ನುಳಿದಂತೆ ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. 26ಕ್ಕೆ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ: ಬುರ್ಜ್ ಖಲೀಫಾ ಮೇಲೆ ಕಿಚ್ಚನ ಕಟೌಟ್

    ಶಿವಣ್ಣ ಅವರ ಪಾತ್ರವೇ ಈ ‘ಇನ್​ಸ್ಪೆಕ್ಟರ್ ವಿಕ್ರಂ’ ಚಿತ್ರಕ್ಕೆ ಸ್ಫೂರ್ತಿ ಎಂದರು ನಿರ್ದೇಶಕ ನರಸಿಂಹ. ಇಲ್ಲಿಯೂ ಅಷ್ಟೇ ಕಾಮಿಡಿ ಮತ್ತು ಆ್ಯಕ್ಷನ್​ ಇರಲಿದೆ. ಸದ್ಯದಲ್ಲೇ ಟ್ರೇಲರ್​ ಮೂಲಕ ಅದೆಲ್ಲವನ್ನು ನೀವು ಕಣ್ತುಂಬಿಕೊಳ್ಳಬಹುದು ಎಂದರು. ಇನ್ನುಳಿದಂತೆ ರಘು ಮುಖರ್ಜಿ, ಧರ್ಮಣ್ಣ ಸಿನಿಮಾ ಬಗ್ಗೆ ಮಾತನಾಡಿದರು. ಈ ಚಿತ್ರದಲ್ಲಿ ಪ್ರಜ್ವಲ್​ಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸಿದ್ದಾರೆ.

    ಬೆಳ್ಳಿತೆರೆಯ ಮೇಲೆ ಶ್ರೀಜಗನ್ನಾಥದಾಸರ ಜೀವನಚರಿತ್ರೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts