More

    ಬೆಳ್ಳಿತೆರೆಯ ಮೇಲೆ ಶ್ರೀಜಗನ್ನಾಥದಾಸರ ಜೀವನಚರಿತ್ರೆ …

    ಮಂತ್ರಾಲಯ: ಮಧುಸೂದನ್ ಹವಾಲ್ದಾರ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಶ್ರೀ ಜಗನ್ನಾಥದಾಸರು’ ಚಲನಚಿತ್ರ ಹಾಗೂ ಧಾರಾವಾಹಿಯ ಮುಹೂರ್ತ ಕಾರ್ಯಕ್ರಮ ಇತ್ತೀಚೆಗಷ್ಟೇ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ನೆರವೇರಿದೆ.

    ಬೆಳ್ಳಿತೆರೆಯ ಮೇಲೆ ಶ್ರೀಜಗನ್ನಾಥದಾಸರ ಜೀವನಚರಿತ್ರೆ ...

    ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಈ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರ ಹಾಗೂ ಧಾರಾವಾಹಿಯ ಚಿತ್ರೀಕರಣಕ್ಕೆ ಅಧಿಕೃತವಾಗಿ ಚಾಲನೆ ನೀಡಿದದ್ದಾರೆ.

    ಇದನ್ನೂ ಓದಿ: ಕಾಲಿವುಡ್​ನ ಖ್ಯಾತ ನಿರ್ದೇಶಕ ಶಂಕರ್ ಜತೆ ಯಶ್ ಸಿನಿಮಾ?

    ಜಗನ್ನಾಥದಾಸರು ರಾಘವೇಂದ್ರ ಶ್ರೀ ಅನುಯಾಯಿಗಳು. ಅವರ ಬಾಲ್ಯ, ಯೌವ್ವನ ಹಾಗೂ ಆಧ್ಯಾತ್ಮಿಕ ಜೀವನದ ಕುರಿತಂತೆ ರಚಿಸಲಾಗಿರುವ ಕಥಾಸಾರವನ್ನು ಈ ಚಿತ್ರದ ಮೂಲಕ ನಿರ್ದೇಶಕ ಮಧುಸೂದನ್ ಅವರು ಹೇಳಹೊರಟಿದ್ದಾರೆ.

    ಟಿ.ಎನ್. ಸೀತಾರಾಂ ಅವರ ಸಹಾಯಕ ನಿರ್ದೇಶಕರಾಗಿದ್ದ ಮಧುಸೂದನ್ ಅವರು ಕೆಲವು ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದರಲ್ಲದೆ, ಕೆಲ ಕಿರುಚಿತ್ರಗಳನ್ನೂ ಸಹ ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲಚಿತ್ರ.

    ಇದನ್ನೂ ಓದಿ: ಐ ಲವ್ ಯೂ ರಚ್ಚು: ರಚಿತಾ ಹೊಸ ಸಿನಿಮಾ; ಶಶಾಂಕ್ ಕಥೆಗೆ ಅಜೇಯ್ ಹೀರೋ

    ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಮಧುಸೂದನ್, ‘ಮಹಾನ್ ಕೃತಿಗಳನ್ನು ರಚಿಸಿದಂಥ ಜಗನ್ನಾಥದಾಸರ ಜೀವನ ಕುರಿತಂತೆ ಯಾರೂ ಸಹ ಚಲನಚಿತ್ರ ಮಾಡಿಲ್ಲ. ಈ ಕುರಿತಂತೆ ಜೆ.ಎಂ.ಪ್ರಹ್ಲಾದ್ ಅವರ ಜತೆ ಚರ್ಚಿಸಿ ಸಂಪೂರ್ಣ ಚಿತ್ರಕಥೆಯನ್ನು ಸಿದ್ದಪಡಿಸಿಕೊಂಡು, ಅದಕ್ಕೆ ಸರಿಯಾದ ಪಾತ್ರಧಾರಿಗಳನ್ನು ಹುಡುಕಿ ಈಗ ಚಿತ್ರೀಕರಣಕ್ಕೆ ಹೊರಟಿದ್ದೇವೆ. ರಾಯರ ಮಠದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಿ ನಂತರ ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ 90 ದಿನಗಳ ಕಾಲ ಚಿತ್ರೀಕರಸಲಾಗುತ್ತದೆ’ ಎಂದು ಹೇಳಿದರು.

    ನೀನಾಸಂ ಪ್ರತಿಭೆ ಶರತ್ ಜೋಷಿ ಅವರನ್ನು ಜಗನ್ನಾಥದಾಸರ ಪಾತ್ರಕ್ಕಾಗಿ ಆಯ್ಕೆಯಾಗಿದ್ದು, ಮಿಕ್ಕಂತೆ ಹಿರಿಯ ಕಲಾವಿದರಾದ ರಮೇಶ್ ಭಟ್, ಸುಧಾರಾಣಿ, ಸುಚೇಂದ್ರ ಪ್ರಸಾದ್​, ಶಿವರಾಮಣ್ಣ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಘವೇಂದ್ರ ಶ್ರೀಗಳ ಪಾತ್ರವನ್ನು ರಾಯಚೂರಿನ ಸಿದ್ದಪ್ಪ ಎನ್ನುವವರು ಮಾಡುತ್ತಿದ್ದು, ವಿಠ್ಠಲನ ಪಾತ್ರಕ್ಕೆ ಅಜಿತ್‌ಕುಮಾರ್ ಆಯ್ಕೆಯಾಗಿದ್ದಾರೆ.

    ಧ್ರುವ ಸರ್ಜಾ ಬಾಯಲ್ಲಿ ಪೊಗರು ಮಾತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts