ಬಾಬು ಕೃಷ್ಣಮೂರ್ತಿ ಮತ್ತು ಎನ್​. ಕುಮಾರ್‌ಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

Sri Raghavendra Chitravani Awards - Final
Published on

ಬೆಂಗಳೂರು: ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44ನೇ ವಾರ್ಷಿಕೋತ್ಸವ ಹಾಗೂ 20ನೇ ಪ್ರಶಸ್ತಿ ಸಮಾರಂಭ ಜನವರಿ 25ರಂದು ನಡೆಯಲಿದೆ. ಅಂದು ಸಂಸ್ಥೆಯ ಸ್ಥಾಪಕರಾದ ದಿವಂಗತ ಡಿ.ವಿ.ಸುಧೀಂದ್ರ ಅವರ ಹುಟ್ಟುಹಬ್ಬವಿದ್ದು, ಅವರ ಜ್ನಾಪಕಾರ್ಥವಾಗಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಪ್ರತೀವರ್ಷ 11ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಕಳೆದ ವರ್ಷ ಕರೊನಾದಿಂದ ಹೆಚ್ಚು ಚಿತ್ರಗಳು ತೆರೆಕಾಣದ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ನಾಲ್ಕು ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದೆ. ಪತ್ರಕರ್ತರು ಮತ್ತು ನಿರ್ಮಾಪಕರಿಗೆ ನೀಡಲಾಗುವ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಯನ್ನು ಬಾಬು ಕೃಷ್ಣಮೂರ್ತಿ ಮತ್ತು ಎನ್. ಕುಮಾರ್ ಅವರಿಗೆ ಕ್ರಮವಾಗಿ ನೀಡಲಾಗುತ್ತಿದೆ.

ಹಿರಿಯ ಗಾಯಕಿಗೆ ನೀಡಲಾಗುವ ಡಾ. ರಾಜಕುಮಾರ್ ಪ್ರಶಸ್ತಿಯನ್ನು ಇಂದು ವಿಶ್ವನಾಥ್ ಪಡೆದರೆ, ಭಾರತಿ ವಿಷ್ಣುವರ್ಧನ್ ತಮ್ಮ ಸಹೋದರ ದಿವಂಗತ ಆರ್. ಶೇಷಾದ್ರಿ ಅವರ ನೆನಪಲ್ಲಿ ನೀಡುತ್ತಿರುವ ಪ್ರಶಸ್ತಿಯನ್ನು ಇಂದ್ರಜಿತ್ ಲಂಕೇಶ್ ಅವರಿಗೆ ನೀಡಲಾಗುತ್ತಿದೆ.

ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ಜನವರಿ 25ರಂದು ಸಂಜೆ ಐದಕ್ಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net