ಸೊರಬ: ತಾಲೂಕಿನಲ್ಲಿ ಮಳೆ ಆಗಾಗ್ಗೆ ಸುರಿಯುತ್ತಿದ್ದು, ಮುಂಗಾರಿನ ಕೃಷಿ ಚಟುವಟಿಕೆಗೆ ಕೊಂಚ ಅಡಚಣೆಯಾಗಿದೆ. ವಾತಾವರಣ ತೇವಾಂಶದಿಂದ ಕೂಡಿರುವ ಹಿನ್ನೆಲೆಯಲ್ಲಿ ಬೇಸಿಗೆ ಕೃಷಿ ಉತ್ಪನ್ನಗಳಾದ ಮೆಕ್ಕೆಜೋಳ, ಭತ್ತ ಸಂಸ್ಕರಣೆಗೆ ತೊಂದರೆಯಾಗಿದೆ.
ಕೆಲ ಸಮಯ ಬಿಸಿಲು, ಮತ್ತೆ ಮಳೆ ಬರುತ್ತಿರುವುದರಿಂದ ಸಮಸ್ಯೆ ತಂದೊಡ್ಡಿದೆ. ಕೆಲವೆಡೆ ಹಾಕಿದ್ದ ಜೋಳದ ರಾಶಿ ಮಳೆಯಲ್ಲಿ ನೆನೆದು ಹಾಳಾಗುತ್ತಿದೆ. ಇದರಿಂದ ಕಡಿಮೆ ಬೆಲೆಗೆ ಖರೀದಿಗೆ ಕೇಳುತ್ತಿದ್ದಾರೆ.
ಭಾನುವಾರ ಬೆಳಗ್ಗೆಯಿಂದ ಮಳೆ ಜೋರಾಗಿದೆ. ರಸ್ತೆ ಮೇಲೆ ಒಣಗಲು ಹಾಕಿದ್ದ ಜೋಳದ ರಾಶಿಗೆ ನೀರು ನುಗ್ಗಿದೆ. ಹಳ್ಳ-ಕೊಳ್ಳಗಳು, ವರದಾ ಮತ್ತು ದಂಡಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.