ಹೊಸನಗರ: ಸ್ವಾಮಿ ವಿವೇಕಾನಂದರ ಸಂದೇಶವು ದೇಶದ ಯುವಜನತೆಗೆ ಪ್ರೇರಕಶಕ್ತಿ ಎಂದು ಬಿಜೆಪಿ ಮುಖಂಡ ಎನ್.ಆರ್.ದೇವಾನಂದ್ ಹೇಳಿದರು.
ವಿವೇಕಾನಂದರ ಜಯಂತಿ ಅಂಗವಾಗಿ ಹೊಸನಗರ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ್ದ ವಿವೇಕ ನಡಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಚಿಕಾಗೋ ಸಮಾವೇಶದಲ್ಲಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ, ಸಂಸ್ಕೃತಿ ಮತ್ತು ಇತಿಹಾಸ ಕುರಿತು ಮಾಡಿದ ಪ್ರಸಿದ್ಧ ಭಾಷಣ ವಿಶ್ವದ ಗಮನ ಸೆಳೆಯಿತು. ಅವರ ವ್ಯಕ್ತಿತ್ವ, ವಿಜ್ಞಾನ ಮತ್ತು ವೇದಾಂತದಲ್ಲಿ ಅಪಾರ ಜ್ಞಾನ, ಶಾಂತಿ ಮತ್ತು ಮಾನವೀಯತೆ ಮೌಲ್ಯಗಳ ಗ್ರಂಥವಾಗಿದ್ದರು ಎಂದು ತಿಳಿಸಿದರು.
ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನದಿಂದ ಆರಂಭಗೊಂಡ ವಿವೇಕ ನಡಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹೊಸನಗರ ಮಂಡಲದ ಮಲ್ಲಿಕಾರ್ಜುನ್, ಶ್ರೀಧರ್ ಉಡುಪ, ಹಾಲ್ಗದ್ದೆ ಉಮೇಶ್, ಸುಧಾಕರ್, ಶ್ರೀಪತಿ ರಾವ್, ವಿಶ್ವನಾಥ್ ಗಂದರಳ್ಳಿ, ಅಂಕಿತ್ ಮಕೇರಿ, ಅಭಿಲಾಷ್ ಚಿಕ್ಕಮಣತಿ, ಗಗನ್, ಮಹೇಂದರ್, ಕಾರ್ಯಕರ್ತರಿದ್ದರು.