ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲಿ

18 skp 2
ಶಿಕಾರಿಪುರದ ಪುಷ್ಪ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಪ್ರಶಾಂತ್ ನಾಯಕ್ ಉದ್ಘಾಟಿಸಿದರು. ಜಾಯ್ ಜಾಲ್‌ಸನ್ ಆಲ್‌ಡ್ರೀನ್, ಕೆ.ಎಸ್.ಹುಚ್ರಾಯಪ್ಪ, ಆಡ್ರಿನ್ ಇತರರಿದ್ದರು.
Published on

ಶಿಕಾರಿಪುರ: ಮಾನವೀಯ ಮೌಲ್ಯಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ. ಮಕ್ಕಳು ದೇಶದ ಪ್ರಗತಿಗೆ ಪೂರಕವಾದ ಕನಸುಗಳನ್ನು ಕಾಣಬೇಕು ಎಂದು ಪುಷ್ಪ ವಿದ್ಯಾಸಂಸ್ಥೆ ವ್ಯವಸ್ಥಾಪಕ ಫಾದರ್ ಜಾಯ್ ಜಾಲ್‌ಸನ್ ಆಲ್‌ಡ್ರಿನ್ ಹೇಳಿದರು.

ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳಿಗೆ ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪಠ್ಯ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಸಿಕೊಳ್ಳಬೇಕು. ಪಾಲಕರು ಕನಸು ನನಸಾಗಿಸುವ ಜತೆಯಲ್ಲಿ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಅಗ್ನಿಶಾಮಕ ದಳದ ಇನ್ಸ್‌ಪೆಕ್ಟರ್ ಪ್ರಶಾಂತ್ ನಾಯಕ್ ಮಾತನಾಡಿ, ನಾಯಕತ್ವ ಗುಣವು ಗುರುಹಿರಿಯರ ಮಾರ್ಗದರ್ಶನದಿಂದ ಬರುತ್ತದೆ. ಸಾಮಾನ್ಯ ಜನರು ಅತ್ಯುನ್ನತ ಯೋಚನೆಗಳಿಂದ ರಾಷ್ಟ್ರ ಮರೆಯದ ನಾಯಕರಾಗಿದ್ದಾರೆ. ದೇಶಕ್ಕಾಗಿ ದುಡಿದ ಮಹನೀಯರ ಸಾಧನೆಗಳನ್ನು ಅಧ್ಯಯನ ನಡೆಸಬೇಕು ಎಂದರು.

ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಮುಖ್ಯಶಿಕ್ಷಕಿ ಆಡ್ರಿನ್, ಅಗ್ನಿಶಾಮಕ ದಳದ ಸಿಬ್ಬಂದಿ ಶಶಿಧರ್, ಶಿಕ್ಷಕರಾದ ಉಮಾ, ಸುಜಾತಾ, ಫರ್ಜಾನಾ, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net