G.D. Jayappa elected as Vice President

03 HHR P 05
ಹೊಳೆಹೊನ್ನೂರು ಸಮೀಪದ ಹನುಮಂತಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷ ಜಿ.ಡಿ.ಜಯಪ್ಪ ಅವರನ್ನು ಅಭಿನಂದಿಸಲಾಯಿತು. ಎಸ್.ಎಚ್ ರಾಜಪ್ಪ, ಎಚ್.ಎನ್.ನಾಗರಾಜ್ ಇತರರಿದ್ದರು.
Published on

ಹೊಳೆಹೊನ್ನೂರು: ಸಮೀಪದ ಹನುಮಂತಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಉಪಾಧ್ಯಕ್ಷರಾಗಿ ಜಿ.ಡಿ.ಜಯಪ್ಪ ಅವಿರೋಧವಾಗಿ ಆಯ್ಕೆಯಾದರು.

ಜಯಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಶಾಂತರಾಜ್ ಕರ್ತವ್ಯ ನಿರ್ವಹಿಸಿದರು.

ಸಂಘದ ಅಧ್ಯಕ್ಷ ಎಸ್.ಎಚ್ ರಾಜಪ್ಪ, ಮುಖಂಡ ಎಚ್.ಎನ್.ನಾಗರಾಜ್, ಯಲ್ಲೋಜಿರಾವ್, ಸಿದ್ದಲಿಂಗಪ್ಪಗೌಡ, ಎಚ್.ಮಂಜುನಾಥ್, ಪರಮೇಶ್ವರಪ್ಪ, ಚಲುವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net