VIDEO: ನೌಕಾಪಡೆ ನಿವೃತ್ತ ಅಧಿಕಾರಿಯನ್ನು ಥಳಿಸಿದ ಶಿವಸೇನೆ ಗೂಂಡಾಗಳು; ಕಣ್ಣಿಗೆ ಗಂಭೀರ ಗಾಯ

Shiv sena
Published on

ಮುಂಬೈ: ನೌಕಾಪಡೆಯ ನಿವೃತ್ತ ಹಿರಿಯ ಅಧಿಕಾರಿಯೋರ್ವರಿಗೆ ಶಿವಸೇನೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಬಿಜೆಪಿ ಎಂಎಲ್​ಎ ಅತುಲ್​ ಭಟ್ಕಲ್ಕರ್ ಆರೋಪಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಕಾರ್ಟೂನ್​​ನ್ನು ವಾಟ್ಸ್​ಆ್ಯಪ್​​ನಲ್ಲಿ ಫಾರ್​​ವರ್ಡ್​ ಮಾಡುತ್ತಿದ್ದಾರೆ ಎಂದು ಶಿವಸೇನೆ ಎಂಟು ಮಂದಿ ಗೂಂಡಾಗಳು ಸೇರಿ ನಿವೃತ್ತ ನೇವಿ ಅಧಿಕಾರಿ ಮದನ್​ ಶರ್ಮಾ ಅವರನ್ನು ಥಳಿಸಿದ್ದಾರೆ ಎಂದು ಹೇಳಿದ್ದಾರೆ.

ಕಂಡಿವಲಿ ಪೂರ್ವದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿವಸೇನೆ ಶಾಖಾ ಪ್ರಮುಖ್​ ಮದನ್​ ಶರ್ಮಾ ಅವರಿಗೆ ಕರೆ ಮಾಡಿ, ಮನೆಯಿಂದ ಈಚೆ ಬರುವಂತೆ ತಿಳಿಸಿದ್ದಾರೆ. ಮದನ್​ ಶರ್ಮಾ ಅವರು ಹೊರಗೆ ಬರುತ್ತಿದ್ದಂತೆ ಅವರನ್ನು ಥಳಿಸಿದ್ದಾರೆ. ಇದರಿಂದ ಶರ್ಮಾ ಅವರ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ಅತುಲ್​ ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥರಿಗೆ ಒಂದು ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮ ಗೂಂಡಾಗಿರಿಗೆ ಹೆದರಿ ಮಹಾರಾಷ್ಟ್ರದ ಜನರು ಖಂಡಿತ ಸುಮ್ಮನೆ ಕೂರುವುದಿಲ್ಲ ಎಂಬುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !

ಈ ನಿವೃತ್ತ ಅಧಿಕಾರಿಗೆ 66 ವರ್ಷ ವಯಸ್ಸಾಗಿದ್ದು, ಅವರ ಪುತ್ರಿಯೂ ಕೂಡ, ತನ್ನ ತಂದೆಯ ಮೇಲೆ ಹಲ್ಲೆ ನಡೆದಿದ್ದಾಗಿ ಆರೋಪಿಸಿದ್ದಾರೆ.

ತಮ್ಮ ಮೇಲೆ ಸುಮಾರು 12 ಮಂದಿ ಹಲ್ಲೆ ನಡೆಸಿದ್ದಾಗಿ ಮದನ್​ ಶರ್ಮಾ ಹೇಳಿದ್ದಾರೆ. ಅಲ್ಲಿಗೆ ಬಂದ ಪೊಲೀಸರೂ ನನ್ನನ್ನೇ ಬಂಧಿಸಲು ಮುಂದಾದರು. ಆದರೆ ಬಿಜೆಪಿ ಶಾಸಕ ಅತುಲ್​ ಮತ್ತು ರಾಣಿ ದ್ವಿವೇದಿ ಸಹಾಯ ಮಾಡಿದರು ಎಂದು ತಿಳಿಸಿದ್ದಾರೆ. ಶಿವಸೇನೆ ಕಾರ್ಯಕರ್ತರ ವಿರುದ್ಧ ಸಂತ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net