

ನವದೆಹಲಿ: ಚಿತ್ರನಟಿ ಕಂಗನಾ ರಾಣಾವತ್ ಅವರನ್ನು ಚಂಡೀಗಢದಿಂದ ಮುಂಬೈಗೆ ಕರೆದೊಯ್ದ ಇಂಡಿಗೋಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ನೋಟಿಸ್ ಜಾರಿಮಾಡಿದೆ. ಕಂಗನಾ ಅವರು ಸೆಪ್ಟೆಂಬರ್ 9ರಂದು ಚಂಡೀಗಢದಿಂದ ಮುಂಬೈಗೆ ಇಂಡಿಗೋ 6ಇ 264 ವಿಮಾನದಲ್ಲಿ ಪ್ರಯಾಣಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ, ನಮ್ಮ ಕ್ಯಾಬಿನ್ ಕ್ರೂ ಮತ್ತು ಕ್ಯಾಪ್ಟನ್ ವಿಮಾನ ಯಾನ ನಿಯಮ ಪಾಲನೆ ಮಾಡುವಂತೆ ಎಲ್ಲರನ್ನೂ ಮನವಿ ಮಾಡಿದ್ದರು. ಈ ಬಗ್ಗೆ ಎಲ್ಲರಿಗೂ ಕೇಳಿಸುವಂತೆ ಘೋಷಣೆಯನ್ನೂ ಮಾಡಿದ್ದರು. ಅಲ್ಲದೆ, ಫೋಟೋ, ವಿಡಿಯೋ ತೆಗೆಯದಂತೆಯೂ ಕಟ್ಟುನಿಟ್ಟಾಗಿ ಹೇಳಿದ್ದಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಿದ್ದರು. ಅಲ್ಲದೆ, ಇಂಡಿಗೋ ಕೂಡ ಈ ಉಲ್ಲಂಘನೆ ವಿಚಾರವನ್ನು ಪೋಸ್ಟ್ ಫ್ಲೈಟ್ ರಿಪೋರ್ಟ್ನಲ್ಲಿ ಉಲ್ಲೇಖಿಸಿದ್ದು ಅಗತ್ಯ ಕಾನೂನು, ನಿಯಮ ಪಾಲನೆಯನ್ನು ಮಾಡಿದೆ ಎಂದು ಸ್ಪಷ್ಟಪಡಿಸಿದೆ. (ಏಜೆನ್ಸೀಸ್)