ಕಲ್ಲಾಪು ದೇವಳದಲ್ಲಿ ಶಿಲಾ ಮುಹೂರ್ತ : ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯ

New Project (45)
Published on

ಮೂಲ್ಕಿ: ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ದೇವಸ್ಥಾನದ ಶ್ರೀ ವೀರಭದ್ರ ದೇವರ ಗರ್ಭಗುಡಿ ಹಾಗೂ ತೀರ್ಥಮಂಟಪದ ಜೀರ್ಣೋದ್ಧಾರ ಪ್ರಯುಕ್ತ ಶಿಬರೂರು ವೇದವ್ಯಾಸ ತಂತ್ರಿ ಹಾಗೂ ಕ್ಷೇತ್ರದ ಅರ್ಚಕ ಕೃಷ್ಣ ಭಟ್ ನೇತೃತ್ವದಲ್ಲಿ ಉದ್ಯಮಿ ಎಂ.ರವೀಂದ್ರ ಶೇಟ್ ಸೋಮವಾರ ಶಿಲಾಮಹೂರ್ತ ನೆರವೇರಿಸಿದರು.

ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ ದಾರು ಶಿಲ್ಪದ ಮಹೂರ್ತ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ವಿಜ್ಞಾಪನಾಪತ್ರ ಬಿಡುಗಡೆಗೊಂಡಿತು.

ವಾಸ್ತುತಜ್ಞ ಅವಧಾನಿ ಸುಬ್ರಹ್ಮಣ್ಯ ಭಟ್, ಪಿ.ಲಕ್ಷ್ಮಣ ಗುರಿಕಾರ, ರತ್ನಾಕರ ಶೆಟ್ಟಿಗಾರ ಯಾನೆ ಕಾಂತಣ್ಣ ಗುರಿಕಾರ, ಅಪ್ಪು ಗುರಿಕಾರ ಪಕ್ಷಿಕೆರೆ, ಉಮಾನಾಥ ಜೆ.ಶೆಟ್ಟಿಗಾರ, ಇಂಜಿನಿಯರ್ ಭಗವಾನ್ ದಾಸ್, ಶಂಕರ್ ಶೆಟ್ಟಿಗಾರ ಬೆಳ್ಳಾಯರು, ಪೀತಾಂಬರ ಶೆಟ್ಟಿಗಾರ ಸಾಗು, ಪುರಂದರ ಶೆಟ್ಟಿಗಾರ, ಗ್ರಾ.ಪಂ. ಸದಸ್ಯ ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಗೀತಾ ಸದಾನಂದ ತೋಕೂರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net