

ಕಿನ್ನಿಗೋಳಿ: ಶ್ರೀ ರಾಘವೇಂದ್ರ ಸ್ವಾಮೀಜಿ ಸಮಾಜದ ಅಭಿವೃದ್ಧಿಯ ಹರಿಕಾರರಾಗಿದ್ದರು. ಅವರ ನೆನಪು ಆರಾಧನೆ ಮಾಡುವುದು ಒಂದು ಯಜ್ಞದಂತೆ ಅದರ ಫಲ ಸಮಾಜಕ್ಕೆ ದೊರೆಯಬೇಕು ಎಂದು ಡಾ.ಪದ್ಮನಾಭ ಭಟ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀಮದ್ ಗುರುರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಡಾ.ನಯನಾಭಿರಾಮ ಉಡುಪ, ಬಾಲಕೃಷ್ಣ ಉಡುಪ, ಪು.ಗುರುಪ್ರಸಾದ್ ಭಟ್, ಅರ್ಚಕ ರಾಘವೇಂದ್ರ ಭಟ್, ಯುವರಾಜ ಶೆಟ್ಟಿ ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷದ ಭುವನಾಭಿರಾಮ ಉಡುಪ ಪ್ರಸ್ತಾವಿಸಿ ಸ್ವಾಗತಿಸಿದರು. ಬಳಿಕ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದ ಅಂಗವಾಗಿ ಪಲ್ಲಕಿ ಉತ್ಸವ, ರಥೋತ್ಸವ ನಡೆಯಿತು.