

ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಲಾಕ್ಡೌನ್ ವೇಳೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ದೈನಂದಿನ ಚಟುವಟಿಕೆಗಳನ್ನು ಟ್ವಿಟರ್, ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಮೊನ್ನೆಯಷ್ಟೇ ಶಿಖರ್ ಧವನ್ ಮಗ ಜೊರೊವರ್ ಅಪ್ಪನ ತಲೆ ಕೂದಲು ಟ್ರಿಮ್ ಮಾಡುವ ಮೂಲಕ ಗಮನಸೆಳೆದಿದ್ದ. ಇದೀಗ ಸೂಪರ್ ಮ್ಯಾನ್ ವೇಷ ಧರಿಸಿ ಚಪಾತಿ ಬೇಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರೊನಾ ವೈರಸ್ ಭೀತಿಯಿಂದಾಗಿ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿರುವ ಕ್ರಿಕೆಟಿಗರಿಗೆ ಸಾಮಾಜಿಕ ಜಾಲತಾಣವೇ ಅವರಿಗೆ ಪ್ರಮುಖ ಅಸ್ತ್ರವಾಗಿದೆ. ಅದರಲ್ಲೂ ಶಿಖರ್ ಧವನ್ ಉಳಿದ ಆಟಗಾರರಿಗಿಂತ ಒಂದು ಕೈ ಮೇಲೆ, ಕುಟುಂಬದೊಂದಿಗಿನ ದೈನಂದಿನ ಚಟುವಟಿಕೆಗಳ ಮಾಹಿತಿಯನ್ನು ಧವನ್ ವಿಡಿಯೋ ಸಮೇತ ಪ್ರಕಟಿಸುತ್ತಾರೆ. ಮೊನ್ನೆಯಷ್ಟೇ ತಮ್ಮ ಮಗನ ಕೈಯಲ್ಲಿ ತಲೆ ಕೂದಲು ಟ್ರಿಮ್ ಮಾಡಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಅವರ ಮಗ ಸೂಪರ್ ಮ್ಯಾನ್ ವೇಷ ತೊಟ್ಟು ಚಪಾತಿ ಬೇಯಿಸುತ್ತಿರುವ ವಿಡಿಯೋ ಗಮನಸೆಳೆದಿದೆ. ಸೂಪರ್ ಹೀರೋಸ್ ಕೂಡ ಚಪಾತಿ ಮಾಡಬಹುದು ಎಂದು ಧವನ್ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: PHOTO | ಭಾರತ ಬಾಸ್ಕೆಟ್ಬಾಲ್ ತಂಡದ ನಾಯಕಿ ಜೀನಾ ವಿವಾಹ
ಧವನ್ ಇತ್ತೀಚೆಗಷ್ಟೇ ಕೊಂಡುಕೊಂಡಿದ್ದ ಎರಡು ನಾಯಿ ಮರಿಗಳ ಚಿತ್ರವನ್ನು ಪ್ರಕಟಿಸಿದ್ದರು. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಧವನ್ ಕಾಣಿಸಿಕೊಳ್ಳಬೇಕಿತ್ತು. ಆದರೆ. ಕರೊನಾ ಭೀತಿಯಿಂದ ಐಪಿಎಲ್ ಇನ್ನು ಅನಿಶ್ಚಿತತೆಯಲ್ಲಿ ಮುಳುಗಿದೆ. ಎಲ್ಲ ಕ್ರಿಕೆಟಿಗರ ಮನೆಯಲ್ಲೇ ಲಾಕ್ ಆಗಿದ್ದು, ಭಾರತದಲ್ಲಿ ಕ್ರಿಕೆಟ್ ಪುನರಾರಂಭದ ನಿರೀಕ್ಷೆಯಲ್ಲಿದ್ದಾರೆ.