More

    PHOTO | ಫುಟ್​‌ಬಾಲ್ ದಿಗ್ಗಜ ಬೆಕ್‌ಹ್ಯಾಂ ಪುತ್ರನಿಗೆ ನಟಿ ಜತೆ ನಿಶ್ಚಿತಾರ್ಥ

    ಲಂಡನ್: ಇಂಗ್ಲೆಂಡ್‌ನ ಫುಟ್‌ಬಾಲ್ ದಿಗ್ಗಜ ಡೇವಿಡ್ ಬೆಕ್‌ಹ್ಯಾಂ ಮತ್ತು ಗಾಯಕಿ-ವಸ ವಿನ್ಯಾಸಕಿ ವಿಕ್ಟೋರಿಯಾ ಬೆಕ್‌ಹ್ಯಾಂ ದಂಪತಿಯ ಪುತ್ರ ಬ್ರೂಕ್ಲಿನ್ ಬೆಕ್‌ಹ್ಯಾಂ ಅವರ ನಿಶ್ಚಿತಾರ್ಥ ಅಮೆರಿಕದ ನಟಿ ನಿಕೋಲಾ ಪೆಲ್ಟ್‌ಜ್ ಜತೆ ಶನಿವಾರ ನೆರವೇರಿದೆ. 45 ವರ್ಷದ ಬೆಕ್‌ಹ್ಯಾಂ ಅವರ ನಾಲ್ವರು ಮಕ್ಕಳಲ್ಲಿ ಬ್ರೂಕ್ಲಿನ್ ಹಿರಿಯರಾಗಿದ್ದಾರೆ.

    PHOTO | ಫುಟ್​‌ಬಾಲ್ ದಿಗ್ಗಜ ಬೆಕ್‌ಹ್ಯಾಂ ಪುತ್ರನಿಗೆ ನಟಿ ಜತೆ ನಿಶ್ಚಿತಾರ್ಥ

    21 ವರ್ಷದ ಬ್ಲೂಕ್ಲಿನ್ ಮತ್ತು 25 ವರ್ಷದ ನಿಕೋಲಾ ನಿಶ್ಚಿತಾರ್ಥವನ್ನು ಇನ್‌ಸ್ಟಾಗ್ರಾಂನಲ್ಲಿ ದೃಢಪಡಿಸಿದ್ದಾರೆ. ‘2 ವಾರಗಳ ಹಿಂದೆಯಷ್ಟೇ ನಾನು ನನ್ನ ಜೀವದ ಗೆಳತಿಗೆ ನನ್ನನ್ನು ವಿವಾಹವಾಗುವಂತೆ ಕೇಳಿಕೊಂಡಿದ್ದೆ. ಆಕೆ ಅದಕ್ಕೆ ಒಪ್ಪಿಕೊಂಡಿದ್ದಾಳೆ. ನಾನೀಗ ಪ್ರಪಂಚದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ. ನಾನು ಅತ್ಯುತ್ತಮ ಪತಿಯಾಗುವ ಮತ್ತು ಮುಂದೊಂದು ದಿನ ಅತ್ಯುತ್ತಮ ತಂದೆಯಾಗುವ ಮಾತು ಕೊಟ್ಟಿದ್ದೇನೆ.’ ಎಂದು ಬ್ರೂಕ್ಲಿನ್ ಬರೆದುಕೊಂಡಿದ್ದಾರೆ. ಬ್ರೂಕ್ಲಿನ್ ರೂಪದರ್ಶಿ ಮತ್ತು ಅಮೆಚೂರ್ ಫೋಟೋಗ್ರಾರ್ ಆಗಿದ್ದಾರೆ. ಮುಂದಿನ ವರ್ಷ ವಿವಾಹ ಸಮಾರಂಭ ನಡೆಯಲಿದೆ ಎನ್ನಲಾಗಿದೆ.

    PHOTO | ಫುಟ್​‌ಬಾಲ್ ದಿಗ್ಗಜ ಬೆಕ್‌ಹ್ಯಾಂ ಪುತ್ರನಿಗೆ ನಟಿ ಜತೆ ನಿಶ್ಚಿತಾರ್ಥ

    ಇದನ್ನೂ ಓದಿ: PHOTO | ಭಾರತ ಬಾಸ್ಕೆಟ್‌ಬಾಲ್ ತಂಡದ ನಾಯಕಿ ಜೀನಾ ವಿವಾಹ

    ನ್ಯೂಯಾರ್ಕ್‌ನ ಬಿಲಿಯನೇರ್ ಉದ್ಯಮಿ ನೆಲ್ಸನ್ ಪೆಲ್ಟ್‌ಜ್ ಪುತ್ರಿಯಾಗಿರುವ ನಿಕೋಲಾ ಪೆಲ್ಟ್‌ಜ್ ಕೂಡ ಇನ್‌ಸ್ಟಾಗ್ರಾಂನಲ್ಲಿ, ‘ನಾನೀಗ ಪ್ರಪಂಚದ ಅತ್ಯಂತ ಅದೃಷ್ಟಶಾಲಿ ಹುಡುಗಿಯಾಗಿದ್ದೇನೆ. ನಾನು ನನ್ನ ಜೀವನದ ಉಳಿದ ಭಾಗವನ್ನು ನಿನ್ನೊಂದಿಗೆ ಕಳೆಯಲು ಕಾತರಗೊಂಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಇಬ್ಬರೂ ಒಂದೇ ಚಿತ್ರವನ್ನು ಪ್ರಕಟಿಸಿದ್ದಾರೆ. ಕಳೆದ 6 ತಿಂಗಳಿನಿಂದ ಇವರು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಆಟಗಾರರಾಗಿದ್ದ ಡೇವಿಡ್ ಬೆಕ್‌ಹ್ಯಾಂ ಇಂಗ್ಲೆಂಡ್ ಪರ 115 ಪಂದ್ಯಗಳಲ್ಲಿ 17 ಗೋಲು ಸಿಡಿಸಿದ್ದಾರೆ.

    PHOTO | ಫುಟ್​‌ಬಾಲ್ ದಿಗ್ಗಜ ಬೆಕ್‌ಹ್ಯಾಂ ಪುತ್ರನಿಗೆ ನಟಿ ಜತೆ ನಿಶ್ಚಿತಾರ್ಥ

    PHOTO | ಫುಟ್​‌ಬಾಲ್ ದಿಗ್ಗಜ ಬೆಕ್‌ಹ್ಯಾಂ ಪುತ್ರನಿಗೆ ನಟಿ ಜತೆ ನಿಶ್ಚಿತಾರ್ಥ

    PHOTO | ಫುಟ್​‌ಬಾಲ್ ದಿಗ್ಗಜ ಬೆಕ್‌ಹ್ಯಾಂ ಪುತ್ರನಿಗೆ ನಟಿ ಜತೆ ನಿಶ್ಚಿತಾರ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts