2 ಹರಿತವಾದ ಚಾಕು! ದೈಹಿಕ, ಮಾನಸಿಕ ಕಿರುಕುಳ; ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ ಅರೆಸ್ಟ್​ | Murder Case

ವಿಜಯವಾಣಿ (41)
Published on

Murder Case: ಮಾದಕ ವಸ್ತು ಸೇರಿದಂತೆ ಇತರೆ ಚಟಗಳನ್ನು ಹೊಂದಿದ್ದ ಆರೋಪಿ ಯಾಸಿರ್​, ತನ್ನ ಹೆಂಡತಿಯ ಶೀಲವನ್ನು ಶಂಕಿಸಿ, ಚಿತ್ರಹಿಂಸೆ ಕೊಟ್ಟಿದ್ದಲ್ಲದೇ ಕಡೆಗೂ ಆಕೆಯ ಪ್ರಾಣವನ್ನು ಕಸಿದುಕೊಂಡ ಘಟನೆ ಕೇರಳದ ಕೋಝಿಕೋಡ್​ನಲ್ಲಿ ವರದಿಯಾಗಿದೆ.

ಮೃತ ಮಹಿಳೆಯನ್ನು ಶಿಬಿಲಾ ಎಂದು ಗುರುತಿಸಲಾಗಿದ್ದು, ಆರೋಪಿ ಯಾಸಿರ್​ನ ಚಾಕು ಇರಿತಕ್ಕೆ ಮಹಿಳೆ ಬಲಿಯಾಗಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರು ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾರೆ. ಈಂಗಪ್ಪುಳದಲ್ಲಿ ತನ್ನ ಪತ್ನಿಯನ್ನು ಹರಿತವಾದ ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಯಾಸಿರ್, ಆಕೆಯನ್ನು ಕೊಲ್ಲಲೆಂದೇ ಎರಡು ಹೊಸ ಚಾಕುಗಳನ್ನು ಮಾರುಕಟ್ಟೆಯಿಂದ ಖರೀದಿಸಿರುವುದು ಪತ್ತೆಯಾಗಿವೆ.

ಕೋಝಿಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಪಾರ್ಕಿಂಗ್ ಸ್ಥಳದಲ್ಲಿ ಯಾಸಿರ್​ನನ್ನು ಸೆರೆಹಿಡಿದ ಖಾಕಿ ಪಡೆ, ಆತನ ಬಳಿಯಿದ್ದ ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ತಮಗೆ ಸಿಕ್ಕ ದಾಖಲೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಶಿಬಿಲಾಗೆ 11 ಬಾರಿ ಇರಿಯಲಾಗಿದ್ದು, ಗಂಭೀರ ಗಾಯಗಳಿಂದ ಆಕೆ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಯಾಸಿರ್​ನ ಲೈಂಗಿಕ ವಿಕೃತಿಗೆ ನರಳಿದ್ದ ಮೃತ ಶಿಬಿಲಾ, ಈ ಹಿಂದೆ ಠಾಣೆಯಲ್ಲಿ ಪತಿಯೊಂದಿಗೆ ಇರಲು ನನಗಿಷ್ಟವಿಲ್ಲ. ಆತನೊಂದಿಗೆ ವಾಪಾಸ್ ಮನೆಗೆ ಹೋಗುವುದಿಲ್ಲ. ಅವನು ವಿಪರೀತ ಮಾದಕ ವ್ಯಸನಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ವಿಷಯಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ಕೂಡ ನಡೆದಿತ್ತು ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಯಾಸಿರ್ ಒಬ್ಬ ಮಾದಕ ವ್ಯಸನಿ. ಈ ಕಾರಣದಿಂದಾಗಿ ಮತ್ತು ಅವನ ಸಮಾಜವಿರೋಧಿ ವರ್ತನೆಗಳಿಂದಾಗಿ, ಶಿಬಿಲಾ ಪತಿಯಿಂದ ದೂರ ಉಳಿಯಲು ಬಯಸಿದ್ದಳು. ಪತಿಯ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದ ಶಿಬಿಲಾ. ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ವರದಿ ಉಲ್ಲೇಖಿಸಿದೆ. ಪ್ರಸ್ತುತ ಪ್ರಕರಣ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net