ಸ್ವಿಗ್ಗಿಯಿಂದ ಜಾಬ್ ಆಫರ್​ ಸಿಕ್ಕಿತ್ತು! ಆದ್ರೆ... ಬಹುಭಾಷಾ ನಟಿ ಭಾವನಾ ಮನದಾಳ ​ | Actress Bhavana

ವಿಜಯವಾಣಿ (40)
Published on

Actress Bhavana: ಇತ್ತೀಚೆಗಷ್ಟೇ ತಮ್ಮ ದಾಂಪತ್ಯ ಜೀವನ, ವಿಚ್ಛೇದನ ವದಂತಿ, ಚಿತ್ರೋದ್ಯಮ ಮತ್ತು ವೈಯಕ್ತಿಕ ಜೀವನ ಕುರಿತು ಹಲವು ವಿಷಯಗಳನ್ನು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಹಂಚಿಕೊಂಡ ಬಹುಭಾಷಾ ನಟಿ ಭಾವನಾ, ಚಿತ್ರೋದ್ಯಮವನ್ನು ತೊರೆದು ಯಾವುದಾದರೂ ಕೆಲಸ ಹುಡುಕುವ ನಿರ್ಧಾರ ಕೈಗೊಂಡಾಗ ತಮಗೆ ಸಿಕ್ಕ ಜನಪ್ರಿಯ ಫುಡ್​ ಡೆಲಿವರಿ ಸಂಸ್ಥೆಯ ಉದ್ಯೋಗ ಆಫರ್​ ಬಗ್ಗೆ ಮಾತನಾಡಿದ್ದಾರೆ.

12 ವರ್ಷಗಳ ಬಳಿಕ ತಮಿಳು ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡಿರುವ ಭಾವನಾ, ತಮ್ಮ ಮುಂಬರುವ ಸಿನಿಮಾ ಬಗ್ಗೆ ಮಾತನಾಡುವಾಗ ಸ್ವಿಗ್ಗಿ ಫುಡ್​ ಡೆಲಿವರಿ ಸಂಸ್ಥೆಯಿಂದ ಬಂದ ಉದ್ಯೋಗವಕಾಶದ ಸಂದೇಶವನ್ನು ನೆನೆದು ನಗೆಚಟಾಕಿ ಹಾರಿಸಿದ್ದಾರೆ. "ಆಗ ನಾನು ಚಿತ್ರೋದ್ಯಮ ಸಾಕಪ್ಪ. ಇದು ನನಗೆ ಅಲ್ಲ ಎಂದು ನಿರ್ಧರಿಸಿ, ಗೂಗಲ್​ನಲ್ಲಿ ಇತರೆ ಕೆಲಸಗಳ ಹುಡುಕಲು ಪ್ರಾರಂಭಿಸಿದ್ದೆ. ಈ ವೇಳೆ ಸೀನಿಯರ್​ ಉದ್ಯೋಗಿಯೊಬ್ಬರು, ಲಿಂಕ್ ಮೂಲಕ ನನಗೆ ಸ್ವಿಗ್ಗಿಯಲ್ಲಿ ಕೆಲಸ ಮಾಡುವಂತೆ ಅವಕಾಶ ನೀಡಿದ್ದರು" ಎಂದರು.

"ನಿಮಗೆ ಕೆಲಸ ಮಾಡುವ ಉತ್ಸಾಹವಿದ್ದರೆ ಅಥವಾ ಸೇರಿಕೊಳ್ಳುವ ಉದ್ದೇಶವಿದ್ದರೆ ನಾವು ಕೊಟ್ಟಿರುವ ಲಿಂಕ್ ಕ್ಲಿಕ್​ ಮಾಡಿ, ಸೇರ್ಪಡೆಯಾಗಿ ಎಂದು ಕಳುಹಿಸಿದ್ದರು. ಆದರೆ, ಇಲ್ಲಿಯವರೆಗೂ ಒಮ್ಮೆಯೂ ಆ ಲಿಂಕ್ ಅನ್ನು ತೆರೆಯುವ ಪ್ರಯತ್ನ ನಾನು ಮಾಡಲಿಲ್ಲ. ಇಂದಿಗೂ ಅದನ್ನು ಓಪನ್ ಮಾಡಿಯೇ ಇಲ್ಲ" ಎಂದು ನಗುತ್ತಲೇ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net