Lucky Heroine: 2024ರ ಮೊದಲ ತಿಂಗಳಲ್ಲೇ ಮಹೇಶ್ ಬಾಬು ಜತೆಗೆ ‘ಗುಂಟೂರು ಕಾರಂ’ ಚಿತ್ರದ ಮೂಲಕ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ ನಟಿ ಮೀನಾಕ್ಷಿ ಚೌಧರಿ, ತದನಂತರ ಸ್ಟಾರ್ ನಟರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅವಕಾಶ ಪಡೆದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಗಿಟ್ಟಿಸಿಕೊಂಡರು. ಕಳೆದ ವರ್ಷ ಮೀನಾಕ್ಷಿ ಅಭಿನಯದ ಆರು ಸಿನಿಮಾಗಳು ರಿಲೀಸ್ ಆಗಿದ್ದೇ ಆದರೂ ಅದರಲ್ಲಿ ಬಾಕ್ಸ್ ಆಫೀಸ್ ಹಾಗೂ ಪ್ರೇಕ್ಷಕರಿಂದ ಹಿಟ್ ಆದ ಸಿನಿಮಾ ಮಾತ್ರ ‘ಲಕ್ಕಿ ಭಾಸ್ಕರ್’. ಇಷ್ಟಾದರೂ ಅವಕಾಶಗಳಿಗಿಲ್ಲ ಯಾವುದೇ ಕುಂದು ಕೊರತೆ.
ಇದನ್ನೂ ಓದಿ: ಬೆಳೆ ವಿಮೆ: ತಿರಸ್ಸೃತಗೊಂಡ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಸಲ್ಲಿಸುವ ಕುರಿತು
ಇನ್ನು ಈ ವರ್ಷದ ಆರಂಭದಲ್ಲೇ ನಟ ವೆಂಕಟೇಶ್ ಅವರೊಂದಿಗೆ ‘ಸಂಕ್ರಾಂತಿಕಿ ವಸ್ತುನ್ನಂ’ ಚಿತ್ರದಲ್ಲಿ ಕಾಣಿಸಿಕೊಂಡ ಮೀನಾಕ್ಷಿ, ಭರ್ಜರಿ ಯಶಸ್ಸನ್ನು ಕಂಡಿದ್ದಾರೆ. ಈ ಚಿತ್ರದ ಹಾಡು ಮತ್ತು ಪಾತ್ರದ ಮೂಲಕ ತೆಲುಗು ಸಿನಿಪ್ರೇಕ್ಷಕರ ಗಮನ ಸೆಳೆದಿರುವ ಮೀನಾಕ್ಷಿ ಚೌಧರಿ ಸದ್ಯ ಬ್ಯಾಕ್ ಟು ಬ್ಯಾಕ್ ಬಿಗ್ ಪ್ರಾಜೆಕ್ಟ್ಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಸ್ಟಾರ್ ನಟರ ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆ ಆಗಿರುವ ಸೌತ್ ಬ್ಯೂಟಿ, ನಿರ್ದೇಶಕ-ನಿರ್ಮಾಪಕರ ಮೊದಲ ಆಯ್ಕೆ ಎನ್ನುವಂತೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಬಹುತೇಕರು ಈಕೆಯ ಚಾರ್ಮಿಂಗ್ ಬ್ಯೂಟಿ, ಪಾತ್ರಗಳ ಆಯ್ಕೆಯನ್ನು ಕಂಡು ದಕ್ಷಿಣ ಭಾರತದ ಲಕ್ಕಿ ಹೀರೋಯಿನ್ ಮೀನಾಕ್ಷಿ ಚೌಧರಿ ಎನ್ನುತ್ತಿದ್ದಾರೆ. ಇದಕ್ಕೆ ಇತ್ತೀಚೆಗಷ್ಟೇ ನಟಿ ಹಂಚಿಕೊಂಡ ಕೆಲವು ಮಾತುಗಳು ಪುಷ್ಠಿ ನೀಡಿವೆ. “ಸಿನಿ ಪಯಣಕ್ಕೆ ಕಾಲಿಟ್ಟ ಅಲ್ಪಾವಧಿಯಲ್ಲಿ ಸ್ಟಾರ್ ಹಾಗೂ ಹಿರಿಯ ನಟರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶಗಳು ನನ್ನನ್ನು ಅರಸಿ ಬಂದಿವೆ. ಇದು ನನ್ನ ಪುಣ್ಯ. ವಿಭಿನ್ನ ಕಥಾಹಂದರಗಳು ಹಾಗೂ ಅದಕ್ಕೆ ತಕ್ಕಂತೆ ವಿಧ ವಿಧವಾದ ಪಾತ್ರಗಳು ನನಗೆ ಸಿಗುತ್ತಿವೆ. ಈ ವಿಷಯದಲ್ಲಿ ನಿಜಕ್ಕೂ ನಾನು ಲಕ್ಕಿ” ಎಂದಿದ್ದಾರೆ.
ಇದನ್ನೂ ಓದಿ: Champions Trophy ಆರಂಭಕ್ಕೂ ತಂಡದಲ್ಲಿ ಬಿರುಕು? ಕೋಚ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಸ್ಟಾರ್ ಪ್ಲೇಯರ್
ಉದಯೋನ್ಮುಖ ನಟಿ
2024ರಲ್ಲಿ ಆರು ಸಿನಿಮಾಗಳ ಬಿಡುಗಡೆ ನೋಡಿದ ಉದಯೋನ್ಮುಖ ನಟಿಯಾಗಿ ಸದ್ಯ ಟಾಲಿವುಡ್ನಲ್ಲಿ ಮಿಂಚುತ್ತಿರುವ ಮೀನಾಕ್ಷಿ ಚೌಧರಿ, ತಾನು ಅಭಿನಯದ ಐದು ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡದಿದ್ದರೂ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯುತ್ತಿರುವುದು ಸದ್ಯ ಅನೇಕರ ಹುಬ್ಬೇರಿಸಿದೆ. ವೆಂಕಟೇಶ್ ನಟನೆಯ ಹಾಗೂ ಅನಿಲ್ ರವಿಪುಡಿ ನಿರ್ದೇಶನದ ‘ಸಂಕ್ರಾಂತಿಕಿ ವಸ್ತುನ್ನಂ’ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ದಳಪತಿ ವಿಜಯ್ ಅಭಿನಯದ ‘ಗೋಟ್’, ಮಹೇಶ್ ಬಾಬು ಅವರ ‘ಗುಂಟೂರು ಕಾರಂ’ ಸೇರಿದಂತೆ ಕಳೆದ ವರ್ಷ ತೆರೆಕಂಡ ‘ಲಕ್ಕಿ ಬಾಸ್ಕರ್’ನಂತಹ ಸೂಪರ್ ಡೂಪರ್ ಹಿಟ್ ಚಿತ್ರಗಳಲ್ಲಿ ಮೀನಾಕ್ಷಿ ಚೌಧರಿ ಅಭಿನಯಿಸಿದ್ದಾರೆ. ಇನ್ನೂ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿರುವ “ಅನಗನಾಗ ಓಕ ರಾಜು” ಚಿತ್ರದಲ್ಲಿ ನಟ ನವೀನ್ ಪೊಲಿಶೆಟ್ಟಿಗೆ ನಾಯಕಿಯಾಗಿ ಮೀನಾಕ್ಷಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್).