More

    ಮಗ ಮನೆಗೆ, ಅಪ್ಪ ಹೊರಗೆ..?; ಶಾರುಖ್​ ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ..

    ಮುಂಬಯಿ: ಶಾರುಖ್​ ಖಾನ್​ ರಿಯಲ್ ಜೀವನದಲ್ಲಿನ ಸಮಸ್ಯೆಗಳು ಒಂದಷ್ಟು ದಿನ ಅವರ ರೀಲ್​ ಬದುಕಿಗೆ ತಡೆಯೊಡ್ಡಿದ್ದು, ಇದೀಗ ಮತ್ತೆ ಆ್ಯಕ್ಷನ್ ಎನ್ನುವ ದಿನಗಳು ಸಮೀಪಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.

    2021ರಲ್ಲಿ ಸಾಲು ಸಾಲು ಸಿನಿಮಾಗಳಿಲ್ಲಿ ನಟಿಸಿ ತಮ್ಮ ಅಭಿಮಾನಿಗಳನ್ನು ರಂಜಿಸಬೇಕಿದ್ದ ನಟ ಶಾರುಖ್ ಖಾನ್ ತಮ್ಮ ಮಗನ ಆರ್ಯನ್​ ಖಾನ್​ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದರಿಂದ ಸಿನಿಮಾ ಚಟುವಟಿಕೆಗಳಿಂದ ದೂರವಿದ್ದರು. ಪುತ್ರನಿಗಾಗಿ ಕೋರ್ಟ್​, ಕಚೇರಿ ಅಂತ ಅಲೆಯುತ್ತಿದ್ದರಿಂದ ಸಹಜವಾಗಿಯೇ ನಟನೆಗೆ ಬ್ರೇಕ್​ ಬಿದ್ದಿತ್ತು. ಇದರಿಂದ ಅವರ ಸಿನಿ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿತ್ತು.

    ಇದನ್ನೂ ಓದಿ: ಶಿಕ್ಷಕನ ಮರ್ಮಾಂಗವನ್ನೇ ಕತ್ತರಿಸಿ ಬರ್ಬರ ಕೊಲೆ; ಭೀಕರ ಹತ್ಯೆಗೆ ಕಾರಣವಿನ್ನೂ ನಿಗೂಢ..

    ಬಳಿಕ ಸಾಕಷ್ಟು ಪ್ರಯತ್ನದಿಂದಾಗಿ ತಂದೆಯ ಹುಟ್ಟುಹಬ್ಬಕ್ಕೂ ಮೊದಲೇ ಪುತ್ರ ಆರ್ಯನ್​ ಖಾನ್ ಮನೆಗೆ ಬಂದಿರುವುದು ನಟನ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಇದೇ ಖುಷಿಯಲ್ಲಿ ಶಾರುಖ್ ಖಾನ್ ಇಸ್ ಬ್ಯಾಕ್ ಟು ಆ್ಯಕ್ಷನ್​ ಎಂಬ ಸುದ್ದಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲೂ ಸಂತೋಷದ ಸುಳಿವು ಕಾಣಿಸಿಕೊಂಡಿದೆ. ಶಾರುಖ್​ ಖಾನ್​ ಮತ್ತೆ ತಮ್ಮ ಸಿನಿಮಾಗಳ ಚಿತ್ರೀಕರಣಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಬಾಲಿವುಡ್ ಅಂಗಳದಿಂದ ಹೊರಹೊಮ್ಮಿದೆ. ಸದ್ಯ ತಮಿಳು ನಿರ್ದೇಶಕ ಅಟ್ಲಿ ಅವರ ಚಿತ್ರದಲ್ಲಿ ನಟ ಶಾರುಖ್ ಖಾನ್ ನಟಿಸುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾದಲ್ಲಿ ನಟಿ ನಯನತಾರಾ ತನಿಖಾಧಿಕಾರಿಯಾಗಿ ಶಾರುಖ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.

    ಇದನ್ನೂ ಓದಿ: ವಂಚಕರು ಟಿಬೆಟಿಯನ್ಸ್, ಆ್ಯಪ್​ ಚೀನಾದ್ದು, ಮೋಸ ಭಾರತದಲ್ಲಿ..; ಕೊನೆಗೂ ಇಬ್ಬರು ಸಿಕ್ಕಿಬಿದ್ದರು..

    ಈ ಹಿಂದಿನ ಯೋಜನೆಗಳ ಪ್ರಕಾರ ಈ ಸಿನಿಮಾ ಅಕ್ಟೋಬರ್​ನಲ್ಲೇ ಆರಂಭವಾಗಬೇಕಿತ್ತು. ಆದರೆ, ಪುತ್ರನ ಬಂಧನದಿಂದ ಶಾರುಖ್​ ಶೂಟಿಂಗ್​ನಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಸಿನಿಮಾ ತಂಡ ಚಿತ್ರೀಕರಣವನ್ನು ಮುಂದೂಡಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ನ. 21ರಿಂದ ನಿರ್ದೇಶಕ ಅಟ್ಲಿ ಸಿನಿಮಾದ ಚಿತ್ರೀಕರಣದಲ್ಲಿ ಶಾರುಖ್​ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನವಂಬರ್ 15ರಂದು ಖುದ್ದು ಶಾರುಖ್ ಖಚಿತ ಪಡಿಸುವ ಸಾಧ್ಯತೆ ಇದೆ.

    ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಶಾರುಖ್ ಖಾನ್ 2018ರಲ್ಲಿ ತೆರೆ ಕಂಡಿದ್ದ ಝೀರೋ ಸಿನಿಮಾ ಬಳಿಕ ಯಾವ ಚಿತ್ರದಲ್ಲೂ ನಟಿಸಿರಲಿಲ್ಲ. ಆ ಸಿನಿಮಾ ಹಿಟ್ ಆಗದ ಕಾರಣ ನಟ ಬರೋಬ್ಬರಿ ಎರಡು ವರ್ಷ ಸಿನಿಮಾಗಳಿಂದ ವಿರಾಮ ತೆಗೆದುಕೊಂಡಿದ್ದರು. ಈಗ ನಿರ್ದೇಶಕ ಆಟ್ಲಿ ಸಿನಿಮಾ ಅಲ್ಲದೇ ಶಾರುಖ್ ಕೈಯಲ್ಲಿ ‘ರಾಕೆಟ್ರಿ’, ‘ಪಠಾಣ್’ ಎಂಬ ಎರಡು ಸಿನಿಮಾಗಳು ಇವೆ. ರಾಕೆಟ್ರಿ ಮತ್ತು ಪಠಾಣ್ ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿದಿದ್ದು, ಆಟ್ಲಿ ಸಿನಿಮಾದ ಶೂಟಿಂಗ್ ಮಾತ್ರ ಈಗ ಆರಂಭವಾಗಲಿದೆ ಎನ್ನಲಾಗಿದೆ.

    ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts