ವಂಚಕರು ಟಿಬೆಟಿಯನ್ಸ್, ಆ್ಯಪ್​ ಚೀನಾದ್ದು, ಮೋಸ ಭಾರತದಲ್ಲಿ..; ಕೊನೆಗೂ ಇಬ್ಬರು ಸಿಕ್ಕಿಬಿದ್ದರು..

Untitled-1
Published on

ಮಂಗಳೂರು: ಈ ಖದೀಮರು ಮೂಲತಃ ಟಿಬೆಟ್​ನವರು, ಇವರು ಬಳಸುತ್ತಿದ್ದುದು ಚೀನಾದ ನಿಷೇಧಿತ ಆ್ಯಪ್​ಗಳನ್ನು.. ಆದರೆ ಇವರ ವಂಚನಾ ಜಾಲವಿದ್ದಿದ್ದರು ಮಾತ್ರ ಭಾರತದಲ್ಲಿ.. ಹೀಗೆ ಬಹಳಷ್ಟು ಮಂದಿಗೆ ಮೋಸ ಮಾಡಿರುವ ಇಬ್ಬರು ಟಿಬೆಟಿಯನ್ನರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.

ಮುಂಡಗೋಡು ಟಿಬೆಟಿಯನ್ ಕ್ಯಾಂಪ್ ನಿವಾಸಿಗಳಾದ ಲೋಬಸಂಗ್ ಸಂಗ್ಯೆ (24), ದಪಕ ಪುಂದೇ (44) ಬಂಧಿತರು. ಮಂಗಳೂರು ಸಿಇಎನ್​ ಪೊಲೀಸರು ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇವರು ಚೀನಾದ ನಿಷೇಧಿತ ಆ್ಯಪ್ ಬಳಸಿ ವಂಚನೆ ಮಾಡುತ್ತಿದ್ದರು. ಮೊಬಿವಿಕ್​, ವಿಚಾಟ್​, ರೆಡ್​ಪ್ಯಾಕ್​ ಮುಂತಾದ ಆ್ಯಪ್​ ಬಳಸುತ್ತಿದ್ದರು ಎಂಬುದು ತಿಳಿದುಬಂದಿದೆ. ಕ್ರೆಡಿಟ್ ಕಾರ್ಡ್ ರದ್ದು ಮಾಡಿಸಲು ಮನವಿ ಮಾಡಿದವರಿಗೆ ಕರೆ ಮಾಡುತ್ತಿದ್ದ ಇವರು, ಕ್ಯಾನ್ಸಲೇಷನ್​ಗೆ ಒಟಿಪಿ ಬರುತ್ತದೆ ಎಂದು ಹೇಳಿ ಒಟಿಪಿ ಪಡೆದು ಮೋಸ ಮಾಡುತ್ತಿದ್ದರು.

ಅತ್ತಾವರದ ಅಲೆಕ್ಸಾಂಡರ್ ಎಂಬವರ ಖಾತೆಯಿಂದ 1.12 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. ಉತ್ತರ ಪ್ರದೇಶ, ಮಹಾರಾಷ್ಟ್ರ ಮೂಲದ ಬಹಳಷ್ಟು ಖಾತೆಗಳಲ್ಲಿ ಹಣ ವರ್ಗಾವಣೆ ಮಾಡಿರುವ ಮಾಹಿತಿಯೂ ಇದೆ. ಇವರು ವಂಚನೆ ಬಳಿಕ ಇಂಡಿಯನ್ ಕರೆನ್ಸಿಯನ್ನು ಟಿಬೆಟ್​ ಕರೆನ್ಸಿ ಆಗಿ ಬದಲಿಸಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net