4 ತಿಂಗಳಲ್ಲಿ ರೂ. 32ರಿಂದ 214ಕ್ಕೆ ಷೇರು ಏರಿಕೆ: ಒಂದೇ ತಿಂಗಳಲ್ಲಿ 146ಕ್ಕೆ ಕುಸಿತ, 180ಕ್ಕೆ ಹೆಚ್ಚುತ್ತದೆ ಎನ್ನುತ್ತದೆ ತಜ್ಞರು

ireda-3
Published on

ಮುಂಬೈ: ಇಂಡಿಯನ್ ರಿನ್ಯೂವಬಲ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿ ಲಿಮಿಟೆಡ್ (ಇರೇಡಾ- Indian Renewable Energy Development Agency Ltd) ಷೇರುಗಳ ಬೆಲೆಯಲ್ಲಿ ನಿರಂತರ ಕುಸಿತ ಕಂಡುಬಂದಿದೆ.

ಮಂಗಳವಾರ ಈ ಷೇರುಗಳ ಬೆಲೆ 4% ರಷ್ಟು ಕುಸಿತ ಕಂಡು 146.80 ರೂಪಾಯಿ ತಲುಪಿತು. ಈ ಕಂಪನಿ ಷೇರುಗಳ ಬೆಲೆ ಕಳೆದ ಒಂದು ತಿಂಗಳಲ್ಲಿ ಶೇ. 30ರಷ್ಟು ಕುಸಿದಿದೆ.

ಸಾರ್ವಕಾಲಿಕ ಗರಿಷ್ಠ ಬೆಲೆಯನ್ನು ನಂತರ ಈ ಸ್ಟಾಕ್ ನಿರಂತರವಾಗಿ ಕೆಳಮುಖವಾಗಿ ಹೋಗುತ್ತಿದೆ. ಪ್ರತಿದಿನ ಕುಸಿತವನ್ನು ಕಾಣುತ್ತಿದೆ. ಕಳೆದ ಫೆಬ್ರವರಿ 06 ರಂದು ಈ ಷೇರಿನ ಬೆಲೆ 214.80 ರೂಪಾಯಿ ತಲುಪಿ, ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತ್ತು. ಈ ಷೇರುಗಳ ಸಾರ್ವಕಾಲಿಕ ಕನಿಷ್ಠ ಬೆಲೆ 50 ರೂಪಾಯಿ ಇದೆ.

ಈ ವರ್ಷ ಜೂನ್ 29 ರವರೆಗೆ 66 ಕಂಪನಿಗಳ 460 ಕೋಟಿ ಷೇರುಗಳು ವಹಿವಾಟಿಗೆ ಅರ್ಹವಾಗುತ್ತವೆ, ಏಕೆಂದರೆ ವಿವಿಧ ಕಾಲಮಾನಗಳಲ್ಲಿ ಆಯಾ ಷೇರುದಾರರು ಲಾಕ್-ಇನ್‌ಗಳನ್ನು ತೆರೆಯುತ್ತಾರೆ. ಇಂತಹ ಷೇರುಗಳ ಪೈಕಿ ಮೂರನೇ ಒಂದು ಭಾಗದಷ್ಟು ಷೇರುಗಳು ಅಥವಾ 147.8 ಕೋಟಿ ಷೇರುಗಳು ಒಂದೇ ಒಂದು ಕಂಪನಿಯಾದ ಇರೇಡಾಗೆ ಸೇರಿವೆ.

ನುವಾಮಾ ಆಲ್ಟರ್ನೇಟಿವ್ ಮತ್ತು ಕ್ವಾಂಟಿಟೇಟಿವ್ ರಿಸರ್ಚ್‌ನ ಟಿಪ್ಪಣಿಯ ಪ್ರಕಾರ, ಇರೇಡಾದ ಐದು ಮತ್ತು ಆರು ತಿಂಗಳ ಲಾಕ್-ಇನ್ ಅವಧಿಯು ಮೇ 30 ರಂದು ಕೊನೆಗೊಂಡಾಗ 147.8 ಕೋಟಿ ಷೇರುಗಳನ್ನು ಅಥವಾ ಅದರ ಬಾಕಿ ಉಳಿದಿರುವ ಷೇರಿನ 55% ರಷ್ಟು ವಹಿವಾಟಿಗೆ ಅರ್ಹತೆಯನ್ನು ಪಡೆಯುತ್ತವೆ.

ಇರೇಡಾ ಷೇರುಗಳು ಕಳೆದ ವರ್ಷ ನವೆಂಬರ್‌ನಲ್ಲಿ 32 ರೂಪಾಯಿ ಐಪಿಒ ಬೆಲೆಯಲ್ಲಿ ಸ್ಟಾಕ್ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ್ದವು. ನಂತರ ಅತಿ ಕಡಿಮೆ ಅವಧಿಯಲ್ಲಿ ದಾಖಲೆಯ ಗರಿಷ್ಠ ಬೆಲೆಯಾದ 214.8 ರೂಪಾಯಿಗೆ ಏರಿಕೆ ಕಂಡಿದ್ದವು. ಆದರೀಗ, ಈ ಗರಿಷ್ಠ ಮಟ್ಟದಿಂದ 30% ರಷ್ಟು ಕುಸಿತ ಕಂಡಿವೆ. ಇತ್ತೀಚಿನ ಕುಸಿತದ ಹೊರತಾಗಿಯೂ, ಷೇರುಗಳು ಬೆಲೆಯ ಐಪಿಒ ಬೆಲೆಯಾದ 32 ರೂಪಾಯಿಗಿಂತ 358% ರಷ್ಟು ಹೆಚ್ಚಾಗಿದೆ.

ಈ ಷೇರುಗಳು ಒಂದು ತಿಂಗಳವರೆಗೆ 135 ಮತ್ತು 180 ರೂಪಾಯಿ ವ್ಯಾಪ್ತಿಯಲ್ಲಿ ವಹಿವಾಟು ನಡೆಸುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net