More

    4 ದಿನಗಳ ಗೆಲುವಿನ ಓಟಕ್ಕೆ ಬ್ರೇಕ್​: ಸೂಚ್ಯಂಕ 195 ಅಂಕ ಕುಸಿತ

    ಮುಂಬೈ: ದುರ್ಬಲ ಜಾಗತಿಕ ಪ್ರವೃತ್ತಿಗಳು ಮತ್ತು ವಿದೇಶಿ ನಿಧಿಯ ಹೊರಹರಿವಿನ ನಡುವೆ ಐಟಿ ಮತ್ತು ಎಫ್‌ಎಂಸಿಜಿ ಷೇರುಗಳಲ್ಲಿನ ನಷ್ಟದಿಂದಾಗಿ ಮಂಗಳವಾರ ಷೇರು ಸೂಚ್ಯಂಕಗಳು ಕುಸಿತ ಕಾಣುವ ಮೂಲಕ ಷೇರು ಮಾರುಕಟ್ಟೆಯ 4 ದಿನಗಳ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕ 195.16 ಅಂಕಗಳು ಅಥವಾ ಶೇಕಡಾ 0.26 ರಷ್ಟು ಕುಸಿದು 73,677.13 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ ಸೂಚ್ಯಂಕವು 460.04 ಅಂಕಗಳಷ್ಟು ಕಡಿಮೆಯಾಗಿ 73,412.25 ಕ್ಕೆ ಕುಸಿದಿತ್ತು.

    ನಿಫ್ಟಿ ಸೂಚ್ಯಂಕವು 49.30 ಅಂಕಗಳು ಅಅಥವಾ 0.22 ರಷ್ಟು ಕುಸಿದು 22,356.30 ಕ್ಕೆ ತಲುಪಿತು.

    ನಾಲ್ಕು ದಿನಗಳ ಗೆಲುವಿನ ಓಟದ ನಂತರ ಸೋಮವಾರ ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕಗಳು ಜೀವಮಾನದ ಗರಿಷ್ಠ ಪ್ರಮಾಣವನ್ನು ಮಟ್ಟಿದ್ದವು.

    “ಚೀನಾದಿಂದ ಗಮನಾರ್ಹವಾದ ಉತ್ತೇಜಕ ಕ್ರಮಗಳ ಅನುಪಸ್ಥಿತಿಯು ಮಾರುಕಟ್ಟೆಯ ಭಾವನೆಯನ್ನು ಮತ್ತಷ್ಟು ಕುಗ್ಗಿಸಿತು” ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

    ಪ್ರಮುಖ ಷೇರುಗಳ ಪೈಕಿ, ಬಜಾಜ್ ಫಿನ್‌ಸರ್ವ್ ಮತ್ತು ಬಜಾಜ್ ಫೈನಾನ್ಸ್ ತಲಾ 4 ಪ್ರತಿಶತದಷ್ಟು ಕುಸಿದವು. ನೆಸ್ಲೆ, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಸಿಎಲ್ ಟೆಕ್ನಾಲಜೀಸ್, ಲಾರ್ಸನ್ ಆ್ಯಂಡ್​ ಟೂಬ್ರೊ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಪ್ರಮುಖ ಹಿಂದುಳಿದವು. ಭಾರ್ತಿ ಏರ್‌ಟೆಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸನ್ ಫಾರ್ಮಾ ಮತ್ತು ಎನ್‌ಟಿಪಿಸಿ ಷೇರುಗಳು ಲಾಭ ಗಳಿಸಿದವು.

    ಪ್ರಯಾಣಿಕ ಮತ್ತು ವಾಣಿಜ್ಯ ವಾಹನ ವ್ಯವಹಾರಗಳನ್ನು ಎರಡು ಪಟ್ಟಿ ಮಾಡಲಾದ ಘಟಕಗಳಾಗಿ ವಿಭಜಿಸುವ ಘೋಷಣೆ ಮಾಡಿದ ಟಾಟಾ ಮೋಟಾರ್ಸ್ ಕಂಪನಿಯ ಷೇರುಗಳು ದಿನದ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟಕ್ಕೆ ರ್ಯಾಲಿ ಮಾಡಿದ ನಂತರ ಶೇಕಡಾ 3.52 ರಷ್ಟು ಏರಿಕೆ ಕಂಡವು.

    ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.63 ರಷ್ಟು ಕುಸಿಯಿತು. ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.17 ರಷ್ಟು ಕುಸಿಯಿತು.

    ವಲಯವಾರು ಸೂಚ್ಯಂಕಗಳ ಪೈಕಿ ಐಟಿ ಶೇ.1.61, ಎಫ್‌ಎಂಸಿಜಿ ಶೇ.1.02, ಟೆಕ್ ಶೇ.0.89, ಕ್ಯಾಪಿಟಲ್ ಗೂಡ್ಸ್ ಶೇ.0.37 ಮತ್ತು ಗ್ರಾಹಕ ಬೆಲೆಬಾಳುವ ವಸ್ತುಗಳು ಶೇ.0.36ರಷ್ಟು ಕುಸಿದವು. ಗ್ರಾಹಕ ವಿವೇಚನೆ, ಇಂಧನ, ದೂರಸಂಪರ್ಕ, ಉಪಯುಕ್ತತೆಗಳು ಮತ್ತು ಆಟೋ ವಲಯದ ಷೇರುಗಳು ಲಾಭ ಗಳಿಸಿದವು.

    ಏಷ್ಯಾದ ಮಾರುಕಟ್ಟೆಗ ಪೈಕಿ, ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ಕುಸಿತ ಕಂಡರೆ, ಶಾಂಘೈ ಲಾಭ ಮಾಡಿತು. ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಸೋಮವಾರ ಅಮೆರಿಕದ ಮಾರುಕಟ್ಟೆಗಳು ನಷ್ಟದಲ್ಲಿ ಮುಂದುವರಿದವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 564.06 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts