More

    ಟಾಟಾ ಷೇರು ಬೆಲೆ ಕುಸಿತ ಸಾಧ್ಯತೆ: ಮಾರಾಟ ಮಾಡಲು ಬ್ರೋಕರೇಜ್​ ಸಂಸ್ಥೆಯ ಸಲಹೆ

    ಮುಂಬೈ: ಟಾಟಾ ಗ್ರೂಪ್‌ನ ಸ್ಟೀಲ್ ಕಂಪನಿ ಟಾಟಾ ಸ್ಟೀಲ್‌ನ ಷೇರುಗಳು ಈ ದಿನಗಳಲ್ಲಿ ಗಮನಸೆಳೆಯುತ್ತಿವೆ. ಮಂಗಳವಾರದಂದು ಟಾಟಾ ಸ್ಟೀಲ್ ಷೇರುಗಳ ಬೆಲೆ 1% ನಷ್ಟು ಕುಸಿದು ರೂ.151.85 ರೂಪಾಯಿ ತಲುಪಿತು.

    ವಿದೇಶಿ ಬ್ರೋಕರೇಜ್ ಸಂಸ್ಥೆ CLSA ಈ ಷೇರಿನ ಮೇಲಿನ ರೇಟಿಂಗ್ ಅನ್ನು ‘ಔಟ್ ಪರ್ಫಾರ್ಮ್’ ನಿಂದ ‘ಮಾರಾಟ’ಕ್ಕೆ ಇಳಿಸಿದೆ. ಬ್ರೋಕರೇಜ್ ಸಂಸ್ಥೆಯ ಪ್ರಕಾರ, ಇದರ ಗುರಿ ಬೆಲೆಯನ್ನು (ಟಾರ್ಗೆಟ್​ ಪ್ರೈಸ್​) ಪ್ರತಿ ಷೇರಿಗೆ 145 ರಿಂದ 135 ರೂಪಾಯಿ ಇಳಿಸಲಾಗಿದೆ.

    ಹೆಚ್ಚುತ್ತಿರುವ ಕಬ್ಬಿಣ ಮತ್ತು ಉಕ್ಕಿನ ಬೇಡಿಕೆಯ ಮಧ್ಯೆ, ಉಕ್ಕಿನ ಕಂಪನಿಗಳು ತಮ್ಮ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು ಕ್ಷಿಪ್ರ ವಿಸ್ತರಣೆ ಯೋಜನೆಗಳನ್ನು ಕೈಗೊಂಡಿವೆ. ಆದರೆ, ಇದು ಪೂರೈಕೆಯ ಹೆಚ್ಚುವರಿಗೆ ಕಾರಣವಾಗಬಹುದು. ಕಚ್ಚಾ ವಸ್ತುಗಳ ಬೆಲೆ ಮತ್ತು ಅಂತಿಮ ಉತ್ಪನ್ನದ ವೆಚ್ಚದ ನಡುವಿನ ವ್ಯತ್ಯಾಸ ಕಡಿಮೆಯಾಗಿದೆ ಎಂದು ಬ್ರೋಕರೇಜ್​ ಸಂಸ್ಥೆ ಹೇಳಿದೆ.

    ಡಿಸೆಂಬರ್ ತ್ರೈಮಾಸಿಕದಲ್ಲಿ ಟಾಟಾ ಸ್ಟಿಲ್​ ಕಂಪನಿ ಲಾಭ ಗಳಿಸಿದೆ. ಈ ಮೊದಲು ನಷ್ಟದಲ್ಲಿತ್ತು. ಟಾಟಾ ಸ್ಟೀಲ್ 2023-24ರ ಮೂರನೇ ತ್ರೈಮಾಸಿಕದಲ್ಲಿ 522.14 ಕೋಟಿ ರೂ. ಕ್ರೋಢೀಕೃತ ನಿವ್ವಳ ಲಾಭವನ್ನು ಗಳಿಸಿದೆ, ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 2,224 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿತ್ತು.

    3 ತಿಂಗಳಲ್ಲಿ 120%; 6 ತಿಂಗಳಲ್ಲಿ 260%; 1 ವರ್ಷದಲ್ಲಿ 336% ಹೆಚ್ಚಳ: ಟಾಟಾ ಷೇರು 4 ದಿನಗಳಿಂದ ಅಪ್ಪರ್​ ಸರ್ಕ್ಯೂಟ್‌ ಹಿಟ್ ಆಗಿದ್ದೇಕೆ?

    ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಹೂಡಿಕೆ ಇರುವ ಕಂಪನಿಯ ಐಪಿಒಗೆ ಸೆಬಿ ಅನುಮತಿ

    5 ರೂಪಾಯಿಯ ಪೆನ್ನಿ ಸ್ಟಾಕ್​ಗೆ ಭರ್ಜರಿ ಡಿಮ್ಯಾಂಡು: 15% ಏರಿಕೆಯಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts