More

    5 ರೂಪಾಯಿಯ ಪೆನ್ನಿ ಸ್ಟಾಕ್​ಗೆ ಭರ್ಜರಿ ಡಿಮ್ಯಾಂಡು: 15% ಏರಿಕೆಯಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಪೆನ್ನಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ಸವಾಲಿನ ಸಂಗತಿ. ಆದರೆ ಕೆಲವೊಮ್ಮೆ ಈ ಷೇರುಗಳು ಅತ್ಯುತ್ತಮ ಆದಾಯವನ್ನು ನೀಡುತ್ತದೆ.
    ಇಂತಹ ಪೆನ್ನಿ ಸ್ಟಾಕ್ ತನ್ನ ಹೂಡಿಕೆದಾರರಿಗೆ ಸಾಕಷ್ಟು ಆದಾಯವನ್ನು ನೀಡಿದೆ. ಇದು ಫ್ರೇಸರ್ ಆ್ಯಂಡ್​ ಕಂಪನಿ ಲಿಮಿಟೆಡ್​ (Fraser and Company Ltd) ಸಂಸ್ಥೆಯ ಷೇರು. ಈ ಷೇರುಗಳು ಮಂಗಳವಾರ ಇಂಟ್ರಾ ಡೇ ವಹಿವಾಟಿನಲ್ಲಿ 15% ರಷ್ಟು ಏರಿಕೆಯಾಗಿ 5.57 ರೂಪಾಯಿ ತಲುಪಿದವು.

    ಫ್ರೇಸರ್​ ಆ್ಯಂಡ್​ ಕಂಪನಿ ಲಿಮಿಟೆಡ್ ಷೇರುಗಳು ದೀರ್ಘಾವಧಿಯಲ್ಲಿ ಋಣಾತ್ಮಕ ಆದಾಯವನ್ನು ನೀಡಿವೆ. ಕಳೆದ ಒಂದು ವರ್ಷದಲ್ಲಿ ಈ ಷೇರು ಶೇ. 45ರಷ್ಟು ಕುಸಿದಿದೆ. ಒಂದು ವರ್ಷದ ಹಿಂದೆ ಈ ಷೇರಿನ ಬೆಲೆ 10 ರೂ. ಆಗಿತ್ತು. 2016 ರಲ್ಲಿ ಈ ಷೇರಿನ ಬೆಲೆ 62 ರೂ. ಆಗಿತ್ತು. ಅಂದರೆ ಈ ಅವಧಿಯಲ್ಲಿ ಇದುವರೆಗೆ ಶೇ. 92ರಷ್ಟು ಕುಸಿದಿದೆ.

    ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 10.59 ಮತ್ತು ಕನಿಷ್ಠ ಬೆಲೆ ರೂ 4.85 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 4.52 ಕೋಟಿ ರೂ. ಇದೆ.

    ಕಂಪನಿಗಳ ಕಾಯಿದೆ 2013 ರ ಅಡಿಯಲ್ಲಿ 1917 ರಲ್ಲಿ ಫ್ರೇಸರ್​ ಆ್ಯಂಡ್​ ಕಂಪನಿ ಲಿಮಿಟೆಡ್​ ಸ್ಥಾಪಿಸಲಾಗಿದ್ದು, ಅಂದಿನಿಂದ 100 ವರ್ಷಗಳಿಗಿಂತ ಹೆಚ್ಚು ಪೂರ್ಣಗೊಂಡಿದೆ. ಈ ಕಂಪನಿಯು ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವಸ್ತುಗಳ ಪೂರೈಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕಂಪನಿಯು ಬಿಲ್ಡರ್‌ಗಳಿಗೆ ಎಲ್ಲಾ ರೀತಿಯ ನಿರ್ಮಾಣ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತದೆ.

    84 ಪೈಸೆಯ ಪೆನ್ನಿ ಸ್ಟಾಕ್​: ಖಾದ್ಯ ತೈಲ ಕಂಪನಿಯ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​

    ಎರಡು ಸಂಸ್ಥೆಗಳಾಗಿ ವಿಭಜನೆಯಾಗಲಿದೆ ಟಾಟಾ ಮೋಟಾರ್ಸ್​: ಷೇರು ಹೂಡಿಕೆದಾರರ ಮೇಲೆ ಪರಿಣಾಮವೇನು?

    ದಾಖಲೆ ಬರೆದ ರಿಲಯನ್ಸ್​ ಷೇರು ಬೆಲೆ: ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುತ್ತಾರೆ ತಜ್ಞರು; ವಿವಿಧ ಬ್ರೋಕರೇಜ್​ ಸಂಸ್ಥೆಗಳ ಟಾರ್ಗೆಟ್​ ಪ್ರೈಸ್​ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts